ಶಕೀಲ್ ಐ.ಎಸ್ ಗೆ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ
ಶಕೀಲ್ ಐ.ಎಸ್ ಗೆ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ
ಹುಮನಾಬಾದ; ಜನವರಿ 15: 2020ನೇ ಸಾಲಿನ ಗುಲರ್ಬಗಾ ವಿಶ್ವವಿದ್ಯಾಲಯ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಪಟ್ಟಣದ ಡಿವೈ.ಎಸ್.ಪಿ ಕಚೇರಿಯ ಬರಹಗಾರ ಹಾಗೂ ಯುವ ಸಾಹಿತಿ ಶಕೀಲ್ ಐ.ಎಸ್ ಭಾಜನರಾಗಿದ್ದಾರೆ.
ಶಕೀಲ್ ಐ.ಎಸ್ ಪಟ್ಟಣದ ಡಿವೈಎಸ್‌ಪಿ ಕಚೇರಿಯಲ್ಲಿ ಅನೇಕ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ವಿಶ್ವ ವಿದ್ಯಾಲಯವು ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಇವರು ಬರೆದ ಬೀದರ ಜಿಲ್ಲೆಯ ಇತಿಹಾಸ ಪುಸಕ್ತವನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಪಟ್ಟಿಯಲ್ಲಿ ಹೆಸರು ಪ್ರಕಟಗೊಂಡ ಹಿನ್ನೆಲೆಯಲ್ಲಿ ಶಕೀಲ್ ಅವರು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಯುವ ಬರಹಗಾರರನ್ನು ಗುರುತಿಸುವ ಕಾರ್ಯ ಇಂದಿನ ದಿನಗಳಲ್ಲಿ ನಡೆಯುತ್ತಿರುವುದು ಹರ್ಷ ತಂದಿದೆ ಎಂದು ಹೇಳಿದ್ದಾರೆ.
ಶಕೀಲ್ ಅವರು ಈ ವರೆಗೆ ಅನೇಕ ಪುಸ್ತಗಳು ಪ್ರಕಟಿಸಿದ್ದು, ವಿವಿಧ ಸನ್ಮಾನಕ್ಕೆ ಪಾತ್ರರಾಗಿದ್ದರು. ಗ್ರಾಮೀಣ ಭಾಗದ ಬಡ ಕುಟುಂಬದಿಂದ ಬೆಳೆದುಬಂದ ಶಕೀಲ್ ಇಂದು ಉನ್ನತ ಸ್ಥಾನಕ್ಕೆ ಏರಿದ್ದು, ಅವರ ಪರಿಶ್ರಮವೆ ಮುಖ್ಯ ಕಾರಣ ಎಂದು ಇಲ್ಲಿನ ಸಾಹಿತಿಗಳು ಅಭಿಪ್ರಾಯ ಪಟ್ಟಿದ್ದಾರೆ. ಕರ್ತವ್ಯದ ಮಧ್ಯೆ ಕೂಡ ಬಿಡು ಮಾಡಿಕೊಂಡು ಅನೇಕ ಪುಸ್ತಕಗಳ ಪ್ರಕಟಣೆಮಾಡಿ ಕಿರ್ತಿ ಇವರಿಗಿದ್ದೆ ಎಂದು ತಿಳಿಸಿದ್ದಾರೆ. ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಸಾಹಿತಿಗಳು ಅಭಿನಂದನೆ ಸಲ್ಲಿಸಿದ್ದಾರೆ.
Date: 15-01-2021 :
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















