ಪಡಿತರ ಚೀಟಿ ವಿತರಣೆಯಲ್ಲಿ ಅವ್ಯವಹಾರದ ಆರೋಪ : ತನಿಖೆಗೆ ಒತ್ತಾಯ
4605 ಆನ್‌ಲೈನ್ ಅರ್ಜಿ ಸಲ್ಲಿಕೆ – 1822 ಪರಿಶೀಲನೆ – 1346 ಅನುಮೋದನೆ
ಪಡಿತರ ಚೀಟಿ ವಿತರಣೆಯಲ್ಲಿ ಅವ್ಯವಹಾರದ ಆರೋಪ : ತನಿಖೆಗೆ ಒತ್ತಾಯ
4605 ಆನ್‌ಲೈನ್ ಅರ್ಜಿ ಸಲ್ಲಿಕೆ – 1822 ಪರಿಶೀಲನೆ – 1346 ಅನುಮೋದನೆ
ಹುಮನಾಬಾದ: ಪಡಿತರ ಚೀಟಿ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದ್ದು, ಉಳ್ಳುವರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡುತ್ತಿದ್ದಾರೆಂದು ಎಂದು ಸಾರ್ವಜನಿಕರು ನೇರವಾಗಿ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಆರೋಪಿಸುತ್ತಿದ್ದು, ಉತ್ತನ ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ.
https://play.google.com/store/apps/details?id=kknewsonline.in
ಕಳೆದ ಕೆಲ ದಿನಗಳಿಂದ ಪಟ್ಟಣದ ಆಹಾರ ಇಲಾಖೆಗೆ ಭೇಟಿನೀಡುತ್ತಿರುವ ಫಲಾನುಭವಿಗಳು ಪಡಿತರ ಚೀಟಿ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ. ಪ್ರಸಕ್ತ ವರ್ಷದಲ್ಲಿ ಹುಮನಾಬಾದ ಹಾಗೂ ಚಿಟಗುಪ್ಪ ತಾಲೂಕಿನಲ್ಲಿ ಒಟ್ಟಾರೆ 4605 ಅರ್ಜಿಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿದ್ದು, ಈ ಪೈಕಿ 1822 ಅರ್ಜಿಗಳು ಮಾತ್ರ ಆಹಾರ ಇಲಾಖೆ ಪರಿಶೀಲನೆಗೆ ತೆಗೆದುಕೊಂಡಿದೆ. ಈ ಪೈಕಿ 417 ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕರಿಸಿದೆ. ದಿನಾಂಕ 04-03-2022ರ ವರೆಗೆ ಒಟ್ಟಾರೆ 1346 ಅರ್ಜಿಗಳಿಗೆ ಮಾತ್ರ ಅನುಮೋದನೆ ನೀಡದೆ ಎಂದು ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಾರೆ, 2842 ಅರ್ಜಿಗಳ ಪರಿಶೀಲನೆ ನಡೆಯುವುದು ಬಹುತೇಕ ಅನುಮಾನವಾಗಿದ್ದು, ಪ್ರತಿನಿತ್ಯ ಫಲಾನುಭವಿಗಳು ಆಹಾರ ಇಲಾಖೆ ಕಚೇರಿಗೆ ಹಾಗು ಪಡಿತರ ಚೀಟಿ ಅರ್ಜಿಸಲ್ಲಿಸಿದ ಕೇಂದ್ರಗಳಿಗೆ ಭೇಟಿನೀಡಿ ಮಾಹಿತಿ ಪಡೆಯುತ್ತಿದ್ದಾರೆ.
