Home ನಿಮ್ಮ ಜಿಲ್ಲೆ ಬೀದರ ಬೀದರ್:ರಾಜ್ಯದ ಅಂಗನವಾಡಿ ಮಕ್ಕಳಿಗಿಲ್ಲ ಹಾಲು..ಸರ್ಕಾರ ಟೆಕ್ ಅಪ್ ಆದ್ರು ಹಣವಿಲ್ಲದೆ ಬಡವಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಬೀದರ್:ರಾಜ್ಯದ ಅಂಗನವಾಡಿ ಮಕ್ಕಳಿಗಿಲ್ಲ ಹಾಲು..ಸರ್ಕಾರ ಟೆಕ್ ಅಪ್ ಆದ್ರು ಹಣವಿಲ್ಲದೆ ಬಡವಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಸಂಕಷ್ಟದಲ್ಲಿ ಅಂಗನವಾಡಿ ಮಕ್ಕಳು..ಹಾಲಿನ ಪುಡಿಗಾಗಿ ಕೆಎಂಎಪ್ ಗೆ ಹಣ ಪಾವತಿಸಲು ಇಲಾಖೆ ಬಳಿ ಹಣವೇ ಇಲ್ಲಾ..!!
ಬೀದರ್:ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಅಂಗನವಾಡಿ ಕೆಂದ್ರಗಳಲ್ಲಿ ಮಕ್ಕಲೀಗೆ ಪೌಷ್ಟಿಕ ಹಾಲಿಲ್ಲ ತತ್ತಿ ಸರಬುರಾಜು ಇಲ್ಲಾ..ಕಳೆದ ಹಲವು ತಿಂಗಳಿನಿಂದ ಬಜೆಟ್ ಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಪರದಾಟ ಮುಂದುವರೆದಿದೆ.ಇಲಾಖೆ ಯಾವುದೆ ಕೆಲ್ಸ್ ಕ್ಕೆ ಇಗ ಹಣವೇ ಇಲ್ಲ.ಬಜೆಟ್ ಕೊರತೆ ಅಧಿಕಾರಿಗಳೆ ಅಷ್ಟೆ ಅಲ್ಲಾ ಅಂಗನವಾಡಿ ಮಕ್ಕಳಿಗೆ ಅದರ ಬಿಸಿ ತಟ್ಟದೆ.
ಬೀದರ್ ಜಿಲ್ಲೆಯ ಎಲ್ಲಾ ಅಂಗನವಾಡಿಗಳು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿದ್ದ ಕೆಎಂಎಪ್ ಹಾಲಿನ ಪೂಡಿ ಸರಬುರಾಜು ಸಂಪೂರ್ಣವಾಗಿ ನಿಂತಿದೆ.ಕಳೆದ ಹಲವು ತಿಂಗಳಿನಿಂದ ಅಧಿಕಾರಿಗಳ ಗೋಗರೆದರು ಅವರ ಮಾತು ಇಲಾಖೆಯ ಸಚಿವರಿಗೆ ಮಾತ್ರ ಕೇಳಿಸುತ್ತಿಲ್ಲ…
ಅಂಗನವಾಡಿ ಮಕ್ಕಳಿಗೆ ಕೆಎಂಫ್ ಹಾಲಾಗಲಿ ಹಾಲಿನ ಪೌಡರಾಗಲಿ ಸರಬುರಾಜು ಬಹುತೇಕ ನಿಂತಿದೆ. ಅಂಗನವಾಡಿ ಮಕ್ಕಳು ಹಾಗೂ ಗರ್ಭಿಣಿ ಯವರು ಹಾಲಿನಿಂದ ವಂಚಿತರಾಗುತ್ತಿದ್ದಾರೆ.ಇದಕ್ಕೆ ಕಾರಣ ನಿಮ್ಮ ಇಲಾಖೆಗೆ ಬರದ ಅನುದಾನ..
ಕಳೆದ ಹಲವು ತಿಂಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಸಮಪರ್ಕವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಕೆ ಗೆ ಬರತ್ತಾ ಇಲ್ಲಾ.ಈ ಬಗ್ಗೆ ಇಲಾಖೆ ಅಧಿಕಾರಿಗಳೆ ಸಂಬಂಧ ಪಟ್ಟ ಸಚಿವರ ಗಮನಕ್ಕೆ ತಂದ್ರು ಯಾವುದೆ ಪ್ರಯೋಜನೆ ವಾಗಿಲ್ಲ.
