ಬೀದರ: ಟನ್ ಕಬ್ಬಿಗೆ 2250 ರೂ. ನಿಗದಿ
ಬೀದರ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ನೇತೃತ್ವದಲ್ಲಿ ಶನಿವಾರ ನಡೆದ ಕಬ್ಬು ಕಾರ್ಖಾನೆಗಳ ಆಡಳಿತ ಮಂಡಳಿ ಮುಖ್ಯಸ್ಥರ ಸಭೆಯಲ್ಲಿ ಪ್ರಸಕ್ತ ಸಾಲಿನ ಹಂಗಾಮಿಗೆ ಕಬ್ಬು ಪೂರೈಕೆ ಮಾಡುವ ರೈತರಿಗೆ ಪ್ರತಿ ಟನ್ ಕಬ್ಬಿಗೆ 2250 ರೂ. ನಿಗದಿಗೊಳಿಸಲಾಗಿದೆ.
ಕಳೆದ ವರ್ಷ ಟನ್ ಕಬ್ಬಿಗೆ ಎಫ್‌ಆರ್‌ಪಿ ದರದಂತೆ 1900 ರೂ. ನೀಡಲಾಗಿದ್ದು, ಈ ವರ್ಷವೂ ಅದೇ ದರ ನೀಡುತ್ತೇವೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ವಿವಿಧ ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರು ಹೇಳಿದರು. ಆದರೆ, ಸಚಿವ ಪ್ರಭು ಚವ್ಹಾಣ್ ಟನ್ ಕಬ್ಬಿಗೆ 2700 ರೂ. ನೀಡುವಂತೆ ಕಾರ್ಖಾನೆಗಳ ಮುಖ್ಯಸ್ಥರಿಗೆ ತಿಳಿಸಿದರು.
ಈ ಮಧ್ಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಟನ್ ಕಬ್ಬಿಗೆ 2500 ರೂ. ನೀಡುವಂತೆ ಆಗ್ರಹಿಸಿದರು. ಈ ನಡುವೆ ಕಾರ್ಖಾನೆ ಅಧ್ಯಕ್ಷರ ಜೊತೆ ಚವ್ಹಾಣ್ ಮಾತುಕತೆ ನಡೆಸಿ ಟನ್ ಕಬ್ಬಿಗೆ 2250 ರೂ. ನೀಡಬೇಕು ಎಂದು ಘೋಷಿಸಿದರು. ಅದಕ್ಕೆ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಸಹಕಾರ ಹಾಗೂ ಲಿಮಿಟೆಡ್ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು. ಆದರೆ, ಕೆಲ ರೈತರು ಏಕಾಏಕಿ ನೀವೆ ದರ ಫಿಕ್ಸ್ ಮಾಡಿ ಘೋಷಿಸಿಬಿಟ್ಟರೆ ಹೇಗೆ? ಈ ವರ್ಷ ಕಬ್ಬು ಬೆಳೆ ಕಡಿಮೆ ಇದ್ದು, 2600 ರೂ.ಗಿಂತ ಹೆಚ್ಚಿಗೆ ಕೊಟ್ಟರೆ ಮಾತ್ರ ಜಿಲ್ಲೆಯ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತೇವೆ. ಇಲ್ಲದಿದ್ದರೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದರು.
ಸಭೆಯಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಉಮಾಕಾಂತ್ ನಾಗಮಾರಪಳ್ಳಿ, ಕಿಸಾನ್ ಸಕ್ಕರೆ ಕಾರ್ಖಾನೆಯ ನಸೀಮೊದ್ದಿನ್ ಪಟೇಲ್, ಅಮರ್ ಖಂಡ್ರೆ ಸೇರಿದಂತೆ ಇತರೆ ಕಾರ್ಖಾನೆ ಮಾಲೀಕರು ಉಪಸ್ಥಿತರಿದ್ದರು.
Date:07-12-2019 Time:7:00PM
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …

















