Home ನಿಮ್ಮ ಜಿಲ್ಲೆ ಬೀದರ ಚಿಟಗುಪ್ಪ: ಅನಧಿಕೃತ ಶೆಡ್ ಗಳ ತೆರವಿಗೆ ಕೆ ಎಸ್ ಆರ್‍ ಟಿಸಿ ಅಧಿಕಾರಿಗಳ ಆಗ್ರಹ

ಚಿಟಗುಪ್ಪ: ಅನಧಿಕೃತ ಶೆಡ್ ಗಳ ತೆರವಿಗೆ ಕೆ ಎಸ್ ಆರ್‍ ಟಿಸಿ ಅಧಿಕಾರಿಗಳ ಆಗ್ರಹ

ಚಿಟಗುಪ್ಪ ಪಟ್ಟಣದಲ್ಲಿ ಅಕ್ರಮ ಶೆಡ್ ಗಳ ನಿರ್ಮಾಣ

ಚಿಟಗುಪ್ಪ: ಅನಧಿಕೃತ ಶೆಡ್ ಗಳ ತೆರವಿಗೆ ಕೆ ಎಸ್ ಆರ್‍ ಟಿಸಿ ಅಧಿಕಾರಿಗಳ ಆಗ್ರಹ
ಕಸ್ತೂರಿ ಕಿರಣ ಸುದ್ದಿ
ಚಿಟಗುಪ್ಪ:
ಪಟ್ಟಣದ ಹಳೆ ಬಸ್ ನಿಲ್ದಾಣ ಆವರಣದಲ್ಲಿ ಕಳೆದ ಒಂದು ವಾರದಿಂದ ಅನಧಿಕೃತವಾಗಿ ನಾಗರಿಕರು ಶೆಡ್ ಗಳು ನಿರ್ಮಿಸಿಕೊಳ್ಳುತ್ತಿರುವುದನ್ನು ತಕ್ಷಣ ತೆರವು ಗೊಳಿಸಬೇಕು ಎಂದು ಆಗ್ರಹಿಸಿ ಕೆ ಎಸ್ ಆರ್‍ ಟಿ ಸಿ ಅಧಿಕಾರಿಗಳು ಇಲ್ಲಿಯ ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ್ ರಾಜಪುರೋಹಿತ್ ಅವರಿಗೆ ಮನವಿ ಮಂಗಳವಾರಾ ಪತ್ರ ಸಲ್ಲಿಸಿದರು.
ಕಳೆದ ಒಂದು ವರ್ಷದ ಹಿಂದೆ ನಿಲ್ದಾಣದ ಆವರಣದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾರ್ಯ ನಡೆದಿದೆ. ಇದುವರೆಗೂ ಪೂರ್ಣಗೊಂಡಿಲ್ಲ ಹೀಗಾಗಿ ನಿಲ್ದಾಣದ ವಿಶಾಲವಾದ ಬಯಲು ಸ್ಥಳದಲ್ಲಿ ನಾಗರಿಕರು ಎಲ್ಲೆಂದರಲ್ಲಿ ಶೆಡ್ ಗಳು ನಿರ್ಮಿಸಿಕೊಳ್ಳುತ್ತಿರುವುದು ಕಂಡುಬಂದಿದೆ, ಈಶಾನ್ಯ ವಲಯ ಸಾರಿಗೆ ಸಂಸ್ಥೆಯ ಆಸ್ತಿಯಲ್ಲಿ ಅಕ್ರಮವಾಗಿ ಪ್ರವೇಶ ಮಾಡುವುದು ಕಾನೂನು ಬಾಹಿರವಾಗಿದ್ದು, ತಕ್ಷಣ ತಡೆದು ಸೂಕ್ರ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯ ಸಹಾಯಕ ಕಾಯ೯ನಿವಾ೯ಹಕ ಅಭಿಯಂತರರು ಸುಂಕದ್, ಹುಮನಾಬಾದ್ ಘಟಕ ವ್ಯವಸ್ಥಾಪಕ ಮುನಗುಳ್ಳಿ, ಕಿರಿಯ ಅಭಿಯಂತರ ಶ್ರೀಕಾಂತ್ ಪತ್ತಾರ್‍ ಅವರು ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
ಮುಖ್ಯಾಧಿಕಾರಿ ಶ್ರೀಪಾದ್ ಅವರು ಮನವಿ ಪತ್ರ ಸ್ವಿಕರಿಸಿ,’ತಕ್ಷಣ ಅನಧಿಕೃತವಾಗಿ ಶೆಡ್ ಗಳು ನಿರ್ಮಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಾರಿಗೆ ಇಲಾಖೆಯ ಆಸ್ತಿ ಉಳಿಸಿಕೊಡಲಾಗುತ್ತದೆ’ ಎಂದು ಹೇಳಿದರು.

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …