ಬೀದರ- ಎರೆಡು ಕೊಲೆ.
ಬೀದರ: ಜಿಲ್ಲೆಯ ಎರೆಡುಕಡೆ ಎರೆಡು ಕೊಲೆ ಪ್ರಕರಣಗಳು ಬುಧವಾರ ಬೆಳಕಿಗೆ ಬಂದಿವೆ.
ಬೀದರ ನಗರದ ಉಸ್ಮಾನ್ ಗಂಜ್ ವ್ಯಾಪ್ತಿಯಲ್ಲಿ ಡಿ.24ರ ರಾತ್ರಿ ಕೊಲೆ ಪ್ರಕರಣವೊಂದು ನಡೆದಿದ್ದು, ಮಹಮ್ಮದ್ ಅಕ್ಬರ (20) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಕ್ಷುಲಕ ಕಾರಣಕ್ಕೆ ಜಗಳ ನಡೆದು ಕೊಲೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಮನಾಬಾದ ತಾಲೂಕಿನ ಶಕ್ಕರಗಂಜ್ ವಾಡಿ ವ್ಯಾಕ್ತಿಯಲ್ಲಿ 23 ವರ್ಷದ ಯುವಕನ ಕೊಲೆ ನಡೆದಿದ್ದು, ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುವುದು ತಿಳಿದು ಬಂದಿಲ್ಲ.
ಅಂಬರೀಶ ಪುಂಡಲಿಕ್ (23) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಯುವಕನ ಕಾಲು ಮತ್ತು ಕೈಗಳು ಕಟ್ಟಿ ಕೊಲೆ ಮಾಡಲಾಗಿದೆ ಈ ಕುರಿತು ಹಳ್ಳಿಖೇಡ ಬಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿನೀಡಿ ತನಿಖೆ ಶುರುಮಾಡಿದ್ದಾರೆ.
Date: 25-12-2019
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















