Home ನಿಮ್ಮ ಜಿಲ್ಲೆ ಬೀದರ ಗುಂಡುರೆಡ್ಡಿ ಜನ್ಮದಿನಕ್ಕೆ ಶುಭ ಹಾರೈಸಿದ ಮಹಿಳೆಯರು.

ಗುಂಡುರೆಡ್ಡಿ ಜನ್ಮದಿನಕ್ಕೆ ಶುಭ ಹಾರೈಸಿದ ಮಹಿಳೆಯರು.

ಗುಂಡುರೆಡ್ಡಿ 42ನೇ ಜನ್ಮದಿನ- 150ಕ್ಕೂ ಅಧಿಕ ಗ್ರಾಮಗಳ ಮಹಿಳೆಯರಿಗೆ ಸೀರೆ ವಿತರಣೆ

ಗುಂಡುರೆಡ್ಡಿ 42ನೇ ಜನ್ಮದಿನ- 150ಕ್ಕೂ ಅಧಿಕ ಗ್ರಾಮಗಳ ಮಹಿಳೆಯರಿಗೆ ಸೀರೆ ವಿತರಣೆ

ಬಸವಕಲ್ಯಾಣ: ಜಿಲ್ಲಾ ಪಂಚಾಯತ ಸದಸ್ಯ ಗುಂಡುರೆಡ್ಡಿ ಅವರ 42ನೇ ಜನ್ಮ ದಿನಕ್ಕೆ ಕಲ್ಯಾಣ ಕ್ಷೇತ್ರದ ಮಹಿಳೆಯರು ಭಾನುವಾರ ಶುಭ ಹಾರೈಸಿದರು.

https://play.google.com/store/apps/details?id=kknewsonline.inಗುಂಡುರೆಡ್ಡಿ ಜನ್ಮ ದಿನ ನಿಮಿತ್ಯ ರೆಡ್ಡಿ ಅಭಿಮಾನಿ ಬಳಗದಿಂದ ತಾಲೂಕಿನ 150ಕ್ಕೂ ಅಧಿಕ ಗ್ರಾಮಗಳಲ್ಲಿ ಏಕ ಕಾಲಕ್ಕೆ ಬಡ ಕುಟುಂಬಗಳ ಮಹಿಳೆಯರಿಗೆ ಸೀರೆ ವಿತರಣೆ ಮಾಡುವ ಮೂಲಕ ಜನ್ಮ ದಿನಾಚರಣೆ ಆಚರಿಸಿದ್ದು, ಉಡುಗೊರೆ ಪಡೆದ ಮಹಿಳೆಯರು ಗುಂಡುರೆಡ್ಡಿ ಅವರನ್ನು ಆಶೀರ್ವಧಿಸಿ ಶುಭ ಹಾರೈಸಿದರು. ಸರಳ ಜನ್ಮ ದಿನಾಚರಣೆ ಆಚರಿಸಿಕೊಂಡು ಬಡವರ ಮಧ್ಯೆ ಬಂದಿರುವುದು ಸಂತಸ ತಂದಿದೆ. ಚುನಾವಣೆ ಸಂದರ್ಭದಲ್ಲಿ ಬರುವ ರಾಜಕಾರಣಿಗಳು ಮತ್ತೆ ಮುಂದಿನ ಚುನಾವಣೆಯಲ್ಲಿಯೇ ಅವರ ಮುಖ ಕಾಣುವ ಇಂತಹ ಸಂರ್ದಭದಲ್ಲಿ ಗುಂಡುರೆಡ್ಡಿ ಅವರು ಮಾತ್ರ ಸದಾ ಜನರ ಮಧ್ಯೆ ಉಳಿದುಕೊಂಡಿದ್ದಾರೆ. ಅರ್ಧ ರಾತ್ರಿಗೂ ಕೂಡ ಮನೆಬಾಗಿಲಿಗೆ ಹೋದರೆ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿ ಇವರಾಗಿದ್ದಾರೆ ಎಂದು ಅಲ್ಲಿ ನೆರೆದ ಮಹಿಳೆಯರು ಗುಂಡುರೆಡ್ಡಿ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

ಕೊರೊನಾ ಸೋಂಕು ಹರಡುವಿಕೆ ಹಾಗೂ ಮಳೆ ಹಾನಿಯಿಂದ ರೈತ ವರ್ಗ ಸಂಕಷ್ಟದಲ್ಲಿರುವ ಹಿನ್ನೇಲೆಯಲ್ಲಿ ಈ ವರ್ಷ ಅದ್ದೂರಿ ಜನ್ಮ ದಿನಾಚರಣೆ ಮಾಡಿಕೊಳ್ಳುವುದಿಲ್ಲ ಎಂದು ರೆಡ್ಡಿ ಅವರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಅಭಿಮಾನಿ ಬಳಗದಿಂದ ವಿನೂತ ರೀತಿಯಲ್ಲಿ ಜನ್ಮದಿನ ಆಚರಣೆ ಮಾಡುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಜನ್ಮ ದಿನದ ಖರ್ಚಿನಲ್ಲಿ ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡುವ ಯೋಜನೆ ರೂಪಿಸಲಾಗಿತ್ತು. ಅದು ಏಕ ಕಾಲಕ್ಕೆ ಎಲ್ಲಾಕಡೆಗಳಲ್ಲಿ ವಿತರಣೆ ನಡೆದಿದೆ ಎಂದು ಅಭಿಮಾನಿ ಬಳಗದ ಮುಖಂಡರು ಮಾಹಿತಿ ನೀಡಿದ್ದಾರೆ.

ಪ್ರತಿ ವರ್ಷ ಅಭಿಮಾನಿಗಳು, ಹಿತೈಷಿಗಳು, ರಾಜಕಿಯ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಜನ್ಮ ದಿನಾಚರಣೆ ಮಾಡುತ್ತಾ ಬಂದಿದ್ದು, ಈ ವರ್ಷ ಅತೀ ಸರಳವಾಗಿ ಅದು ಕಡು ಬಡವರೊಂದಿಗೆ ಜನ್ಮ ದಿನಾಚರಣೆ ಮಾಡಿಕೊಂಡಿದ್ದು ಸಂತೋಷ ತಂದಿದೆ. ಕಲ್ಯಾಣ ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ಸಂಚಾರ ಮಾಡುಲು ಸಾಧ್ಯವಾಗದ ಹಿನ್ನೇಲೆಯಲ್ಲಿ ಆಯಾ ಭಾಗದ ಮುಖಂಡರು ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡಿದ್ದು, ಎಲ್ಲರಿಗೂ ಮನಸಾರೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿಲ್ಲಾ ಪಂಚಾಯತ ಸದಸ್ಯ ಗುಂಡುರೆಡ್ಡಿ

ಪ್ರತಿಕ್ರಿಯೆ ನೀಡಿದ್ದಾರೆ.

Date: -01-11-2020 : www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …