ಬೀದರ್ ನಗರಸಭೆ : ವಾರದಲ್ಲಿಯೇ ನೂತನ ಆಯುಕ್ತರು ವರ್ಗಾವಣೆ.!
ಬೀದರ್ ನಗರಸಭೆ : ವಾರದಲ್ಲಿಯೇ ನೂತನ ಆಯುಕ್ತರು ವರ್ಗಾವಣೆ.!
ಬೀದರ: ಮಾ.09: ರಾಜ್ಯದಲ್ಲಿ ಸಚಿವರು ಬದಲಾದಂತೆ ಇಲ್ಲಿ ಅಧಿಕಾರಿಗಳು ಬದಲಾಗುತ್ತಿದ್ದಾರೆ. ಕಳೆದ ಭಾನುವಾರವೇ ಬೀದರ್ ನಗರ ಸಭೆಯ ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅಧಿಕಾರಿ ಮೂರುದಿನದಲ್ಲಿ ಮತ್ತೆ ವರ್ಗಾವಣೆಗೊಂಡಿದ್ದು, ಕುತೂಹಲ ಕೆರಳಿಸಿದೆ.
ದಿನಾಂಕ: 02-03-2022ರಂದು ಬೀದರ ನಗರ ಸಭೆ ಆಯ್ತರಾಗಿ ಆದೇಶ ಬಂದಿತ್ತು. ಅಧಿಕಾರ ಸ್ವೀಕರಿಸಿದ ಮೂರುದಿನಗಳಲ್ಲಿಯೇ ದಿನಾಂಕ 08-03-2022ರಂದು ಪರಿಸರ ಅಭಿಯಂತರರಾದ ಪ್ರಬುದ್ದ ಕಾಂಬ್ಳೆ ಅವರನ್ನು ನೂತನ ಪ್ರಭಾರ ಆಯುಕ್ತರಾಗಿ ನೇಮಕಗೊಳ್ಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎಲ್.ಪ್ರಸಾದ್ ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ವಾರದಲ್ಲಿಯೇ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಗೊಂಡರೆ ಏನು ಗತಿ? ಎಂದು ಅಧಿಕಾರಿಗಳು ಮಾತಾಡಿಕೊಳ್ಳುತ್ತಿದ್ದಾರೆ.
ಶಿವರಾಜ್ ರಾಠೋಡ್ ಮೂಲತಃ ಕೆಎಂಎಎಸ್ ಅಧಿಕಾರಿಯಾಗಿದ್ದು, ಅವರು ಹುದ್ದೆಗೆ ಸೂಕ್ತವಾಗಿದ್ದರೂ ಕೂಡ ಆ ಹುದ್ದೆಗೆ ಸಂಬಂಧವಿಲ್ಲದ ಅಧಿಕಾರಿಯನ್ನು ಆಯುಕ್ತರಾಗಿ ನೇಮಕ ಗೊಳಿಸಿದ್ದು ಅನೇಕ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅನೇಕರು ಅನೇಕ ರೀತಿಯಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ.
ವಾರದಲ್ಲಿ ಅಧಿಕಾರಿಗಳು ಬದಲಾಗುತ್ತಿರುವ ಕುರಿತು ಜಿಲ್ಲೆಯ ಉಸ್ತುವಾರಿ ಸಚಿವರು ಉತ್ತರ ನೀಡಬೇಕಿದೆ. ಉನ್ನತ ಹುದ್ದೆಗಾಗಿ ಭಾರಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಇದಕ್ಕೆಲ್ಲಾ ಸಂಬಂಧಿಸಿದವರು ಸೂಕ್ತ ಉತ್ತರ ನೀಡಬೇಕಾಗುತ್ತದೆ.
Date: 08-03-2022 : www.kknewsonline.in
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















