ಬೀದರ್ : ಹಿಂಗುಲಾಂಬಿಕಾ ದೇವಿ ವಿಶೇಷ ಪೂಜೆ
ಬೀದರ್:
ನಗರದ ದರ್ಜಿಗಲ್ಲಿಯಲ್ಲಿ ನವರಾತ್ರಿ ಅಂಗವಾಗಿ ಹಿಂಗೂಲಾಂಬಿಕಾ ಮಾತಾ ನವರಾತ್ರಿ ಟ್ರಸ್ಟ್ ವತಿಯಿಂದ ಆಯೋಜಿಸಿದ ದೇವಿಯ ಮೂರ್ತಿ ಪ್ರತಿಸ್ತಾಪನೆ ಜರುಗಿದ್ದು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಅಭಿಷೇಕ, ಪೂಜಾಭಿಷೇಕ ಮತ್ತು ಮಹಾಮಂಗಳಾರುತಿ ಸೇರಿದಂತೆ ನಾನಾ ವಿಧಿ-ವಿಧಾನ ಜರುಗುತ್ತಿದೆ. ಪ್ರತಿ ವರ್ಷ ನವರಾತ್ರ ಉತ್ಸವದಲ್ಲಿ 9ದಿನ ಕಾಲ ದಾಂಡಿಯಾ, ಕೋಲು, ರಂಗೋಲಿ, ಭಜನೆ ಮತ್ತು ಒಂದು ದಿನ ಮಹಾ ಜಾಗರಣೆ ವಿಶೇಷರೂಪದಲ್ಲಿ ಜರುಗುತಿತ್ತು, ಆದರೆ ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ಟ್ರಸ್ಟ್ ಪ್ರಮುಖರ ನೇತೃತ್ವದಲ್ಲಿ ನವರಾತ್ರಿ ಉತ್ಸವ ಕೇವಲ ಧಾರ್ಮಿಕ ಆಚರಣೆಗಾಗಿ ಸೀಮಿತವಿದ್ದು ಸರಳವಾಗಿ ಆಚರಿಸಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರ ಹಾಗೂ ಇತರೆ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಬರುವ ಭಕ್ತರಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪ್ರಸಾದ ವಿತರಣೆ ಸೇರಿದಂತೆ ಇತರ ಯಾವುದೆ ಧಾರ್ಮಿಕ ಕಾರ್ಯಕ್ರಮ ಇರುವುದಿಲ್ಲಾ. ಭಕ್ತಾದಿಗಳು ಸಹಕರಿಸಬೇಕು ಎಂದು ಟ್ರಸ್ಟ್ ಅಧ್ಯಕ್ಷ ಗಂಗಾಧರ ತಾಂದಳೆ ತಿಳಿಸಿದರು. ಪ್ರಮುಖ ರಾದ ಜಗದೀಶ ಸೂರ್ಯಾನ, ರಾಜೇಶ ಘನಾತೆ, ಸುನಿಲ ಘನಾತೆ, ಪವನ ತಾಂದಳೆ, ವಿನೋದ ಸೂರ್ಯಾನ, ಶೇಷನಾರಾಯಣ ದೌಜೋಡಿ, ಕೀರಣ ಗರ್ಜೇ, ಮನೋಜ ಘನಾತೆ, ವಿನೋದ ಘನಾತೆ, ಸುರೇಶ ತಾಂದಳೆ, ಅಕ್ಷಯ ತಾಂದಳೆ, ಶುಭಂ ಗರ್ಜೇ, ನಿಲೇಶ ಘನಾತೆ ಉಪಸ್ಥಿತರಿದ್ದರು.
ಸಂಸದ ಭಗವಂತ ಖುಬಾ, ಬಾಬುವಾಲಿ, ನಂದಕಿಶೋರ ವರ್ಮಾ ಹಾಗೂ ರಾಜಕೀಯ ಅನೇಕ ಧುರಿಣರು ದೇವಿಯ ದರ್ಶನ ಪಡೆದರು.
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…
















