ಹುಮನಾಬಾದ್: ಬೆಳಂಬೆಳಿಗ್ಗೆ ಬೆಂಕಿ ಅವಘಡ
ಹುಮನಾಬಾದ್: ಬೆಳಂಬೆಳಿಗ್ಗೆ ಬೆಂಕಿ ಅವಘಡ
ಬೀದರ: ಹುಮನಾಬಾದ್ ಪಟ್ಟಣದಲ್ಲಿ ಬುಧವಾರ ಬೆಳಂಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದ್ದು ರಸ್ತೆಬದಿಯ 7 ಅಂಗಡಿಗಳು ಸುಟ್ಟು ಕರಕಲಾಗಿವೆ ಎಂದು ಮಾಹಿತಿ ತಿಳಿದು ಬಂದಿದೆ.
ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿನ ಪಾದರಕ್ಷೆ ಅಂಗಡಿಗಳು ಹಾಗೂ ಒಂದು ಟಿವಿ ರಿಪೇರಿ ಅಂಗಡಿ ಕೂಡ ಬೆಂಕಿಗೆ ಆಹುತಿಯಾಗಿರುವ ಬಗ್ಗೆ ತಿಳಿದುಬಂದಿದೆ.
https://play.google.com/store/apps/details?id=kknewsonline.in ಅಂಗಡಿಗಳ ಹಿಂದುಗಡೆ ಇರುವ ತಿಪ್ಪೆ ಗುಂಡಿಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದು , ಬೆಂಕಿಯ ಕೆನ್ನಾಲಿಗೆ ಏಳು ಅಂಗಡಿಗಳಿಗೆ ಹಬ್ಬಿದ ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣೆಯ ಎರಡು ವಾಹನಗಳು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.
Date:04-11-2020 : www.kknewsonline.in

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















