Home ನಿಮ್ಮ ಜಿಲ್ಲೆ ಬೀದರ ಅಯೋಧ್ಯೆ ಮಾದರಿಯಲ್ಲಿ ಬಸವಕಲ್ಯಾಣ ಅಭಿವೃದ್ಧಿ ಕಾಣಬೇಕು..!

ಅಯೋಧ್ಯೆ ಮಾದರಿಯಲ್ಲಿ ಬಸವಕಲ್ಯಾಣ ಅಭಿವೃದ್ಧಿ ಕಾಣಬೇಕು..!

ಅಯೋಧ್ಯೆ ಮಾದರಿಯಲ್ಲಿ ಬಸವಕಲ್ಯಾಣ ಅಭಿವೃದ್ಧಿ ಕಾಣಬೇಕು..!

ದುರ್ಯೋಧನ ಹೂಗಾರ

ಬೀದರ: 12ನೇ ಶತಮಾನದಲ್ಲಿ ನಿರ್ಮಾಣಗೊಂಡ ಮೂಲ ಅನುಭವ ಮಂಟಪ ಪತ್ತೆಹಚ್ಚಿ ಅದೇ ಸ್ಥಳದಲ್ಲಿ ಅನುಭವ ಮಂಟಪ ನಿರ್ಮಾಣಮಾಡಿದರೆ ಭಾವಬಾತ್ಮಕ ಸಂಬAಧ ಹೆಚ್ಚಾಗುತ್ತದೆ. ಶಿವಶರಣರಿಗೆ ಗೌರವ ಸೂಚಿಸಿದಂತಾಗುತ್ತದೆ ಎಂಬ ಅಭಿಪ್ರಾಯಗಳು ಜಿಲ್ಲೆಯ ವಿವಿಧಡೆಯಿಂದ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಅಯೋಧ್ಯ ರಾಮಮಂದಿರ ನಿರ್ಮಾಣಕ್ಕಾಗಿ ಅನೇಕ ದಶಕಗಳ ಕಾಲ ಕಳೆದಿದೆ. ನ್ಯಾಯಾಲಯದ ಮೂಲಕ ಹೋರಾಟ ನಡೆಸಿ ರಾಮನ ಮೂಲ ಸ್ಥಳದಲ್ಲಿಯೇ ಇದೀಗ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿನ ಸರ್ಕಾರ ವಿವಿಧ ಸಂಘಟನೆಗಳ ಮುಖಂಡರು ಸೇರಿ ಬೇರೆ ಕಡೆಗೆ ಭವ್ಯ ಮಂದಿರ ನಿರ್ಮಾಣ ಮಾಡಬಹುದಿತ್ತು. ಆದರೆ, ಮೂಲ ಸ್ಥಳಕ್ಕೆ ಇರುವ ಮಹತ್ವ ಬೇರೆ ಸ್ಥಳದಲ್ಲಿ ಇರೋದಿಲ್ಲ ಎಂಬ ಏಕಮಾತ್ರ ಉದ್ದೇಶದಿಂದ ಮೂಲ ಸ್ಥಳದಲ್ಲಿಯೇ ಇದೀಗ ಮಂದಿರ ನಿರ್ಮಾಣ ಕಾರ್ಯ ನಡೆದಿದೆ ಎಂಬುವುದು ದೇಶದ ಎಲ್ಲರಿಗೂ ತಿಳಿದ ವಿಷಯವೆ.

ಅದೇ ಮಾದರಿಯಲ್ಲಿ ಬಸವಕಲ್ಯಾಣದಲ್ಲಿ ಕೂಡ ಮೂಲ ಅನುಭವ ಮಂಟಪ ಇರುವ ಬಗ್ಗೆ ಸಂಶೋಧಕರ ಮೂಲಕ ಪತ್ತೆ ಹಚ್ಚಿ. ಅದೇ ಮೂಲ ಸ್ಥಾನದಲ್ಲಿಯೇ ಅನುಭವ ಮಂಟಪ ನಿರ್ಮಾಣಕ್ಕೆ ಯಾಕೆ ರಾಜಕಾರಣಿಗಳು, ಅಧಿಕಾರಿಗಳು, ಸರ್ಕಾರಗಳು ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಎಲ್ಲಾಕಡೆಗಳಲ್ಲಿ ಉದ್ಭವವಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳೇ ಉತ್ತರಿಸಬೇಕಾಗುತ್ತದೆ. ಬೇರೆ ಸ್ಥಳದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರ, ಬಸವಕಲ್ಯಾಣದಲ್ಲಿ ಮೂಲ ಅನುಭವ ಮಂಟಪ ಇಲ್ಲ ಎಂದು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕಾಗುತ್ತದೆ. ಮೂಲ ಅನುಭವ ಮಂಟಪ ಇದೇ ಎಂದಾದರೆ ಅದರ ಕುರಿತು ಯಾಕೆ ಸಂಶೋಧನೆ ನಡೆದಿಲ್ಲ ಎಂಬ ಕುರಿತು ಉತ್ತರ ನೀಡಬೇಕಾಗುತ್ತದೆ.

