ಲೋಕಕಲ್ಯಾಣಕ್ಕಾಗಿ ಮೌನ ಅನುಷ್ಠಾನ
ರೇಣುಕ ಗಂಗಾಧರ ಶಿವಾಚಾರ್ಯರು 21 ದಿನಗಳ ಕಾಲ ಮೌನ ಅನುಷ್ಠಾನ

ಹುಮನಾಬಾದ: ಕಳೆದ 8 ವರ್ಷಗಳಿಂದ ಲೋಕಕಲ್ಯಾಣಕ್ಕಾಗಿ ಇಲ್ಲಿನ ಹಿರೇಮಠ ಸಂಸ್ಥಾನದ ಪೀಠಾಧಿಪತಿ ರೇಣುಕ ಗಂಗಾಧರ ಶಿವಾಚಾರ್ಯರು 21 ದಿನಗಳ ಕಾಲ ಮೌನ ಅನುಷ್ಠಾನ ನಡೆಸಲಿದ್ದಾರೆ.
ದಿನಾಂಕ 26-11-2019 ರಿಂದ 16-12-2019ರ ವರಗೆ ಪಟ್ಟಣದ ಕುಲದೇವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಿರಂತ 21 ದಿನಗಳ ಕಾಲ ಮೌನ ಅನುಷ್ಠಾನದ ಜತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪಟ್ಟಣದ ಹಿರೇಮಠಕ್ಕೆ ಪೀಠಾಧಿಪತಿಗಳಾದ ನಂತರ ಲೋಕ ಕಲ್ಯಾಣಕ್ಕಾಗಿ ಮೌನ ಅನುಷ್ಠಾನ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿವಿಧಡೆಯಿಂದ ಗಮೀಸುವ ಭಕ್ತರು ಕುಲ ದೇವ ವೀರಭದ್ರನ ಜತೆಗೆ ಶ್ರೀಗಳ ಆಶೀರ್ವಾದ ಪಡೆದುಕೊಳ್ಳುವ ವಾಡಿಕೆ ಬೆಳೆದು ಬರುತ್ತಿದೆ.
ಡಿ.16 ಉಜ್ಜಯಿನಿ ಜಗದ್ಗುರು ಆಗಮನ
ಶ್ರೀಗಳ ಕಾರ್ಯಕ್ಕೆ ಇಡೀ ಪಟ್ಟಣದ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದು, ಮೌನ ಅನುಷ್ಠಾನದ ಮಂಗಲ ದಿನದಂದು ಶ್ರೀಗಳ ಅದ್ದೂರಿ ಮೆರವಣಿಗೆ ನಡೆಸಿ, ಧರ್ಮ ಸಭೆಯ ಮೂಲಕ ಶ್ರೀಗಳನ್ನು ಸನ್ಮಾನಿಸುವ ವಾಡಿಕೆ ಕೂಡ ಬೆಳದುಬಂದಿದ್ದು, ಈ ವರ್ಷ ಕೂಡ ಅದೇ ಮಾದರಿಯಲ್ಲಿ ಡಿ.16ರಂದು ಉಜ್ಜಯಿನಿ ಜಗದ್ಗುರುಗಳು ಪಟ್ಟಣಕ್ಕೆ ಆಗಮೀಸಿ ಶ್ರೀಗಳ ಮೌನ ಅನುಷ್ಠಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಧರ್ಮ ಸಭೆಯ ಮೂಲಕ ಸಂದೇಶ ನೀಡಲ್ಲಿದ್ದಾರೆ ಎಂದು ಜಗದೀಶ ಹಿರೇಮಠ ಮಾಹಿತಿ ನೀಡಿದ್ದಾರೆ.
Date: 25-11-2019 Time: 10 Am
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