ಯಾಕೀ ಅವಾಂತರ:
ಕಾಂಗ್ರೆಸ್ ಸರ್ಕಾರ ಬರೋಕ್ಕೆ ಮುಂಚೆ ಇದ್ದ ಬಿಜೆಪಿ ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಮಯಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡದೆ ಇಲಾಖೆಯನ್ನ ನಿರ್ಲಕ್ಷ ಮಾಡಿರುವ ಆರೋಪವಿದೆ.ಈ ಮಧ್ಯೆ ಗ್ಯಾರಂಟಿಗಳ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು 2023ರ ಮೇ.23ರಂದು ಆದೇಶ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದು ಅದರಲ್ಲಿ ಸಮಗ್ರ ಶಿಶು ಅಭಿವೃದ್ದಿ ಯೋಜನೆಯ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯಕ್ರಮವಾದ ಕ್ಷೀರಭಾಗ್ಯ,ಸೃಷ್ಟಿ ಹಾಗು ಮಾತೃಪೂರ್ಣ ಯೋಜನೆ ಅಡಿ ಬಿಡುಗಡೆ ಗೊಳಿಸವ ಮೊದಲನೆ ಕಂತಿನ ಅನುದಾನದಲ್ಲಿ ಹಾಲಿನಪೂಡಿ ಸರಬುರಾಜೀಗೆ ತಿಂಗಳಿಗೆ ತಗುಲುವ ವೆಚ್ಚವನ್ನ ಮುಂಗಡವಾಗಿ ಕೆಎಂಎಫ್ ಗೆ ಪಾವತಿಸಲು ಸೂಚಿಸಿದೆ.2-23-2-24ನೇ ಸಾಲಿನಲ್ಲಿ ಪಛಷ್ಟಿಕ ಆಹಾರ ಕಾರ್ಯಕ್ರಮದ ಅಡಿಯಲ್ಲಿ ಕೆಂಎಂಎಫ್ ಹಾಲಿನ ಪೂಡಿಗೆ ತಿಂಗಳಿಗೆ ತಗುಲುವ ವೆಚ್ಚವನ್ನ ಮುಂಗಡವಾಗಿ ಪಾವತಿಸಲು ಕೆಎಂಎಫ್ ಬೇಡಿಕೆ ಇಟ್ಟಿತ್ತು.ಆದ್ರೆ ಇಲ್ಲಿಯವರೆ ಕೆಎಂಎಫ್ ನವರಿಗೆ ಮುಂಗಡವಾಗಿ ಹಣ ಪಾವತಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಸಾಧ್ಯವಾಗಿಲ್ಲ.ಇದರಿಂದಾಗಿ ಇಲ್ಲಿಯವರೆಗೆ ಮಕ್ಕಳಿಗೆ ಹಾಲಿನ ಪೂಡಿಯಾಗಲಿ ಹಾಲಾಗಲಿ ಪೂರೈಕೆಯಾಗದೆ ಸ್ಥಕಿತವಾಗಿದ್ದು ಅಂಗನವಾಡಿ ಮಕ್ಕಳು,ಗರ್ಭಿಣಿಯರು ಹಾಲಿನಿಂದ ವಂಚಿತರಾಗುತ್ತಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಇಲಾಖೆಯ ಬಾಕಿ ಹಣ ಪಾವತಿ ಮಾಡುವುದಲ್ಲದೆ ಇನ್ನೀತರ ಸರಬುರಾಜಿಗೆ ಬೇಕಿರುವ ಹಣ ಪಾವತಿಸಲು ಮುಂದಾಗುವ ಅನಿವಾರ್ಯತೆ ಎದುರಾಗಿದೆ.ಸಧ್ಯಕ್ಕಂತು ಸರ್ಕಾರ ಟೇಕ್ ಅಫಗ ಆದ್ರು ಇಲಾಖೆ ಮಾತ್ರ ಇನ್ನು ಟೇಕ್ ಅಪ್ ಆಗಿಲ್ಲ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೇವಲ ಆದೇಶ ಹೊರಡಿಸಿದ್ದಾರೆ.ಅದಕ್ಕೆ ಬೇಕಾದ ಹಣ ಮಾತ್ರ ಬಿಡುಗಡೆ ಮಾಡಿಲ್ಲ ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಅಂಗನವಾಡಿ ಮಕ್ಕಳು ಪೌಷ್ಟಿಕ ಹಾಲಿಗಾಗಿ ಪರದಾಡುವಂತಾಗಿದೆ ಅನ್ನೋದು ಸತ್ಯ…!!
