ಬೀದರಕ್ಕೆ ಸಚಿವ ಸಿ.ಟಿ ರವಿ ಭೇಟಿ

ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವ ಸಿ.ಟಿ.ರವಿ ಶನಿವಾರ ಬೀದರ ನಗರಕ್ಕೆ ಭೇಟಿನೀಡಿದ್ದು, ಮೊದಲಿಗೆ ಲಿಂಗಾಯತ್ ಮಠ, ನಂತರ ಗುರುನಾನಕ್ ಭೇಟಿನೀಡಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಚಿವ ಸಿ.ಟಿ ರವಿ ಅವರನ್ನು ಸನ್ಮಾನಿಸಲಾಯಿತು. ನಂತರ ಬಿಜೆಪಿ ವತಿಯಿಂದ ನಡೆಯುತ್ತಿರುವ ಮಹಾತ್ಮ ಗಾಂದೀಜಿ ಅವರ 150ನೇ ಜನ್ಮದಿನದ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದರು.
ಸಂಸದ ಭಗವಂತ ಖೂಬಾ, ಬಿಜೆಪಿ ಯುವ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ, ಎಂಎಲ್ಸಿ ರಘುನಾಥ್ ಮಲ್ಕಾಪೂರೆ, ಜಿಲ್ಲಾಧ್ಯಕ್ಷ ಡಾ| ಶೈಲೆಂದ್ರ ಬೆಲ್ದಾಳೆ, ಪ್ರಥಮ ದರ್ಜೆ ಗುತ್ತೆದಾರ ಗುರುನಾಥ್ ಕೊಳ್ಳುರ್ ಸೇರಿದಂತೆ ಅನೇಕರು ಇದ್ದರು.
Date:16-11-2019
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















