ಶಿಕ್ಷಣ ಪಡೆದ ಶಾಲೆಯ ಋಣ ತೀರಿಸುವೆ : ಎಂಎಲ್ಸಿ ಭೀಮರಾವ ಪಾಟೀಲ
ಶಿಕ್ಷಣ ಪಡೆದ ಶಾಲೆಯ ಋಣ ತೀರಿಸುವೆ : ಎಂಎಲ್ಸಿ ಭೀಮರಾವ ಪಾಟೀಲ
ಹುಮನಾಬಾದ: ನಾನು ಶಿಕ್ಷಣ ಪಡೆದ ಶಾಲೆಯ ಋಣ ತೀರಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ ಹೇಳಿದರು.
ಪಟ್ಟಣದ ವಿವೇಕಾನಂದ ಶಿಕ್ಷಣ ಸಂಸ್ಥೆ ಹಾಗೂ ವಿವೇಕಾನಂದ ಶಿಕ್ಷಣ ದತ್ತಿ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ ನೂತನ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ ಅವರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇದೇ ಶಾಲೆಯಲ್ಲಿ ನಾನು ಪ್ರಾಥರ್ಮಿಕ ಶಿಕ್ಷಣ ಪಡೆದುಕೊಂಡಿದ್ದೇನೆ. ಮಾಣಿಕಪ್ಪ ಗಾದಾ ಅವರು ಉತ್ತರ ರೀತಿಯಲ್ಲಿ ಶಿಕ್ಷಣ ಸಂಸ್ಥೆ ಬೆಳೆಸಿಕೊಂಡು ಬಂದಿದ್ದು, ಇದೀಗ ರಮೇಶ ಗಾದಾ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ತಂದೆಯ ಮಾರ್ಗದರ್ಶನದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಶಾಲೆಯಲ್ಲಿ ನಡೆಯಲ್ಲಿ. ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ರಮೇಶ ಗಾದಾ ಮಾತನಾಡಿ, ಬಾಲ್ಯದಿಂದ ಭೀಮರಾವ ಪಾಟೀಲರು ನಾಯಕತ್ವದ ಗುಣಗಳು ಬೆಳೆಸಿಕೊಂಡು ಬಂದಿದ್ದಾರೆ. ಉತ್ತಮ ಉದ್ಯಮಿಯಾಗಿ, ಶಿಕ್ಷಣ ಕ್ಷೇತ್ರದಲ್ಲಿ ಇದೀಗ ರಾಜಕೀಯ ಕ್ಷೇತ್ರದಲ್ಲಿ ಕೂಡ ಸಾಧನೆ ಮಾಡುತ್ತಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಇಬ್ಬರು ಶಾಕರು ಇರುವ ಏಕೈಕ ಮನೆ ಎಂದು ಪಾಟೀಲ ಪರಿವಾರ ಇಂದು ರಾಜ್ಯದಲ್ಲಿ ಗುರುತಿಸಿಕೊಳ್ಳುವಂತೆ ಆಗಿದೆ ಎಂದರು. ಈ ಸಂದರ್ಭದಲ್ಲಿ ಶಾಂತವೀರ ಸಲಗಾರ ಮಾತನಾಡಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನರ ಮೆಚ್ಚಿಗೆಗೆ ಕಾರಣರಾದ ಭೀಮರಾವ ಪಾಟೀಲ ಅವರನ್ನು ಅಭಿಮಾನಿಗಳು ಬಾಹುಬಲಿ ಎಂದು ಕರೆಯುತ್ತಿದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಹೃದಯ ಇವರಲ್ಲಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿ ಮಾಣಿಕಪ್ಪ ಗಾದಾ, ನಾರಾಯಣರಾವ ಜಾಜಿ, ಸುರೆಕಾಂತ ಹಿಪ್ಪಳಗಾಂವಕಾರ್, ಅನೀಲ ಪಲ್ಲರಿ, ಡಾ| ವಿ.ಎ ಪೂಜಾರಿ, ದಯಾನಂದ ಪವಾರ, ನಾಗರಾಜ ವಾಸಗಿ, ನಾಗರಾಜ ಚಿದ್ರಿ, ಪ್ರಕಾಶ ಉದಗಿರೆ, ಕೃಷ್ಣ ಚಿದ್ರಿ, ಜಗದೀಶ ಅಗಡಿ, ಡಾ| ಗಿರಿರಾಜ ಕಠೋಳ್ಳಿ, ಮಲ್ಲಿನಾಥ ಚಿಂಚೋಳ್ಳಿ, ರೀನಾ, ವೋವೆನ್ ವೇಲ್ತಾ, ಕಾಶಿಬಾಯಿ ಪಾಟೀಲ, ಮೀನಾಕ್ಷಿ ಜಾಧವ, ಭೀಮರಾವ ಕುಲಕರ್ಣಿ, ಮಹಾದೇವ ರೆಡ್ಡಿ ಸೇರಿದಂತೆ ಅನೇಕರು ಇದ್ದರು.
Date: 04-03-2022 :
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …

















