Home ನಿಮ್ಮ ಜಿಲ್ಲೆ ಬೀದರ ವಿವೇಕಾನಂದ ಪ್ರತಿಮೆ ಭಗ್ನ-ಎಬಿವಿಪಿ ಪ್ರತಿಭಟನೆ

ವಿವೇಕಾನಂದ ಪ್ರತಿಮೆ ಭಗ್ನ-ಎಬಿವಿಪಿ ಪ್ರತಿಭಟನೆ

ಬೀದರ: ನವದಹೆಲಿಯ ಜವಾಹರ ಲಾಲ್ ನೆಹರು ವಿಶ್ವ ವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಭಗ್ನ ಗೊಳಿಸಿದ ಕೃತ್ಯ ಖಂಡಿಸಿ ನಗರದಲ್ಲಿ ಜಿಲ್ಲಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.

ನಗರದ ಸರಸ್ವತಿ ಕಾಲೇಜ್ ಮುಖ್ಯ ರಸ್ತೆಯಿಂದ ಆರಂಭಗೊ0ಡ ಪ್ರತಿಭಟನಾ ರ‍್ಯಾಲಿ ನಗರದ  ಭಗತಸಿಂಗ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾನಂದರ ಪ್ರತಿಮೆ ವಿರೂಪ ಗೊಳಿಸಿರುವುದು ಎಬಿವಿಪಿ ಸಂಘಟನೆ ಖಂಡಿಸುತ್ತದೆ. ಕೂಡಲೆ ತಪ್ಪಿಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮತ್ತೆ ದೇಶದ ಯಾವುದೇ ಭಾಗದಲ್ಲಿ ನಡೆಯದಂತೆ ಸರ್ಕಾರಗಳು ನೋಡಿಕೊಳ್ಳಬೇಕು ಎಂದು ಮನವಿ ಪತ್ರದಲ್ಲಿ ವಿವಸರಿಸಲಾಗಿದೆ.

ಎಬಿವಿಪಿ ರಾಜ್ಯಸಹ ಕಾರ್ಯದರ್ಶಿ ರೇವಣಸಿದ್ದ ಜಾಡರ, ನಗರ ಕಾರ್ಯದರ್ಶಿ ವಿಕಾಸ ಚೋರಮಲ್ಲೆ, ಸಂಚಾಲಕ ನಿಖೀಲ ಹಿಂಗೆ, ಅರವಿಂದ ಸುಂದಳಕರ, ಅಮರ ಸುಲ್ತಾನಪೂರೆ, ಮಾಣಿಕರಾವ ಪಾಟಿಲ್, ವಿರೇಶ ಜಾಡರ ರೇಕುಳಗಿ, ಮುಮತಾ ಬಂಡಾರೆ, ಸಂಜಾನ, ಸಿಮಾ ಬೇಗಂ, ಅಮ್ರೀನ್, ಅಂಬಿಕಾ, ರುಹಾನ, ಆರುತಿ, ರೋಜಮೇರಿ, ನಜಮಾ,ಸ್ವಾತಿ, ಅಸರ ಬೇಗಂ, ಸರಸ್ವತಿ, ಪಾರ್ವತಿ ಸೆರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು.

 


Date: 16-11-2019

 

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …