Home ನಿಮ್ಮ ಜಿಲ್ಲೆ ಬೀದರ ಬ್ರಾಂಚ್ ಹಾಕುವುದೇ ಬಿಜೆಪಿ ಸಾಧನೆ : ಶಾಸಕ ಪಾಟೀಲ

ಬ್ರಾಂಚ್ ಹಾಕುವುದೇ ಬಿಜೆಪಿ ಸಾಧನೆ : ಶಾಸಕ ಪಾಟೀಲ

ಬ್ರಾಂಚ್ ಹಾಕುವುದೇ ಬಿಜೆಪಿ ಸಾಧನೆ : ಶಾಸಕ ಪಾಟೀಲ

ಹುಮನಾಬಾದ: ಕ್ಷೇತ್ರದ ಎಲ್ಲಾಕಡೆಗಳಲ್ಲಿ ಕುಳಿತುಕೊಳ್ಳುವ ಬ್ರೆಂಚ್ ಹಾಕಿದೆ ಬಿಜೆಪಿ ಪಕ್ಷದ ಸಾಧನೆಯಾಗಿದೆ ಎಂದು ಶಾಸಕ ರಾಜಶೇಖರ ಪಾಟೀಲ ವ್ಯಂಗ್ಯವಾಡಿದರು.

ತಾಲೂಕಿನ ಬೊರಂಪಳ್ಳಿ ಗ್ರಾಮದಲ್ಲಿ ಏರ್ಪಡಿಸಿದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ವೃತ್ತಗಳಲ್ಲಿ ಬ್ರೆಂಚ್ ಹಾಕುವುದೇ ಸಾಧನೆ‌ ಎಂದರೆ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಎಲ್ಲಾ ಕಡೆಗಳಲ್ಲಿ ಬ್ರೆಂಚ್ ಹಾಕಿಸುವ ಕೆಲಸ ನಾನು ಮಾಡಬಹುದು ಎಂದ ಅವರು, ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿ ಕಾರ್ಯಗಳಿಗೆ ಹಚ್ಚಿನ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ತಲಾ ಹತ್ತು ಕೆಜಿ ಅಕ್ಕಿ, 200 ಯುನಿಟ್ ಉಚಿತ ವಿದ್ಯುತ್, ಮನೆಯ ಪ್ರಮುಖ ಮಹಿಳೆಗೆ ಎರೆಡು ಸಾವಿರ ಹಣ ಸೇರಿದಂತೆ ವಿವಿಧ ಘೋಷಣೆಗಳು ಸರ್ಕಾರ ಬಂದ 24 ಗಂಟೆಗಳಲ್ಲಿ ಜಾರಿ ಆಗುತ್ತವೆ ಎಂದು ತಿಳಿಸಿದರು.

ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳು ನೀಡಿದ್ದಾರೆ. ಕಾರಣ ಕಾಂಗ್ರೆಸ್‌ ಪಕ್ಷಕ್ಕೆ‌ ಬೆಂಬಲ ನೀಡಬೇಕು. ಗ್ರಾಮಗಳಗೆ ಭೇಟಿನೀಡುವ ಇತರೆ ಪಕ್ಷದ ಮುಖಂಡರು ನಿಮ್ಮ ಗ್ರಾಮಗಳ ಅಭಿವೃದ್ಧಿಗಾಗಿ ಯಾವ ಏನ್ನು‌ ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಕೆಲವರು ರಾಜಕೀಯವಾಗಿ ಮಾತಾಡಿ‌ ಜನರ ಮಧ್ಯೆ ಗೊಂದಲ ಮೂಡಿಸುತ್ತಿದ್ದು, ಯಾರು ಏನ್ನು ಕೆಲಸ ಮಾಡಿದ್ದಾರೆ ಎಂದು ಜನರು ತಿಳಿದುಕೊಂಡು ಮುಂದಿನ‌ ಚುನಾವಣೆಯಲ್ಲಿ ಮತ ಚಲಾಯಿಸಬೇಕು‌ ಎಂದರು.

ಅಭಿಷೇಕ್ ಪಾಟೀಲ, ಕೇಶವರಾವ ತಳಘಟಕರ್, ದೀಲಿಪಕುಮಾರ ಬಗದಲ್ಕರ್, ರೇವಣ್ಣಸಿದ್ದಪ್ಪ ಪಾಟೀಲ, ಪ್ರಭುರಾವ ತಾಳಮಡಗಿ, ಸುದ್ದು ಪಾಟೀಲ ಬೇಳಕೆರಾ, ಶಾಲೀವಾನ ಪೊಲೀಸ್ ಪಾಟೀಲ, ಗ್ರಾಪಂ ಅಧ್ಯಕ್ಷೆ ಪ್ರೀಯಾಂಕಾ ಜಮಾದರ, ಶರಣಪ್ಪ ಮಾ ಲೇ, ಅರುಣಕುಮಾರ ಕುರಣೆ, ಉಮೇಶ ಜಮಗಿ, ಬಾಬುರಾವ ಅರ್ಜಿ, ಸುಭಾಶ‌ ವರ್ಮಾ, ಸುರೇಶ ದೇವಣಿ, ಅಪ್ಸರ್ ಮಿಯ್ಯಾ, ರುದ್ರಮುನಿ, ರಾಜಕುಮಾರ ಖ್ಯಾಲಪ್ಪ, ಕಂಠೆಪ್ಪ ಮಾಲಿ ಪಾಟೀಲ, ಬಾಬುರಾವ ಪರಮಶೇಟ್ಟಿ, ಬಸವರಾಜ ಶಿಂಧೆ ಸೇರಿದಂತೆ ಅನೇಕರು ಇದ್ದರು.

 

Date: 27-02-2023 www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …