ಆಹಾರ ನಿಗಮ ಉತ್ತಮ ಕಾರ್ಯ ನಿರ್ವಹಿಸುತ್ತಿದೆ : ಉಮೇಶ ಬಿರಬಿಟ್ಟೆ ಅಟ್ಟೂರ್
ದೇಶದಲ್ಲಿ ಆಹಾರ ನಿಗಮ ಉತ್ತಮ ಕಾರ್ಯ ನಿರ್ವಹಿಸುತ್ತಿದೆ : ಉಮೇಶ ಬಿರಬಿಟ್ಟೆ ಅಟ್ಟೂರ್
ಬಸವಕಲ್ಯಾಣ: ದೇಶದಲ್ಲಿನ ಬಡವರಿಗೆ ಉಚಿತ ಆಹಾರ ಧಾನ್ಯ ಒದಗಿಸುವ ನಿಟ್ಟಿನಲ್ಲಿ ಭಾರತೀಯ ಆಹಾರ ನಿಗಮ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಭಾರತೀಯ ಆಹಾರ ನಿಗಮ ಸದಸ್ಯ ಉಮೇಶ ಬಿತಬಿಟ್ಟೆ ಅಟ್ಟೂರ್ ಹೇಳಿದರು.
ನಗರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸರಕಾರ ಪಡಿತರ ವಿತರಕರ ಸಂಘದ ತಾಲೂಕು ಸಮಿತಿ ವತಿಯಿಂದ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೊರೊನಾ ಮಹಾಮಾರಿ ಇಡೀ ವಿಶ್ವಕ್ಕೆ ವ್ಯಾಪಿಸಿದ ಸಂದರ್ಭದಲ್ಲಿ ಇಡೀ ಭಾರತ ಕೂಡ ಲಾಕ್ ಡೌನ್ ಆಗಿತ್ತು. ಈ ಸಂದರ್ಭದಲ್ಲಿ ಅನೇಕರು ಅನೇಕ ರೀತಿ ಸಮಸ್ಯೆಗಳು ಎದುರಿಸಿದ್ದಾರೆ. ನಗರ ಪ್ರದೇಶಗಳು ಬಿಟ್ಟು ಗ್ರಾಮೀಣ ಭಾಗಕ್ಕೆ ಬಂದ ಬಡವರ ಹೊಟ್ಟೆಗೆ ಊಟದ ಸಮಸ್ಯೆ ಆಗಬಾರದು ಎಂದು ದೇಶದ ಪ್ರಧಾನಿ ನರೇಂದ್ರ ಮೋದಿ ಜೀ ಅವರು ದೇಶದಲ್ಲಿನ ಬಡವರ ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಮೂಲಕ ಪಡಿತರ ಚೀಟಿ ಇಲ್ಲದವರಿಗೂ ಕೂಡ ಆಹಾರ ಧಾನ್ಯ ಪೂರೈಸುವ ಪ್ರಾಮಾಣಿಕ ಕೆಲಸ ಮಾಡುವ ಮೂಲಕ ದೇಶದ ಉತ್ತಮ ಪ್ರಧಾನಿ ಎಂದು ಗುರುತಿಸಿಕೊಂಡಿದ್ದಾರೆ.
ಪ್ರಧಾನಿಗಳ ಯೋಜನೆ ಯಶಸ್ವಿಯಾಗಲು ರಾಜ್ಯದ ಪಡಿತರ ವಿತರಕರು ಕೂಡ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಬಡವರಿಗೆ ಸೂಕ್ತ ಸಮಯಕ್ಕೆ ಆಹಾರ ಧಾನ್ಯ ಪೂರೈಕೆ ಮಾಡಿದ್ದು, ಕೊರೊನಾ ವಾರಿಯರ್ ಗಳಂತೆ ಕೆಲಸ ಮಾಡಿದ್ದು, ಸಂತಸ ತಂದಿದೆ ಎಂದರು.
ಈ ಮಧ್ಯೆ ಕೂಡ ಕೆಲ ಅಂಗಡಿಗಳ ಹಾಗೂ ಅಧಿಕಾರಿಗಳ ವಿರುದ್ದ ದೂರುಗಳು ಕೇಳಿ ಬರುತ್ತಿವೆ. ದೂರುಗಳು ಮುಕ್ತ ತಾಲೂಕು ಎಂದು ಗುರುತಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಯಾರು ಕೂಡ ಯಾವುದೇ ಆರೋಪಕ್ಕೆ ಗುರಿಯಾಗಬಾರದು ಎಂದು ಸಲಹೆ ನೀಡಿದರು. ಪಕ್ಷದ ವರಿಷ್ಠರು ನೀಡಿದ ಹುದ್ದೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಈ ಕಾರ್ಯಕ್ಕೆ ಎಲ್ಲರ ಸಹಕಾರ ಕೂಡ ಮುಖ್ಯವಾಗಿದೆ ಎಂದರು.
ರಾಜ್ಯದಲ್ಲಿ ವಿತರಣೆಯಾಗುವ ಆಹಾರ ಧಾನ್ಯಗಳ ಗುಣಮಟ್ಟ, ಕುಂದು ಕೊರತೆಗಳ ಕುರಿತು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಾಸ್ತಾವನೆ ಸಲ್ಲಿಸುವ ಅಧಿಕಾರ ಹೊಂದಿದ್ದೇನೆ. ಆಹಾರ ಗುಣಮಟ್ಟ ಹಾಗೂ ವಿತರಣೆಯಲ್ಲಿನ ಸಮಸ್ಯೆ, ಹೊಸ ಯೋಜನೆಗಳ ಪ್ತಾಸ್ತಾವನೆ ಸಲ್ಲಿಸವ ಅಧಿಕಾರ ಹೊಂದಿದ್ದೇನೆ. ಯಾವುದೇ ದೂರುಗಳು ಅಥವ ಸಮಸ್ಯೆಗಳು ಇದ್ದರೆ ನೇರವಾಗಿ ಕರೆ ಮಾಡಿ ಮಾತಾಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಬಾಬುರೆಡ್ಡಿ, ಕೆ.ಎಫ್.ಸಿ.ಎಸ್ ಜಿಲ್ಲಾ ವ್ಯವಸ್ಥಾಪಕ ವಿನೋದಕುಮಾರ, ತಾಲೂಕು ಆಹಾರ ಶಿರಸ್ತೆದಾರ ನಿಲಮ್ಮಾ ಗಾಯಕವಾಡ್, ಆಹಾರ ನಿರಿಕ್ಷಕ ರತನಕುಮಾರ ದೇಗುಲೆ, ರಾಜೇಂದ್ರಕುಮಾರ ವಡ್ಡೆ, ರಾಜೇಶ್ವರಿ, ಸಗಟು ವ್ಯವಸ್ಥಾಪಕ ಬಂಡೆಪ್ಪಾ ಗಂಗೂ, ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ ಮೆಂಡೋಳೆ, ಸಂಘದ ಜಿಲ್ಲಾಧ್ಯಕ್ಷ ಸುಧಾಕರ ರಾಜಗೀರಾ, ಅಶೋಕ, ಭರತ ಬೌದ್ಧೆ, ರಾಜಕುಮಾರ ಗುಂಡೆ, ಬಾಪೂರಾವ ಔರಾದ ಸೇರಿದಂತೆ ಅನೇಕರು ಇದ್ದರು.
Date:13-10-2019
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















