Home ನಿಮ್ಮ ಜಿಲ್ಲೆ ಬೀದರ ಹಿಜಾಬ್ ಅಂತಿಮ ತೀರ್ಪು : ಜಿಲ್ಲೆಯಾದ್ಯಂತ ಒಂದು ವಾರ 144 ಸೆಕ್ಷನ್ ಜಾರಿ.

ಹಿಜಾಬ್ ಅಂತಿಮ ತೀರ್ಪು : ಜಿಲ್ಲೆಯಾದ್ಯಂತ ಒಂದು ವಾರ 144 ಸೆಕ್ಷನ್ ಜಾರಿ.

ಹಿಜಾಬ್ ಅಂತಿಮ ತೀರ್ಪು : ಜಿಲ್ಲೆಯಾದ್ಯಂತ ಒಂದು ವಾರ 144 ಸೆಕ್ಷನ್ ಜಾರಿ.


ಬೀದರ,ಮಾ/14: 
ಹೈಕೋರ್ಟ್‌ನಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಹಿಜಾಬ್ ಅಂತಿಮ ತೀರ್ಪು ಪ್ರಕಟಗೊಳ್ಳುತ್ತಿರುವ ಹಿನ್ನೆಲೆ ನಾಳೆಯಿಂದ ಒಂದು ವಾರ ಬೀದರ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಹೈಕೋರ್ಟ್‌ನಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಹಿಜಾಬ್ ಅಂತಿಮ ತೀರ್ಪು ಪ್ರಕಟಗೊಳ್ಳುತ್ತಿರುವ ಹಿನ್ನೆಲೆ ನಾಳೆಯಿಂದ ಒಂದು ವಾರ ಕಾಲ ಜಿಲ್ಲೆಯ ಎಲ್ಲಾಕಡೆಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಶಾಲಾ- ಕಾಲೇಜುಗಳಿಗೆ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಆನ್‌ಲೈನ್ ಮೂಲಕ ಅಧಿಕಾರಿಗಳ ಸಭೆ ನಡೆಸಿದ್ದು, ಶಾಲಾ- ಕಾಲೇಜುಗಳ ಬಳಿಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲು ಸೂಚನೆ ನೀಡಲಾಗುತ್ತದೆ.

ನಿಷೇದಾಜ್ಞೆ ಇರುವ ಹಿನ್ನೆಲೆಯಲ್ಲಿ ಒಂದು ವಾರ ಕಾಲ ಯಾವುದೇ ಸಭೆ-ಸಮಾರಂಭಗಳು ನಡೆಸದಂತೆ ಸೂಚಿಸಲಾಗಿದೆ. ಗುಂಪು ಗುಂಪಾಗಿ ಜನರು ಸೇರುವಂತಿಲ್ಲ. ಮಕ್ಕಳ ಜೊತೆಗೆ ಪಾಲಕರು ಕಾಲೇಜು ಪ್ರಾಂಗಣದಲ್ಲಿ ಹೋಗುವಂತಿಲ್ಲ. ಕಾಲೇಜು ಸಿಬ್ಬಂದಿಗಳು ಸೂಕ್ತ ಕಾನೂನು ಪಾಲನೆ ಮಾಡಬೇಕು ಎಂಬ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

 

Date: 14-03-2022 : Time:11:00pm  : www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …