ಹುಮನಾಬಾದ: 12 ಮರಳು ತುಂಬಿದ ಟಿಪ್ಪರ್ ಪೊಲೀಸ್ ವಶಕ್ಕೆ
ಹುಮನಾಬಾದ: ಪಟ್ಟಣ ಹೊರ ಪ್ರದೇಶದಲ್ಲಿ ಪರವಾನಗಿ ರಹಿತ ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮರಳು ತುಂಬಿದ ಒಟ್ಟಾರೆ 12ಕ್ಕೂ ಅಧಿಕ ಟಿಪ್ಪರ ವಾಹನಗಳನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ಅವರ ಮಾರ್ಗದರ್ಶನದಲ್ಲಿ ಭಾಲ್ಕಿ ವಲಯದ ಎಎಸ್ಪಿ ಪೃಥ್ವಿಕ್ ಶಂಕರ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ, ಭಾರಿ ಪ್ರಮಾಣದ ಮರಳು ವಾಹನಗಳು ಹುಮನಾಬಾದ ಪೊಲೀಸ್ ಠಾಣಾ ಮೈದಾನದಲ್ಲಿ ನಿಲ್ಲಿಸಲಾಗಿದೆ. ಗುರುವಾರ ರಾತ್ರಿ-ಶುಕ್ರವಾರ ಬೆಳಗ್ಗಿನ ಜಾವದಲ್ಲಿ ವಾಹನ ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದ್ಈದು, ಈ ಸಂದರ್ಭದಲ್ಲಿ ಹುಮ್ನಾಬಾದ್ ಪೊಲೀಸರು ಕೂಡ ಇದ್ದರು.
ಇತ್ತೀಚೆಗೆ ಹುಮ್ನಾಬಾದ್ ತಹಸಿಲ್ದಾರ್ ಕೂಡ ಮರಳು ವಾಹನಗಳು ತಡೆದು ಪರಿಶೀಲನೆ ನಡೆಸಿ ಪೊಲೀಸರಿಗೊಪ್ಪಿಸಿದ ಘಟನೆಗಳು ಕೂಡ ನಡೆದಿತ್ತು. ಮರಳು ಮಾಫಿಯಾ ಕುರಿತು ಅನೇಕರ ವಿರುದ್ಧ ಮರಳು ವ್ಯಾಪರಸ್ಥರು ಆರೋಪಗಳು ಮಾಡಿರುವುದು ಕೇಳಿಬಂದಿತ್ತು.
12 ಓವರ್ಲೋಡ್ ವಾಹನ: ಪೊಲೀಸ್ ಅಧಿಕಾರಿಗಳು ಜಪ್ತಿಮಾಡಿದ ವಾಹನಗಳ ಪೈಕಿ 12 ಟಿಪ್ಪರ ವಾಹನಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮರಳು ತುಂಬಿರುವುದು ಕಂಡುಬಂದಿದ್ದು, ಈ ಕುರಿತು ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಬೀದರ ಪೊಲೀಸ್ ವರಿಷ್ಠಾದಿಕಾರಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















