ಶಿವಾನಂದ ಮಠಳಕರ್ ಬಿಜೆಪಿ ಜಿಲ್ಲಾಧ್ಯಕ್ಷರು.
ಬೀದರ: ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಶಿವಾನಂದ ಮಂಠಾಳಕರ್ ಅವರನ್ನು ಬೀದರ್ ಜಿಲ್ಲಾ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಹುಮನಾಬಾದ ತಾಲೂಕ ಅಧ್ಯಕ್ಷರಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಇವರು ಇದೀಗ ಜಿಲ್ಲಾಧ್ಯಕ್ಷರಾಗಿದ್ದಾರೆ. ಬಿಜೆಪಿ-ಕೆಜೆಪಿ ಗೊಂದಲದ ಮಧ್ಯೆ ಕೂಡ ಬಿಜೆಪಿ ಪಕ್ಷದ ಪರ ಕೆಲಸ ನಿರ್ವಹಿಸಿದ್ದ ಕಿರ್ತಿ ಇವರಿಗಿದೆ.
ಇವರ ಆಯ್ಕೆ ಪಕ್ಷದ ಅನೇಕ ಮುಖಂಡರು ಸ್ವಾಗತ ಕೋರಿದ್ದಾರೆ. ನಿಷ್ಠಾವಂತ ವ್ಯಕ್ತಿಗೆ ಉನ್ನತ ಹುದ್ದೆ ಸಿಕ್ಕಿದ್ದು ಪಕ್ಷದ ಕಾರ್ಯ ಚಟುವಟಿಕೆಗಳು ಹೆಚ್ಚಾಗಿ ನಡೆಯುವ ವಿಶ್ವಾಸ ಪಕ್ಷದ ಕಾರ್ಯಕರ್ತರು ಹೊಂದಿದ್ದಾರೆ.
Date: 31-01-2020 Time: 12:15PM
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …

















