Home ನಿಮ್ಮ ಜಿಲ್ಲೆ ಬೀದರ ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಪದಾಧಿಕಾರಿಗಳ ನೇಮಕ.

ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಪದಾಧಿಕಾರಿಗಳ ನೇಮಕ.

ಗೌರವ ಅಧ್ಯಕ್ಷರಾಗಿ ಸಂದೀಪ ಬತಲಿ - ತಾಲೂಕು ಅಧ್ಯಕ್ಷರಾಗಿ ರಫಿಕ್ ಪಟೇಲ್ ನೇಮಕ.

ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಪದಾಧಿಕಾರಿಗಳ ನೇಮಕ.

ಗೌರವ ಅಧ್ಯಕ್ಷರಾಗಿ ಸಂದೀಪ ಬತಲಿ – ತಾಲೂಕು ಅಧ್ಯಕ್ಷರಾಗಿ ರಫಿಕ್ ಪಟೇಲ್ ನೇಮಕ.

ಹುಮನಾಬಾದ: ಪಟ್ಟಣದ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಕಛೇರಿಯಲ್ಲಿ ಮಂಗಳವಾರ ಸಂಘಟನೆಯ ರಾಜ್ಯ ಮುಖಂಡರಾದ ನವೀನ ಬತಲಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹುಮನಾಬಾದ ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

https://play.google.com/store/apps/details?id=kknewsonline.inಸಭೆಯಲ್ಲಿ ತಾಲೂಕು ಗೌರವ ಅಧ್ಯಕ್ಷರಾಗಿ ಸಂದೀಪ ಬತಲಿ, ತಾಲೂಕು ಅಧ್ಯಕ್ಷರಾಗಿ ರಫಿಕ್ ಪಟೇಲ್  ತಾಳಮಡಗಿ, ಉಪಾಧ್ಯಕ್ಷರಾಗಿ ಅವಿನಾಶ ಧುಮಾಳೆ ಹಾಗೂ ರೋಹನ್ ಗುಂಡು, ತಾಲೂಕು ಸಂಚಾಲಕರಾಗಿ ರಾಜು ವಳಖೆಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಕರಣ ಜಾನವೀರ್, ಸಹ ಕಾರ್ಯದರ್ಶಿಗಳಾಗಿ, ಮಹೇಶ ಕಟ್ಟಿಮನಿ, ರಾಹುಲ್ ಪರಿಟ್, ಸಿದ್ದು ರಾಂಪೂರೆ, ಖಜಾಂಚಿಯಾಗಿ ಉಮೇಶ ಕಟ್ಟಿಮನಿ, ಸದಸ್ಯರಾಗಿ ರಾಹುಲ್ ಕಟ್ಟಿಮನಿ ಹಾಗೂ ನರೇಶ ಹಣಮಂತವಾಡಿ ಅವರನ್ನು ನೇಮಕ ಮಾಡಲಾಗಿದೆ.

ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕು ಎಸ್.ಸಿ ಯುವ ಘಟಕದ ಅಧ್ಯಕ್ಷರಾಗಿ ಸೋಮಶೇಖರ ಡಾಂಗೆ, ಉಪಾಧ್ಯಕ್ಷರಾಗಿ ಅಮರ ಸಿಂಧನಕೇರಾ ಹಾಗೂ ಸುನೀಲ ಬೇಳಕೇರಾ, ಪ್ರಧಾನ ಕಾರ್ಯದರ್ಶಿಯಾಗಿ ಅರುಣ ಜಲಸಂಗಿ, ಸಹ ಕಾರ್ಯದರ್ಶಿಯಾಗಿ ಪವನ ಗಡಂವತಿ, ಸುನೀಲ ಸಿಂಧೆ, ಸಂಚಾಲಕರಾಗಿ ರಜನಿ ದುಂಬಲಗುಂಡಿ, ಸದಸ್ಯರಾಗಿ ಧನರಾಜ ಸಿಂಧನಕೇರಾ, ಸಚ್ಚಿನ ತಾಳಮಡಗಿ, ವಿಶಾಲ ಮೋಳಕೇರಾ ಅವರನ್ನು ಸಭೆಯಲ್ಲಿ ಆಯ್ಕೆಮಾಡಲಾಯಿತು. ನಂತರ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ  ರಾಜ್ಯ ಮುಖಂಡ ನವೀನ ಬತಲಿ, ಆರ್.ಚಂದ್ರಪ್ಪ ರಾಜಾಧ್ಯಕ್ಷರ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗುತ್ತಿದ್ದು, ಸಂಘಟನೆಗೆ ಆಯ್ಕೆಗೊಂಡ ನೂತನ ಪದಾಧಿಕಾರಿಗಳು ಉತ್ತಮ ಕೆಲಸ ಮಾಡುವ ಮೂಲಕ ಸಂಘಟನೆ ಹೆಸರು ಬೆಳೆಸಬೇಕು. ಜನಪರ ಸಂಘಟನೆಯಾಗಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು. ಅನ್ಯಾಯದ ವಿರುದ್ದ ಹೋರಾಟ ನಡೆಸಬೇಕು. ಇದೇ ನವೆಂಬರ್ ಅಂತ್ಯದಲ್ಲಿ ಅದ್ದೂರಿ ರಾಜ್ಯೋತ್ಸ ಕಾರ್ಯಕ್ರಮ ನಡೆಸುವ ಯೋಜನೆ ಇದ್ದು, ಎಲ್ಲಾ ಪದಾಧಿಕಾರಿಗಳು ಈ ಕುರಿತು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದ ಅವರು, ಸಂಘಟನೆಯ ಸಂಸ್ಥಾಪಕರಾದ ಗುರುರಂಜನ ಶೆಟ್ಟಿ, ಅಧ್ಯಕ್ಷರಾದ ಆರ್.ಚಂದ್ರಪ್ಪ ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಅಣ್ಣೇಪ್ಪಾ ಓಲೇಕರ್ ಅವರು ಅವರು ಸಮಯ ಸಮಯಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿದರು.

Date: 03-11-2020 : www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …