Home ನಿಮ್ಮ ಜಿಲ್ಲೆ ಬೀದರ ಕ್ರೀಡೆಯಿಂದ ಮನೋಬಲ ವೃದ್ಧಿ: ನ್ಯಾ.ಪ್ರೇಮಾವತಿ ಮನಗೂಳಿ

ಕ್ರೀಡೆಯಿಂದ ಮನೋಬಲ ವೃದ್ಧಿ: ನ್ಯಾ.ಪ್ರೇಮಾವತಿ ಮನಗೂಳಿ

ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ನ್ಯಾಯಾಧೀಶರಿಂದ ಚಾಲನೆ

ಬೀದರ: ಕ್ರೀಡೆಯಿಂದ ಮನೋಬಲ ವೃದ್ಧಿಯಾಗಿ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮನಗೂಳಿ ಪ್ರೇಮಾವತಿ ಅವರು ತಿಳಿಸಿದರು.

ಬೀದರ ಪೊಲೀಸ್ ಕವಾಯತು ಮೈದಾನದಲ್ಲಿ ಡಿ.3ರಂದು ಬೀದರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿಯ ಜವಾಬ್ದಾರಿಗಳು ಹೆಚ್ಚಾಗಿವೆ. ದಿನದ 24 ಗಂಟೆಯೂ ಕೆಲಸ ನಿರ್ವಹಿಸುತ್ತಾರೆ. ಮಾನಸಿಕ ಒತ್ತಡ ನಿವಾರಿಸಲು ಕ್ರೀಡೆಗಳು ಅತ್ಯವಶ್ಯಕವಾಗಿದ್ದು, ಉಲ್ಲಾಸದಿಂದ ಕೆಲಸ ನಿರ್ವಹಿಸುವಂತಾಗಲು ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ಶ್ರೀಧರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ್, ಬೀದರ ಡಿವೈಎಸ್‌ಪಿ ಬಸವೇಶ್ವರ ಹಿರಾ, ಹುಮನಾಬಾದ ಡಿವೈಎಸ್‌ಪಿ ಮಹೇಶ್ವರಪ್ಪ, ಸಿಪಿಐ ಹುಮನಾಬಾದ್ ನ್ಯಾಮಗೌಡ, ಸಿಪಿಐ ಚಿಟಗುಪ್ಪ ಶರಣಬಸಪ್ಪ ಭಜಂತ್ರಿ, ಸಿಪಿಐ ಬಸವಕಲ್ಯಾಣ ಮಲ್ಲಿಕಾರ್ಜುನ ಯಾತನೂರ, ಸಿಪಿಐ ಔರಾದ್ ರಾಘವೇಂದ್ರ, ಸಿಪಿಐ ಭಾಲ್ಕಿ ಟೌನ್ ರಮೇಶ ಮೈಲೂರಕರ್, ಸಿಪಿಐ ಭಾಲ್ಕಿ ಗ್ರಾಮೀಣ ವಿಜಯಕುಮಾರ ಬಿರಾದಾರ ಹಾಗೂ ಇಲಾಖೆಯ ಇನ್ನಿತರ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಅಲಿಸಾಬ್ ಹಾಗೂ ಮಲ್ಲಮ್ಮ ಚೌಬೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಇದಕ್ಕೂ ಮುನ್ನ ಪೊಲೀಸ್ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಅತಿಥಿಗಳು ಗೌರವ ವಂದನೆಯನ್ನು ಸ್ವೀಕರಿಸಿದರು. ಕ್ರೀಡಾ ಜ್ಯೋತಿಯ ಆಗಮನ, ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಇದೇ ವೇಳೆ ನಡೆಯಿತು.
ಬಳಿಕ 100 ಮೀಟರ್ ಓಟ, ಗುಂಡು ಎಸೆತ, ಭಲ್ಲೆ ಎಸೆತ, ಕ್ರಿಕೆಟ್ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಜಿಲ್ಲಾ ಸಶಸ್ತç ಮೀಸಲು ಪಡೆ, ಬೀದರ, ಹುಮನಾಬಾದ್ ಹಾಗೂ ಭಾಲ್ಕಿ ಉಪ ವಿಭಾಗ ಮತ್ತು ಮಹಿಳಾ ತಂಡಗಳು ಉತ್ಸಾಹದಿಂದ ಭಾಗವಹಿಸಿದ್ದವು.

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …