Home ನಿಮ್ಮ ಜಿಲ್ಲೆ ಬೀದರ ಪರವಾನಗಿ ರಹಿತ ಬಯೋಡಿಸೇಲ ಮಾರಾಟಕ್ಕೆ ಕಡಿವಾಣ ಹಾಕಿ : ಬಂಕ್ ಮಾಲೀಕರ ಒತ್ತಾಯ

ಪರವಾನಗಿ ರಹಿತ ಬಯೋಡಿಸೇಲ ಮಾರಾಟಕ್ಕೆ ಕಡಿವಾಣ ಹಾಕಿ : ಬಂಕ್ ಮಾಲೀಕರ ಒತ್ತಾಯ

ಪರವಾನಗಿ ರಹಿತ ಬಯೋಡಿಸೇಲ ಮಾರಾಟಕ್ಕೆ ಕಡಿವಾಣ ಹಾಕಿ :ಬಂಕ್ ಮಾಲೀಕರ ಒತ್ತಾಯ

ವರದಿ-ದುರಯೋಧನ ಹೂಗಾರ

ಬೀದರ/ಜುಲೈ-02: ಕೈಗಾರಿಕಾ ಪ್ರದೇಶಗಳಿಗೆ ಬಳಸುವ ಬಯೋಡೀಸಲ್  ಅಕ್ರಮವಾಗಿ ಖಾಸಗಿ ವಾಹನಗಳಿಗೆ ಮಾರಾಟ ಮಾಡುತ್ತಿರುವ ಕುರಿತು ಪೆಟ್ರೋಲ್ ಬಂಕ್ ಮಾಲೀಕರು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

https://play.google.com/store/apps/details?id=kknewsonline.in ಜಿಲ್ಲೆಯ ಬಸವಕಲ್ಯಾಣ ಹಾಗೂ ಹುಮನಾಬಾದ ತಾಲೂಕುಗಳಲ್ಲಿ ಹೆಚ್ಚಿನ ವ್ಯವಹಾರ ನಡೆಸುತ್ತಿರುವ ಬಗ್ಗೆ ದೂರಿನಲ್ಲಿ ವಿವರಿಸಲಾಗುತ್ತಿದೆ. ನಿಯಮಗಳು ಗಾಳಿಗೆ ತೂರಿ ವ್ಯವಹಾರ ನಡೆಸುತ್ತಿದ್ದು, ಅಧಿಕೃತ ಬಂಕ್ ಗಳು ದಿನ ನಿತ್ಯ ಹಾನಿ ಸಂಭವಿಸುತ್ತಿವೆ. ಸರಾಸರಿ ಶೇ.60ರಷ್ಟು ವ್ಯಾಪರ ಕಡಿಮೆಯಾಗಿದೆ ಎಂದು ಬಂಕ್ ಮಾಲೀಕರು ಜಿಲ್ಲಾಧಿಕಾರಿಗಳಿಗೆ ವಿವರಿಸಿದ್ದಾರೆ. ಈ ಕುರಿತು ಅಧಿಕಾರಿಗಳು ಖುದ್ದು ಭೇಟಿನೀಡಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಸೂಚಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.

ಒಂದು ತಾಲೂಕಿನಲ್ಲಿ ಸರಾಸರಿ 100 ಕೆ.ಎಲ್ ಡೀಸಲ್ ಮಾರಾಟಗೊಳ್ಳುತ್ತಿತ್ತು. ಆದರೆ, ಇದೀಗ ಸರಾಸರಿ 40 ಕೆ.ಎಲ್ ಡೀಸೆಲ್ ಮಾತ್ರ ಮಾರಾಟವಾಗುತ್ತಿದೆ. ಬಯೋ ಡೀಸೆಲ ತರುವವರು ಶೇ.18ರಷ್ಟು ಜಿ.ಎಸ್.ಟಿ ಪಾವಾತಿ ಮಾಡುತ್ತಿದ್ದಾರೆ. ಆದರೆ, ಅಧಿಕೃತ ಬಂಕ್ ಮಾಲೀಕರು ಶೇ.62ರಷ್ಟು ತೆರಿಗೆ ಪಾವತಿ ಮಾಡುತ್ತಿದ್ದಾರೆ. ಇದರಿಂದ ದಿನಕ್ಕೆ ಸರಾಸರಿ 25 ಲಕ್ಷಕ್ಕೂ ಅಧಿಕ ತೆರಿಗೆ ಸರ್ಕಾರಕ್ಕೆ ಹಾನಿ ಸಂಭವಿಸುತ್ತಿದೆ ಎಂದು ಮಾಲೀಕರು ಮಾಹಿತಿ ನೀಡಿದ್ದಾರೆ.

ಯಾಕೆ ಬಯೋಡಿಸೇಲ್ ಖರೀದಿ: ಪೆಟ್ರೋಲ್ ಬಂಕ್ಗಳಲ್ಲಿ ಪ್ರತಿ ಲೀಟರ್ ಡೀಸೆಲ್ಗೆ ರೂ.94.84 ಇದೆ. ಆದರೆ, ಅದೇ ಬಯೋಡೀಸಲ್ ದರ ರೂ.72ಕ್ಕೆ ಮಾರಾಟಗೊಳ್ಳುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಒಂದು ಲೀಟರ್ ಡೀಸಲ ಮಧ್ಯದಲ್ಲಿ 22 ರೂಪಾಯಿ ವ್ಯತ್ಯಾಸ ಇರುವ ಕಾರಣ ಖಾಸಗಿ ಲಾರಿಗಳು ಬಯೋಡೀಸಲ ಭರಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ವಾಹನ ಮಾಲೀಕರು ಬಯೋಡೀಸಲ ಬಳಕ್ಕೆ ಮುಂದಾಗುತ್ತಿದ್ದಾರೆಂದು ಚಾಲಕರು ಮಾಹಿತಿ ನೀಡಿದ್ದಾರೆ.

Date: 02-07-2021 : Time: 5:30pm : www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …