ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಹುಮನಾಬಾದ: ಪಟ್ಟಣದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಭಾನುವಾರ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಸಂಘಟನೆ ಮುಖಂಡ ನವೀನ ಬತಲಿ ಮಾತನಾಡಿ, ಕನ್ನಡ ಕಂಪು ಪಸರಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಕೆಲಸ ಮಾಡುತ್ತಿದೆ. ಕನ್ನಡಿಗರಾದ ನಾವೆಲ್ಲರೂ ನಮ್ಮ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಇತರೆ ಭಾಷೆಗಳ ಬಗ್ಗೆ ಅಭಿಮಾನ ಇರಬೇಕು ಆದರೆ, ಮೊದಲು ಕನ್ನಡ ಭಾಷೆ ಎಂಬುವುದು ನಾವುಗಳು ರೂಡಿಸಿಕೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ಆಯಾ ಭಾಗದ ಮಾತೃ ಭಾಷೆಗೆ ಮಹತ್ವ ನೀಡಿ ಮತನಾಡುತ್ತಾರೆ. ಅದೇ ರೀತಿ ಕನ್ನಡಿಗರಾದ ನಾವುಗಳು ಕೂಡ ಮೊದಲು ಕನ್ನಡ ಭಾಷೆಗೆ ಮಹತ್ವ ನೀಡಬೇಕು. ಎಂದ ಅವರು, ಜಯಕರ್ನಾಟಕ ಸಂಘಟನೆ ಮೂಲಕ ಎಲ್ಲಾ ಕಾರ್ಯಕರ್ತರು ಕನ್ನಡದ ಕಹಳೆ ಪಸರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆ ಮುಖಂಡ ಸಂದೀಪ ಬತಲಿ, ಪ್ರವೀಣ ಗುತ್ತೆದ್ದಾರ, ಅವೀನಾಶ ಧುಮಾಳೆ, ಉಮೇಶ ಕಟ್ಟಮನಿ, ಪವನ ಮದಾಳೆ, ರಾಹುಲ ಪರಿಟ್, ನವಾಬ್ ಸಾಬ್, ಕರಣ, ರಾಜು ಸೇರಿದಂತೆ ಅನೇಕರು ಇದ್ದರು.
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















