Home ನಿಮ್ಮ ಜಿಲ್ಲೆ ಬೀದರ ರಾಜ್ಯದಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯಿಂದ ಕ್ರಾಂತಿಕಾರಿ ಹೆಜ್ಜೆ : ಸುದೀಪ್ತ ಘೋಷ್

ರಾಜ್ಯದಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯಿಂದ ಕ್ರಾಂತಿಕಾರಿ ಹೆಜ್ಜೆ : ಸುದೀಪ್ತ ಘೋಷ್

ರಾಜ್ಯದಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯಿಂದ ಕ್ರಾಂತಿಕಾರಿ ಹೆಜ್ಜೆ : ಸುದೀಪ್ತ ಘೋಷ್

ಯಾದಗಿರಿ:ಮಾ.23; ಸೆಲ್ಕೋ ಸೋಲಾರ್ ಸಂಸ್ಥೆ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಕ್ಷೇತ್ರದಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸುವ ಕಾರ್ಯ ಮಾಡುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ಬರುತ್ತಿದೆ ಎಂದು ಸೆಲ್ಕೋ ಸಂಸ್ಥೆಯ ಉಪ-ಮಹಾ ಪ್ರಬಂಧಕ ಸುದೀಪ್ತ ಘೋಷ್ ಹೇಳಿದರು.

ಯಾದಗಿರ ನಗರದ ಎನ್.ವಿ.ಎಮ್ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪತ್ರಕರ್ತರಿಗಾಗಿ ಏರ್ಪಡಿಸಿದ ಎರೆಡು ದಿನದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಸೇಲ್ಕೋ ಸಂಸ್ಥೆ ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೋಲಾರ್ ಬಳಸುವ ವ್ಯವಸ್ಥೆ ಸಂಸ್ಥೆಮಾಡುತ್ತಿದ್ದು, ಇನ್ನೂ ಹೆಚ್ಚಿನ ತಂತ್ರಜ್ಞಾನಗಳು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ವಿವಿಧ
ಸ್ವ-ಉದ್ಯೋಗ ಒದಗಿಸಲು ಸೆಲ್ಕೋ ಶ್ರಮಿಸುತ್ತಿರುವುದು ಸ್ವಾಗತಾರ್ಹ ಕಾರ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಸೋಲಾರ್ ಕ್ರಾಂತಿ ಕುರಿತು ಪರಿಣಾಮಕಾರಿಯಾಗಿ ಜನರಿಗೆ ತಿಳಿಸುವ ಕಾರ್ಯ ಮಾಡಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಉತ್ತರ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಶಿವಶರಣಪ್ಪ ವಾಲಿ ಮಾತನಾಡಿ, ಭವಿಷ್ಯದಲ್ಲಿ ಸೋಲಾರ್ ಬಳಕೆ ಮಹತ್ವ ಪಡೆಯಲ್ಲಿದೆ. ಈಗಾಗಲೇ ಸೇಲ್ಕೋ ರಾಜ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಉತ್ತಮ ಕಾರ್ಯಮಾಡುತ್ತಿದೆ. ಪತ್ರಕರ್ತರಿಗೂ ಕೂಡ ಸೋಲಾರ್ ವ್ಯವಸ್ಥೆ ಕುರಿತು ಕಾರ್ಯಗಾರ ನೀಡಿದು ಸಂತೋಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಸೌರ ಉದ್ಯಮಿ ನಿರ್ಮಲಾ ಗಾಣಾಪುರ, ಕಲಿಕ ಟ್ರಸ್ಟ್ ಗಿರೀಶ ಮಾತನಾಡಿದರು. ಸಹಾಯಕ ಪ್ರಬಂಧಕ ಕರಿಸ್ವಾಮಿ, ಶಾಖಾ ವ್ಯವಸ್ಥಾಪಕ ಗುರುರಾಜ ಕುಲಕರ್ಣಿ, ಕ್ಷೇತ್ರ ವ್ಯವಸ್ಥಾಪಕ ಯಲಾಲಿಂಗ, ಜ್ಯೋತಿ ಚಕ್ರವರ್ತಿ, ಪ್ರಸನ್ನ ಹೆಗಡೆ, ಪಾರ್ಥಸಾರಥಿ, ಮಂಜುನಾಥ ಭಾಗವತ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಪತ್ರಕರ್ತರು ಇದ್ದರು.

 

Date: 23-03-2022: www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …