ಕುಡಂಬಲ್ ಭೂಕಂಪನ: ಮನೆಯಿಂದ ಹೊರಗೆ ಓಡಿ ಬಂದ ಜನರು
ಆತಂಕ ಬೇಡ, ಧೈರ್ಯ ಇರಲಿ
ಕುಡಂಬಲ್ ಭೂಕಂಪನ: ಮನೆಯಿಂದ ಹೊರಗೆ ಓಡಿ ಬಂದ ಜನರು
ಕಸ್ತೂರಿ ಕಿರಣ ಸುದ್ದಿ
ಬೀದರ್:
ಚಿಟಗುಪ್ಪ ತಾಲ್ಲೂಕಿನ ಕುಡಂಬಲ್ ಗ್ರಾಮದಲ್ಲಿ ಭಾನುವಾರ ರಾತ್ರಿ 7 ಗಂಟೆಯಿಂದ ನಿರಂತರವಾಗಿ ಮೇಲಿಂದ ಮೇಲೆ ಹಲವು ಬಾರಿ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ ಭಾರಿ ಶಬ್ದ ಕೇಳಿಸಿದೆ.
ಗ್ರಾಮದ ಪಂಚಾಯಿತಿ ಸುತ್ತಲಿನ ಮನೆಗಳಲ್ಲಿ ಭಾರಿ ಪ್ರಮಾಣದ ಶಬ್ಧ ಕೇಳಿಸುವಾಗ ಫ್ರೀಜ್ ನಡುಗುವೆ, ಮನೆಯಲ್ಲಿಯ ಗೋಡೆಗೆ ನೇತಾಕಿದ ಫೋಟೊಗಳು ಕೆಳಗೆ ಬಿದ್ದಿವೆ.
ಭಯ, ಭೀತರಾದ ಜನರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಗ್ರಾಮದ ಪಂಚಾಯಿತಿ ಎದುರುಗಡೆಯ ಕಟ್ಟೆಯ ಮೇಲೆ ಪುರುಷರು ತಮ್ಮ ಬೈಕ್ ತೆಗೆದುಕೊಂಡು ಬಂದು ಕುಳಿತಿದ್ದಾರೆ.ಮಹಿಳೆಯರು ತಮ್ಮ ಮನೆಯ ಹೊರಗಡೆಯ ಕಟ್ಟೆಗಳ ಮೇಲೆ ನಡುಕ ಹುಟ್ಟಿಸುವ ಚಳಿಯಲ್ಲಿ ನಡುಗುತ್ತ ಮಧ್ಯ ರಾತ್ರಿ ವರೆಗೂ ಕುಳಿತು ಕಾಲ ಕಳೆಯುವಂತಾಗಿದೆ.
ತಾಲ್ಲೂಕಿನ ವ್ಯಾಪ್ತಿಯ ಶಾಮತಾಬಾದ್ ಗ್ರಾಮದಲ್ಲೂ ಕಳೆದ ಒಂದು ವರ್ಷದಿಂದ ಆಗಾಗ ಭೂಕಂಪನದ ಅನುಭವ ಆಗುತ್ತಿದೆ. ಈ ಕುರಿತು ಈಗಾಗಲೇ ಭೂ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.
ಶಾಮತಾಬಾದ ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರದ ವಿಜ್ಞಾನಿಗಳ ತಂಡ ಭೂಮಿ ಒಳಗೆ ಕಲ್ಲಿನ ಪದರಗಳು ಸರಿದಾಗ ಈ ರೀತಿ ಭೂಕಂಪನ ಮತ್ತು ಶಬ್ಧದ ಅನುಭವವಾಗುತ್ತದೆ. ಇದು ಭೂಕಂಪನವಲ್ಲ ಎಂದು ಈಗಾಗಲೇ ತಿಳಿಸಿದ್ದಾರೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಮಹೇಂದ್ರ ಕುಮಾರ ʼ ಗ್ರಾಮದಲ್ಲಿ ನಾಗರಿಕರಿಗೆ ಧೈರ್ಯ ತುಂಬಿದ್ದು, ಯಾರು ಭಯಪಡುವ ಅವಶ್ಯಕತೆ ಇಲ್ಲʼ ಎಂದು ತಿಳಿಸಿದ್ದಾರೆ.
ಆತಂಕ ಬೇಡ, ಧೈರ್ಯ ಇರಲಿ
ʼಗ್ರಾಮಸ್ಥರು ಆತಂಕ ಪಡುವ ಅವಶ್ಯಕತೆ ಇಲ್ಲ, ತಾಲ್ಲೂಕು ಆಡಳಿತ ಗ್ರಾಮದಲ್ಲಿಯೇ ಉಳಿದಿದೆ, ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ನಾಗರಿಕರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆʼ ಎಂದು ತಹಶೀಲ್ದಾರ ರವೀಂದ್ರ ದಾಮಾ ಕಸ್ತೂರಿ ಕಿರಣ ಗೆ ತಿಳಿಸಿದ್ದಾರೆ.
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…

















