ಪಡಿತರ ಚೀಟಿ ಹೊಂದಿರುವ ಕುಟುಂಬದ ಸದಸ್ಯರು ಇ-ಕೆವೈಸಿ ಮಾಡಿಸಿ
ಬೀದರ: ಬೀದರ ಜಿಲ್ಲೆಯಲ್ಲಿನ ಎಲ್ಲ ಅಂತ್ಯೋದಯ, ಆದ್ಯತಾ(ಬಿಪಿಎಲ್) ಹಾಗೂ ಆದ್ಯತೇತರ(ಎಪಿಎಲ್) ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಎಲ್ಲ ಸದಸ್ಯರು ತಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ಭೇಟಿ ಕೊಟ್ಟು ಇ-ಕೆವೈಸಿ(ಬೆರಳಚ್ಚು ಹೊಂದಾಣಿಕೆ, ಜಾತಿ ಪ್ರಮಾಣ ಪತ್ರ ಸಲ್ಲಿಕೆ ಮತ್ತು ಅಡುಗೆ ಅನಿಲ ಸಂಪರ್ಕ ಹೊಂದಿರುವ ಮಾಹಿತಿ) ಸಲ್ಲಿಸನೇಕು ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಸೂಚಿಸಿದ್ದಾರೆ.
ಇ-ಕೆವೈಸಿ ಮಾಹಿತಿ:
1) ಬಯೋ ದೃಢೀಕರಣ(ಬೆರಳಚ್ಚು ಹೊಂದಾಣಿಕೆ), ಪಡಿತರ ಚೀಟಿಯಲ್ಲಿ ಕುಟುಂಬದ ಹಿರಿಯ ಮಹಿಳೆಯನ್ನು ಕಡ್ಡಾಯವಾಗಿ ಕುಟುಂಬದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವುದು. ನಂತರ ಪಡಿತರ ಚೀಟಿಯಲ್ಲಿನ ಹಿರಿಯ ಮಹಿಳೆಗೆ ಕುಟುಂಬದ ಸದಸ್ಯರು ಆಗುವ ಸಂಬಂಧ ಸರಿಪಡಿಸುವುದು.
2) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಡಿತರ ಚೀಟಿದಾರರು ತಮ್ಮ ಕುಟುಂಬದ ಒಬ್ಬ ಸದಸ್ಯರ ಆರ್ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸುವುದು. ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಅಡುಗೆ ಅನಿಲ ಸಂಪರ್ಕ (ಗ್ಯಾಸ್ ಸಿಲೆಂಡರ್) ಹೊಂದಿರುವ ಮಾಹಿತಿ ಸಲ್ಲಿಸಬೇಕು. ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಹೊಂದಿರುವ ಮೊಬೈಲ್ ಸಂಖ್ಯೆ ಸಲ್ಲಿಸಬೇಕು.
3) ಯಾವುದೇ ಪಡಿತರ ಚೀಟಿಯಲ್ಲಿನ ಸದಸ್ಯರು ಮರಣ ಹೊಂದಿರುವ, ಎಂಡೋಸಲ್ಫಾನ್ ಪೀಡಿತ, ವಯೋವೃದ್ಧ, ಕುಷ್ಠ ರೋಗ ಮತ್ತು ಇತ್ಯಾದಿ ಕಾರಣಗಳಿಂದಾಗಿ ಬೆರಳಚ್ಚು ಹೊಂದಾಣಿಕೆ ಮಾಡಲು ಮತ್ತು ಬರಲು ಆಗದೇ ಇದ್ದಲ್ಲಿ ಮಾಹಿತಿ ನೀಡುವುದು.
4) ಇ-ಕೆವೈಸಿ ಸಂಗ್ರಹಣೆಯ ಕಾರ್ಯ ದಿನಾಂಕ: 01-12-2019ರಿಂದ 10-01-2020ರ ವರೆಗೆ ಬೆಳಗ್ಗೆ 7 ಗಂಟೆಯಿAದ ರಾತ್ರಿ 8 ಗಂಟೆಯವರೆಗೆ ಅವಕಾಶ ಇರುತ್ತದೆ. ಇ-ಕೆವೈಸಿ ಮಾಹಿತಿ ಸಂಗ್ರಹಣೆ ಕಾರ್ಯವನ್ನು ಮಾಡುವುದಕ್ಕಾಗಿ ಸರ್ಕಾರವೇ ನ್ಯಾಯಬೆಲೆ ಅಂಗಡಿಯವರಿಗೆ ಹಣ ಪಾವತಿ ಮಾಡುತ್ತಿದೆ. ಆದ್ದರಿಂದ ಪಡಿತರ ಚೀಟಿದಾರರು ಈ ಪ್ರಕ್ರಿಯೆಗೆ ಯಾವುದೇ ಹಣ ಸಂದಾಯ ಮಾಡುವ ಅವಶ್ಯಕತೆ ಇರುವುದಿಲ್ಲ. ಇದು ಸಂಪೂರ್ಣ ಉಚಿತವಾಗಿರುತ್ತದೆ.
ಇ-ಕೆವೈಸಿ ಎಲ್ಲ ಪಡಿತರ ಚೀಟಿಗಳ ಎಲ್ಲ ಸದಸ್ಯರು ಕಡ್ಡಾಯವಾಗಿ ಮಾಡಿಸಿಕೊಳ್ಳುವುದು. ಇ-ಕೆವೈಸಿ ಆಗದೇ ಇರುವಂತಹ ಪಡಿತರ ಚೀಟಿಯಲ್ಲಿಯ ಸದಸ್ಯರಿಗೆ ಮುಂಬರುವ ದಿನಗಳಲ್ಲಿ ಪಡಿತರ(ರೇಷನ್) ಲಭ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ ಹೆಚ್.ಆರ್.ಮಹಾದೇವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Date: 19-12-2019 Time:5:50PM
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















