ದೂರುಪೆಟ್ಟಿಗೆಯಲ್ಲಿ ಹಲವಾರು ಬೇಡಿಕೆಗಳು ದಾಖಲು
ಬೀದರ: ಈ ಹಿಂದೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅಳವಡಿಸಿದ ಜಿಲ್ಲಾ ಉಸ್ತುವಾರಿಗಳ ದೂರು ಪೆಟ್ಟಿಗೆಯಲ್ಲಿ ವಿವಿಧ ಭೇಡಿಕೆಗಳು ಈಡೇರಿಸುವಂತೆ ಹಲವಾರು ದೂರುಗಳು ಸಲ್ಲಿಕೆಯಾಗಿವೆ.
ತಾಲೂಕು ಮಟ್ಟದ ಅಧಿಕಾರಿಗಳು ಆಯಾ ತಾಲೂಕಿನಲ್ಲಿ ವಾಸಿಸದಿರುವ ಬಗ್ಗೆ, ಜಿಲ್ಲೆಯಲ್ಲಿ ಉಲ್ಬಣಗೊಂಡಿರುವ ಡೆಂಗ್ಯೂ, ಟೈಫಾಯಿಡ್, ಮಲೇರಿಯಾ ರೋಗಗಳ ನಿಯಂತ್ರಣ ಮತ್ತು ಜಾಗೃತಿ, ರೈತರ ಸಾಲ ಮನ್ನಾ, ರೈತರ ಕಬ್ಬಿನ ವೈಜ್ಞಾನಿಕ ಬೆಲೆ ನಿಗದಿ, ಬೆಳೆಹಾನಿ ಪರಿಹಾರ ಒದಗಿಸುವುದು, ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸುವುದು ಸೇರಿದಂತೆ ಹಲವಾರು ರೀತಿಯ ದೂರುಗಳು ಮತ್ತು ಬೇಡಿಕೆಗಳು ದೂರು ಪೆಟ್ಟಿಗೆಯಲ್ಲಿ ದಾಖಲಾಗಿವೆ.
ಇನ್ನೂ ಹಲವು ದೂರುಗಳು: ಬೀದರ–ಔರಾದ್ ಚತುಷ್ಪಥ ರಸ್ತೆ ನಿರ್ಮಾಣ, ಜಿಲ್ಲೆಯಲ್ಲಿ ಬ್ಯಾರೇಜ್ಗಳ ನಿರ್ಮಾಣ, ನಾಂದೇಡ-ಬೀದರ ರೈಲ್ವೆ ಪ್ರಾರಂಭಿಸುವುದು, ಜಿಲ್ಲೆಯ ಶೈಕ್ಷಣಿಕ ಪ್ರಗತಿ, ಮರಾಠ ಸಮುದಾಯಕ್ಕೆ ರಕ್ಷಣೆ, ಜಿಲ್ಲೆ ಮತ್ತು ನಗರದಲ್ಲಿರುವ ರಸ್ತೆ ಮತ್ತು ಚರಂಡಿ ಸ್ವಚ್ಚತೆ, ವಿದ್ಯುದ್ದೀಪ ಅಳವಡಿಸುವುದು, ಸಾರ್ವಜನಿಕ ಉದ್ಯಾನವನ ನಿರ್ವಹಣೆ, ಒಳಚರಂಡಿ ವ್ಯವಸ್ಥೆಯ ಸೂಕ್ತ ನಿರ್ವಹಣೆ, ಬಿ.ಎಸ್.ಎಸ್.ಕೆ. ಕಾರ್ಖಾನೆಯ ಪುನಶ್ಚೇತನ, ಭಾಲ್ಕಿಯಲ್ಲಿ ಜನೌಷಧಿ ಮಳಿಗೆ ಪ್ರಾರಂಭ, ಕಮಲನಗರದಲ್ಲಿ ಮಿನಿ ವಿಧಾನಸೌಧ ನಿರ್ಮಿಸುವ ಬಗ್ಗೆ, ಜಿಲ್ಲೆಯಲ್ಲಿ ಬ್ಯಾರೇಜ್ಗಳ ನಿರ್ಮಾಣ, ಕಮಲನಗರ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ನೇಮಕಾತಿ ಮಾಡಬೇಕು ಎನ್ನುವ ಕುರಿತಂತೆ ಹಲವು ರೀತಿಯ ಬೇಡಿಕೆಗಳು ಹಾಗೂ ಸಲಹೆಗಳು ಕೇಳಿ ಬಂದಿವೆ.
ಅವ್ಯವಸ್ಥೆಯ ಬಗ್ಗೆ ದೂರು: ಬಸವಕಲ್ಯಾಣದಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ, ಜಿಲ್ಲೆಯಲ್ಲಿರುವ ಪಿ.ಡಿ.ಓ., ತಲಾಟಿಗಳು ಸರಿಯಾಗಿ ಕೆಲಸ ನಿರ್ವಹಿಸದಿರುವ ಬಗ್ಗೆ, ಚಿಟಗುಪ್ಪ ಆಸ್ಪತ್ರೆಯಲ್ಲಿರುವ ಸಮಸ್ಯೆಗಳ ಬಗ್ಗೆ, ಬೀದರ ಬ್ರಿಮ್ಸ್ ಆಸ್ಪತ್ರೆಯ ಸಮಸ್ಯೆಗಳು ಮತ್ತು ಭ್ರಷ್ಟಾಚಾರ, ಹುಮನಾಬಾದ ಆಸ್ಪತ್ರೆಯ ಅವ್ಯವಸ್ಥೆ ಮತ್ತು ವೈದ್ಯರ ಅಲಭ್ಯತೆ, ಅಲ್ಲದೇ 3-4 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತ ಅವ್ಯವಹಾರ ಮಾಡುತ್ತಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು ಎನ್ನುವ ದೂರುಗಳು ಬಂದಿವೆ.
ಹಲವಾರು ಸಲಹೆಗಳು: ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ 371(ಜೆ) ಪ್ರಕಾರ ನೀಡಲಾಗುತ್ತಿರುವ ಮೀಸಲಾತಿ ನ್ಯೂನತೆಯ ಬಗ್ಗೆ, ವಿಕಲಚೇತನರಿಗೆ ಸರ್ಕಾರದ ಸೌಲಭ್ಯಗಳ ನೀಡುವಿಕೆಯಲ್ಲಿ ಎಸುಗುತ್ತಿರುವ ತಾರತಮ್ಯ, ಬೀದರ ಜಿಲ್ಲೆಯ ಭೂಮಾಪನ ಶಾಖೆಗಳನ್ನು ಆಧುನೀಕರಣಗೊಳಿಸುವುದು, ಬೀದರ ಜಿಲ್ಲೆಯ ಸಾಕ್ಷರತಾ ಪ್ರೇರಕರನ್ನು ನೇಮಕ ಮಾಡಬೇಕು ಎನ್ನುವ ಹಲವಾರು ಬೇಡಿಕೆಗಳು, ಸಚಿವರು ಅಳವಡಿಸಿರುವ ದೂರುಪೆಟ್ಟಿಗೆಯಲ್ಲಿ ದಾಖಲಾಗಿವೆ.
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