![]()
ಹಣದ ವ್ಯವಹಾರ: ಪಡಿತರ ಚೀಟಿ ನೀಡುವಲ್ಲಿ ಹಣದ ವ್ಯವಹಾರ ನಡೆಯುತ್ತಿರುವ ಬಗ್ಗೆ ಅನೇಕರು ದೂರುತ್ತಿದ್ದಾರೆ. ಒಂದು ಕಾರ್ಡ್ ಅನುಮೋದನೆ ನೀಡಲು ಸರಾಸರಿ 2000 ದಿಂದ 5000 ವರೆಗೆ ಹಣ ಪಡೆಯಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಹಣ ನೀಡಿದವರಿಗೆ ಮಾತ್ರ ಕೂಡಲೇ ಕಾರ್ಡ್ ವಿತರಣೆ ಮಾಡಲಾಗುತ್ತಿದೆ ಎಂದು ಕೂಡ ಆರೋಪಿಸಲಾಗುತ್ತಿದೆ. 1500 ಕಾರ್ಡ್ಗಳಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಇಲಾಖೆಗೆ ಬಂದ ಒಟ್ಟಾರೆ ಅರ್ಜಿಗಳ ಪೈಕಿ 1346 ಅರ್ಜಿಗಳು ಯಾವ ಆಧಾರದಲ್ಲಿ ಅನುಮೋದನೆ ಮಾಡಿದ್ದಾರೆ. ಮೊದಲ ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗಿದೆಯೇ ಅಥವಾ ಹೇಗೆ ಪರಿಶೀಲನೆ ಮಾಡಿದ್ದಾರೆಂದು ಜನರು ಕೇಳುತ್ತಿದ್ದಾರೆ.
ಲಿಖಿತ ದೂರು ನೀಡಿ: ಪಡಿತರ ಚೀಟಿ ವಿತರಣೆಯ ಅವ್ಯವಹಾರ ಕುರಿತು ಆಹಾರ ಇಲಾಖೆಯ ಅಧಿಕಾರಿ ಪರಮೇಶ್ವರ ಅವರನ್ನು ವಿಚಾರಿಸಿದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ಕೆಲವರು ಹಣದ ವ್ಯವಹಾರದ ಕುರಿತು ಮೌಖಿಕವಾಗಿ ಹೇಳಿದ್ದಾರೆ. ಖಾಸಗಿ ಕೇಂದ್ರದವರ ಕುರಿತು ತಿಳಿಸಿದ್ದಾರೆ. ಆದರೆ, ಯಾರು ಕೂಡ ಅಧಿಕೃತವಾಗಿ ಲಿಖಿತ ದೂರು ನೀಡುತ್ತಿಲ್ಲ. ದೂರು ಬಂದರೆ ಕೂಡಲೇ ಕ್ರಮ ಜರುಗಿಸುತ್ತೇನೆ ಎಂದು ತಿಳಿಸಿದ್ದಾರೆ. ಸಧ್ಯ ಇಲಾಖೆಗೆ ಬಂದ ಅರ್ಜಿಗಳ ಪೈಕಿ ಒಟ್ಟಾರೆ, 1500 ಚೀಟಿ ವಿತರಣೆ ಮಾಡಲಾಗುತ್ತದೆ. ಉಳಿದಂತೆ ಮುಂದಿನ ಅವಧಿಯಲ್ಲಿ ಇದೇ ಅರ್ಜಿಗಳನ್ನು ಪರಿಶೀಲನೆಗೆ ತೆಗೆದುಕೊಂಡು ಮುಂದಿನ ಕ್ರಮ ವಹಿಸಲಾಗುತ್ತದೆ ಎಂದರು.
ಭೇಟಿನೀಡಿ ಪರಿಶೀಲನೆ: ಮುಂದಿನ ಕೆಲ ದಿನಗಳಲ್ಲಿ ಹುಮನಾಬಾದ ಕಚೇರಿಗೆ ಭೇಟಿನೀಡಿ ಖುದ್ದು ಪರಿಶೀಲನೆ ನಡೆಸುವುದಾಗಿ ಆಹಾರ ಇಲಾಖೆ ಡಿಡಿ ಬಾಬುರೆಡ್ಡಿ ಅವರು ತಿಳಿಸಿದ್ದಾರೆ.

Dtae: 05-03-2022 ::
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















