ಅಧಿಕಾರಿಗಳ ಸಮನ್ವಯ ಕೊರತೆ ಜನಸಾಮಾನ್ಯರಿಗೆ ತೊಂದರೆ.
ಬೀದರ: ಹುಮನಾಬಾದ ಪಟ್ಟಣದಲ್ಲಿನ ಪುರಸಭೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ ಎದ್ದುಕಾಣುತ್ತಿದೆ.
ಪಟ್ಟಣದಲ್ಲಿನ ತರಕಾರಿ ಮಾರಾಟಗಾರರು, ಕಿರಾಣಿ ಅಂಗಡಿಗಳ ಮಾಲೀಕರಿಗೆ ಹಾಗೂ ಹಣ್ಣಿನ ಅಂಗಡಿ ವ್ಯಾಪಾರಸ್ಥರಿಗೆ ಸಮಸ್ಯೆ ಉಂಟಾಗಿದೆ. ಯಾವ ಸಮಯದಲ್ಲಿ ವ್ಯಾಪಾರ ಮಾಡಬೇಕು ಎಂಬುದು ಗೊಂದಲ ಸೃಷ್ಟಿಯಾಗಿದೆ.
ಆಗಿದ್ದೇನು?: ಲಾಕ್ ಡೌನ್ ಆರಂಭವಾದ ದಿನದಿಂದ ಬೆಳಿಗ್ಗೆ 7:00 ಗಂಟೆಯಿಂದ 10:00 ವರೆಗೆ ತರಕಾರಿ ಹಣ್ಣು ಕಿರಾಣಿ ಅಂಗಡಿಗಳು ವ್ಯಾಪರ ನಡೆಸುತ್ತಿದ್ದರು. ಆದರೆ, ಮಂಗಳವಾರ ಪುರಸಭೆ ವತಿಯಿಂದ ಪಟ್ಟಣದ ಎಲ್ಲಾ ಕಡೆಗಳಲ್ಲಿ ಪ್ರಚಾರನಡೆಸಿ, ತರಕಾರಿ ಮಾರಾಟಗಾರರು ಆಯಾ ಬಡಾವಣೆಗೆ ಬಂದು ಮಾರಾಟ ಮಾಡುತ್ತಾರೆ. ಜನರು ಯಾರು ಹೊರಗೆ ಬರುವ ಅವಶ್ಯಕತೆ ಇಲ್ವ್ಯಾಲ. ವ್ಯಾಪಾರಸ್ಥರು ಬೆಳಿಗ್ಗೆ 10 ರಿಂದ ರಿಂದ 1 ಗಂಟೆ ವರೆಗೆ ಮಾತ್ರ ವ್ಯಾಪಾರ ನಡೆಸಬೇಕು ಎಂದು ಸೂಚನೆ ನೀಡಿದರು. ಆದರೆ, ಬುಧವಾರ ಬೆಳಿಗ್ಗೆ ಅನೇಕ ಅಂಗಡಿ ಮಾಲೀಕರು ಅಂಗಡಿ ತೆರೆಯದೆ 10 ಗಂಟೆ ನಂತರ ಅಂಗಡಿ ತೆರೆಯುವ ಆಲೋಚನೆಯಲ್ಲಿದ್ದರು, ಆದರೆ ತಹಸೀಲ್ದಾರ ನಾಗಯ್ಯಾ ಹಿರೇಮಠ ಪಟ್ಟಣದ ವ್ಯಾಪಾರ ಕೇಂದ್ರಕ್ಕೆ ಭೇಟಿ ನೀಡಿ ಪ್ರತಿನಿತ್ಯದಂತೆ ವ್ಯಾಪಾರ ವಹಿವಾಟುಗಳನ್ನು ನಡೆಸಿ ಎಂದು ತಿಳಿಸಿದರು. ಅಲ್ಲದೆ, ಪೊಲೀಸ್ ಅಧಿಕಾರಿಗಳು ಕೂಡ ಬುಧವಾರ ಪ್ರಚಾರ ನಡೆಸಿ ಪ್ರತಿ ದಿನದಂತೆ ವ್ಯಾಪರ ವಹಿವಾಟು ನಡೆಸಿ ಎಂದು ಮನವರಿಕೆ ಮಾಡುತ್ತಿರುವುದು ಕಂಡು ಬಂತು.
ಗ್ರಾಮೀಣ ಭಾಗದಿಂದ ಬರುವ ಬಡ ರೈತ ವ್ಯಾಪರಸ್ಥರನ್ನು ಅಧಿಕಾರುಗಳ ಗೊಂದಲದ ಹೇಳಿಕೆಗಳು ಸಮಸ್ಯೆಗೆ ಕಾರಣವಾಗಿದೆ. ಅಧಿಕಾರಿಗಳು ಸಮನ್ವಯ ಸಾಧಿಸಿ ಬಡ ಜನರಿಗೆ ಸೂಕ್ತ ನಿರ್ದೇಶನ ನೀಡಿ ಗೊಂದಲಗಳಿಗೆ ತೆರೆ ಎಳೆಯಬೇಕಾಗಿದೆ.
ಗ್ರಾಮೀಣ ಭಾಗದಿಂದ ಬರುವ ಬಡ ರೈತ ವ್ಯಾಪರಸ್ಥರನ್ನು ಅಧಿಕಾರುಗಳ ಗೊಂದಲದ ಹೇಳಿಕೆಗಳು ಸಮಸ್ಯೆಗೆ ಕಾರಣವಾಗಿದೆ. ಅಧಿಕಾರಿಗಳು ಸಮನ್ವಯ ಸಾಧಿಸಿ ಬಡ ಜನರಿಗೆ ಸೂಕ್ತ ನಿರ್ದೇಶನ ನೀಡಿ ಗೊಂದಲಗಳಿಗೆ ತೆರೆ ಎಳೆಯಬೇಕಾಗಿದೆ.
Date: 01-04-2020
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