ಎಲ್ಲಾ ಕಡೆ ಹಣ ಸಂದಾಯವಇಲಾಖೆಯ ಆದೇಶ ವೇನೋ ಹಾಕಿದ್ದಿರಿ.ಆದ್ರೆ ಕೆಎಂಎಫ್ ಗೆ ಮುಂಗಡವಾಗಿ ಹಣ ಕೊಡಲು ಇಲಾಖೆ ಅಧಿಕಾರಿಗಳ ಬಳಿ ಹಣವೆ ಇಲ್ಲಾ..!!
ಕೆಂಎಂಎಫ್ ಹೇಳುವುದೇನು:
ಕೆಎಂಎಫ್ ಕಲ್ಯಾಣ ಕರ್ನಾಟಕ ಬಾಗದ ಆರು ಜಿಲ್ಲೆಗಳಿಗೆ ಹಾಲಿನ ಪೂಡಿ ಪೂರೈಕೆ ಮಾಡಬೇಕು ಅಂದ್ರೆ ಅದು ಬೆಂಗಳೂರಿನಿಂದ ಬರಬೇಕು.ಅದು ನಿರಂತರವಾಗಿ ಪೂರೈಕೆ ಯಾಗಬೇಕು ಅಂದ್ರೆ ಒಂದು ತಿಂಗಳ ಹಾಲಿನ ಪೂಡಿಯ ವೆಚ್ಚವನ್ನ ಮುಂಗಡವಾಗಿ ಇಲಾಖೆ ಪಾವತಿ ಮಾಡುವಂತೆ ಸೂಚಿಸಿದೆ.ಅದರಂತೆ ಇಲಾಖೆ ಅದೇಶ ಹೊರಡಿಸಿದ್ದಾರೆ.ಆದ್ರೆ ಇಲ್ಲಿಯವರೆ ಕೆಂಎಂಎಫ್ ಗೆ ಹಣ ಮುಂಗಡವಾಗಿ ಹಾಕಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಾಧ್ಯವಾಗಿಲ್ಲ…
ಸಧ್ಯಕ್ಕೆ ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ಹಾಗೆ ಕೆಎಂಎಫ್ ಗೆ ಅನುದಾನದ ಕೊರತೆಯಿಂದಾಗಿ ಹಣ ಹಾಕಲು ಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.ಇಗ ಅಂಗನವಾಡಿಗೆ ಬರೋ ಲಕ್ಷಾಂತರ ಮಕ್ಕಳಿಗೆ ಹನಿ ಹಾಲು ಸಿಗದೆ ಮಕ್ಕಳು ವಂಚಿರತಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಗಳಿಗೆ ಸಂಬಳಕ್ಕೆ ಒಂದಿಷ್ಟು ಅನುದಾನ ಬಿಡುಗಡೆ ಯಾಗಿದೆ.ಆದ್ರೆ ಇನ್ನುಳಿದ ಎಲ್ಲಾ ಕಾರ್ಯಗಳಿಗೆ ಬರಬೇಕಾದ ಅನುದಾನ ಬಾರದ ಹಿನ್ನಲೆಯಲ್ಲಿ ಇಲಾಖೆ ಅಧಿಕಾರಿಗಳ ಪರದಾಟ ಮುಂದುವರೆದಿದೆ.ಸದ್ಯಕ್ಕೆ ಅಂಗನವಾಡಿ ಮಕ್ಕಳ ಹಾಲಿಗೂ ಕುತ್ತು ಬಂದಿದ್ದು ಅಂಗನವಾಡಿ ಮಕ್ಕಳು ಹಾಲಿನಿಂದ ವಂಚಿತರಾಗಿದ್ದಾರೆ.ಇದು ಬೀದರ್ ಜಿಲ್ಲೆಗೆ ಮಾತ್ರ ಈ ಸಮಸ್ಯೆ ಆಗಿರದೆ ರಾಜ್ಯದ ಬಹುತೇಕ ಅಂಗವಾಡಿ ಮಕ್ಕಳಿಗೆ ಹಾಲು ಹಾಲಿನ ಪುಡಿ ಸರಬುರಾಜು ಕೆಎಂಎಫ್ ಮುಂಗಡ ಹಣ ನೀಡದೇ ಇರೋದೆ ಕಾರಣ ಎನ್ನಲಾಗುತ್ತಿದೆ.


ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…