12ನೇ ಶತಮಾನದಲ್ಲಿನ ನಡೆದ ಶರಣರ ಕಾಂತ್ರಿ ಕುರಿತು ಇಂದು ವಿಶ್ವದ ಮೂಲೆ ಮೂಲೆಗೂ ಪಸರಿಸುತ್ತಿದೆ. ಅಲ್ಲದೆ, ದೇಶದ ಪ್ರಧಾನಿಗಳು ಕೂಡ ತಮ್ಮ ಭಾಷಣದಲ್ಲಿ ವಿಶ್ವ ಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಹಾಗೂ ಕಾಯಕವೇ ಕೈಲಾಸ ಎಂಬ ಸಂದೇಶ ಕುರಿತು ವಿಶ್ವದ ಎಲ್ಲಾಕಡೆಗಲ್ಲಿ ಸಂದೇಶ ಸಾರುತ್ತಿದ್ದಾರೆ. ಅನುಭವ ಮಂಟಪದ ಮೂಲಕ ರಾಜಕೀಯ ಪರಿಕಲ್ಪನೆ ನೀಡಿದ್ದಾರೆ. ಇಡೀ ವಿಶ್ವಕ್ಕೆ ಸಮಾನತೆ ಸಾರಿದ್ದಾರೆ ಎಂದು ಹೇಳುವ ನಾಯಕರು ಇದೀಗ ಅಣ್ಣ ಬಸವಣ್ಣನವರ ಮೂಲ ಸ್ಥಳ ಪತ್ತೆಗೆ ಮುಂದಾಗಬೇಕಿದೆ.

ರಾಜಕೀಯ ಲಾಭಕ್ಕಾಗಿ, ಚುನಾವಣಾ ಗೆಲ್ಲುವಿಗಾಗಿ ಅನುಭವ ಮಂಟಪದ ಮೂಲ ಉದ್ದೇಶ ದುರ್ಬಳಕೆ ಆಗಬಾರದು. ದೇಶದಲ್ಲಿ ಶ್ರೀರಾಮನಿಗೆ ಎಷ್ಟು ಮಹತ್ವ ನೀಡಲಾಗುತ್ತದೆಯೋ ಅದೇ ರೀತಿ ಅಣ್ಣ ಬಸವಣ್ಣನಿಗೂ ಕೂಡ ಇದೇ ಎಂಬುವುದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ. ಮೂಲ ಅನುಭವ ಮಂಟಪ ಪತ್ತೆಹಚ್ಚುವಂತೆ ಅನೇಕ ಸಂಘಟನೆಗಳು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿರುವುದು ಇಲ್ಲಿ ಸ್ಮರಿಸಬಹುದಾಗಿದೆ. ಸದ್ಯ ಹೊಸ ಅನುಭವ ಮಂಟಪದ ಸಂಕುಸ್ಥಾಪನೆ ನಡೆಯಲ್ಲಿದ್ದು, ಅದರ ಜೊತೆಗೆ ಮೂಲ ಅನುಭವ  ಮಂಟಪ ಪತ್ತೆಗಾಗಿ ಸರ್ಕಾರ ಮುತುವರ್ಜಿ ವಹಿಸಬೇಕು. ಆ ಪುಣ್ಯ ಭೂಮಿ ಕೂಡ ಅಭಿವೃದ್ಧಿ ಪಡಿಸಬೇಕು ಎಂಬುವುದು ಅನೇಕರ ಅಭಿಪ್ರಾಯವಾಗಿದೆ.

Date: 05-01-2021 : www:kknewsonline.in

Check Also

ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ

*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…