ಪಾಟೀಲ ಪರಿವಾದರಿಂದ 12 ಸಾವಿರ ಕುಟುಂಬಗಳಿಗೆ ಆಹಾರ ಪೊಟ್ಟಣ
ಶಾಸಕ ರಾಜಶೇಖರ ಪಾಟೀಲ ಜನ್ಮ ದಿನ ಹಿನ್ನೆಲೆ ಬಡವರಿಗೆ ಧವಸ ಧಾನ್ಯ ವಿತರಣೆ
ವರದಿ(ಹೂಗಾರ)
ಬೀದರ: ಕೊರೊನಾ ವೈರಸ್ ಭೀತಿಯಲ್ಲಿರುವ ಜನರ ಕಡೆ ಜಿಲ್ಲೆಯ ಚುನಾಯಿತ ಜನ ಪ್ರತಿನಿಧಿಗಳು ಮುಖ ಮಾಡುತ್ತಿಲ್ಲ ಎಂದು ಅನೇಕರು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಷ ವ್ಯಕ್ತಪಡಿಸುತ್ತಿರುವ ಮಧ್ಯದಲ್ಲಿಯೇ ಹುಮನಾಬಾದ ಶಾಸಕ ರಾಜಶೇಖರ ಪಾಟೀಲ ಎಪ್ರಿಲ್ 1ರಂದು 12 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಪೊಟ್ಟಣ ವಿತರಣೆಗೆ ಮುಂದಾಗಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಬಡವರು ಸಂಕಷ್ಟ ಎದುರಿಸುತ್ತಿದ್ದಾರೆ. ಒಂದು ಕಡೆ ಜೀವನದ ಭಯ, ಇನ್ನೊಂದು ಕಡೆ ಬಡವರ ಕೈಯಲ್ಲಿ ಕೆಲಸವಿಲ್ಲ. ಒಂದು ಹೊತ್ತಿನ ಊಟಕ್ಕೂ ಕೆಲ ಕುಟುಂಬಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಶಾಸಕ ರಾಜಶೇಖರ ಪಾಟೀಲ. ಈ ವರ್ಷ ಜನ್ಮದಿನಕ್ಕೆ ಕ್ಷೇತ್ರದ ಬಡವರಿಗೆ ಧವಸ ಧಾನ್ಯ ವಿತರಣೆ ಮಾಡುವ ಸಂಕಲ್ಪ ಮಾಡಿದ್ದಾರೆ.
ಪ್ರತಿಯೊಂದು ಕುಟುಂಬಕ್ಕೆ ಉತ್ತಮ ಗುಣಮಟ್ಟದ 5 ಕೆಜಿ ಅಕ್ಕಿ, ತೊಗರಿ ಬೆಳೆ, ಎಣ್ಣೆ ಸೇರಿದಂತೆ ಇತರೆ ಸಾಮಗ್ರಿಗಳ ಕಿಟ್ ವಿತರಣೆಗೆ ಮುಂದಾಗಿದ್ದಾರೆ. ಈಗಾಗಲೇ ಆಹಾರದ ಕಿಟ್ ತಯಾರಿ ನಡೆದಿದ್ದು, ಎಪ್ರಿಲ್ 1ರಿಂದ ವಿತರಣೆ ಶುರುಮಾಡಲ್ಲಿದ್ದಾರೆ. ಪ್ರತಿವರ್ಷ ಅಭಿಮಾನಿಗಳಿಂದ ಜನ್ಮದಿನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಕಳೆದ ಎರೆಡು ವರ್ಷಗಳಿಂದ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆ ಮಾಡಲಾಗಿತ್ತು. ಈ ವರ್ಷ ಕೊರೊನಾ ವೈರಸ್ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಜನ್ಮದಿನದ ನೆಪದಲ್ಲಿಯೇ ಬಡವರಿಗೆ ಸಹಾಯ ಸಹಕಾರ ಮಾಡುವ ನಿಟ್ಟಿನಲ್ಲಿ ಮುಂದಾಗಿರುವುದು ಕ್ಷೇತ್ರದ ಜನರ ಮೆಚ್ಚುಗೆಗೆ ಕಾರಣವಾಗಿದೆ.
ಕೊರೊನಾ ವೈರಸ್ ಹಾವಳಿ ಶುರುವಾದ ನಂತರ ಹುಮನಾಬಾದ, ಚಿಟಗುಪ್ಪ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿನೀಡಿದ ಶಾಸಕ ರಾಜಶೇಖರ ಪಾಟೀಲ ಜನರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಅಧಿಕಾರಿಗಳ ಸಭೆಗಳು ನಡೆಸಿ ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಜನರ ಸಂಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ತಾಕೀತು ಮಾಡಿದ್ದಾರೆ. ಹಗಲು ರಾತ್ರಿ ಮೊಬೈಲ್ ಕರೆಗಳಿಗೆ ಉತ್ತರಿಸುತ್ತಿದ್ದಾರೆ. ಕ್ಷೇತ್ರದ ಜನರಿಗಾಗಿ ಶಾಸಕ ರಾಜಶೇಖರ ಪಾಟೀಲ ಶ್ರಮಿಸುತ್ತಿದ್ದಾರೆ. ಕೊರೊನಾ ಸೋಂಕು ಹರಡದಂತೆ ಆರೋಗ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಆಸ್ಪತ್ರೆಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವಿವಿಧ ಮುಖಂಡರು ಅಭಿಪ್ರಾಯಗಳು ವ್ಯಕ್ತಪಡಿಸುತ್ತಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಏನು ಬೇಕಾದರೂ ಮಾಡುತ್ತಾರೆ ಎಂದು ಜನ ಸಾಮಾನ್ಯರು ಮಾತಾಡಿಕೊಳ್ಳುವುದು ಸಾಮಾನ್ಯ. ಆದರೆ, ಸಧ್ಯ ಯಾವುದೇ ಚುನಾವಣೆ ಇಲ್ಲ ಆದರೂ ಕೂಡ ಕ್ಷೇತ್ರದ ಜನರಿಗೆ ಆಹಾರ ಕಿಟ್ ನೀಡಲು ಮುಂದಾಗಿರುವ ಕಾರ್ಯಕ್ಕೆ ಇಲ್ಲಿನ ಕಾಂಗ್ರೆಸ್ ಪಕ್ಷದ ಮುಖಂಡರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕ್ಷೇತ್ರದ ಎಲ್ಲಾ ಮುಖಂಡರನ್ನು ಸಂಪರ್ಕಿಸಿ ಆಯಾ ಗ್ರಾಮ ಹಾಗೂ ಬಡಾವಣೆಗಳಲ್ಲಿನ ಬಡ ಕುಟುಂಗಳ ಕುರಿತ ಪಟ್ಟಿ ತಯಾರಿಸಲಾಗುತ್ತಿದೆ. ಅರ್ಹ ಬಡವರಿಗೆ ಶಾಸಕ ರಾಜಶೇಖರ ಪಾಟೀಲರ ಜನ್ಮದಿನದಂದು ಬಡವರ ಮನೆ ಬಾಗಿಲಿಗೆ ಕಿಟ್ ವಿತರಣೆಗೆ ಸಿದ್ದತೆ ನಡೆದಿದೆ ಎಂದು ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ ಮಾಹಿತಿ ನೀಡಿದ್ದಾರೆ.
Date: 30-03-2020 Time:5:15PM
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…

















