ಬಸವಕಲ್ಯಾಣ: ಯುವಕನ ಕೊಲೆ
ಬೀದರ: ಕುತ್ತಿಗೆ ಕತ್ತರಿಸಿ ಯುವಕನೊಬ್ಬನ ಕೊಲೆ ಮಾಡಿದ ಘಟನೆ ಬಸವಕಲ್ಯಾಣ ಪಟ್ಟಣದಲ್ಲಿ ಗುರುವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಬಸವಕಲ್ಯಾಣ ನಗರದ ಖೂಬಾ ಕಾಲೇಜಿನ ಸಮೀಪದ ಕಟಾರೆ ಲೇಔಟ್ ಬಳಿ ಕೊಲೆ ನಡೆದಿದ್ದು, ಅಲ್ಲಾವೋದ್ದಿನ್ ತಂದೆ ಇಸ್ಮಾಯಿಲ್ (26) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಯಾರೋ ದುಷ್ಕಮಿ೯ಗಳು ಚಾಕುವಿನಿಂದ ಯುವಕನ ಹೊಟ್ಟೆಯಲ್ಲಿ ಹಾಗೂ ಕುತ್ತಿಗೆಯ ಭಾಗ ಕತ್ತರಿಸಿ ಕೊಲೆ ಮಾಡಿದ್ದು, ಈ ಕುರಿತು ಸ್ಥಳಕ್ಕೆ ಪೊಲೀಸ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
Date: 05-12-2019 Time: 11:00am
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















