ಅಬಕಾರಿ ದಾಳಿ – 1.05 ಲಕ್ಷದ ಮದ್ಯ ಜಪ್ತಿ.
ಬೀದರ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳು ಕಳೆದ 15 ದಿನಗಳಿಂದ ವಿವಿಧಡೆ ದಾಳಿ ನಡೆಸಿ 1.05 ಲಕ್ಷ ಮೌಲ್ಯದ ಮದ್ಯವನ್ನು ಜಪ್ತಿಮಾಡಿದ್ದಾರೆ.
ಜಿಲ್ಲೆಯ ವಿವಿಧಡೆ 80 ದಾಳಿಗಳು ನಡೆದಿದ್ದು, 28 ಪ್ರಕರಣಗಳು ದಾಖಲಿಸಲಾಗಿದೆ. 25 ಆರೋಪಿಗಳ ಬಂಧನ ಮಾಡಲಾಗಿದೆ. 32 ಲೀ ಮದ್ಯ, 31 ಲೀ ಬೀರ್, 5 ಲೀ ಕಳ್ಳಭಟ್ಟಿ ಸಾರಾಯಿ ಮತ್ತು 20 ಲೀ. ಸೆಂದಿ, ಒಂದು ದ್ವಿಚಕ್ರವಾಹನ ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಡಿಸಿ ವೀರಣ್ಣಾ ಬಾಗವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೂರು ನೀಡಿ: ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬೀದರ ನಗರದಲ್ಲಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿನ 165 ಮದ್ಯದ ಅಂಗಡಿಗಳು ಮುಚ್ಚಿಸಲಾಗಿದೆ. ಗಡಿ ಪ್ರದೇಶದಲ್ಲಿ ಪಹರೆ ನಡೆಸಲಾಗುತ್ತಿದ್ದು, ಅಕ್ರಮ ಮಧ್ಯ, ಕಳ್ಳಭಟ್ಟಿ, ಸೇಂದಿ ಸಾಗಟದ ಮೇಲೆ ನಿಗಾ ವಹಿಸಲಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವದೇ ದೂರುಗಳು ಇದ್ದರೆ 08482-221156 ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಅಬಕಾರಿ ಡಿಸಿ ವೀರಣ್ಣಾ ಬಾಗವಾಡಿ ತಿಳಿಸಿದ್ದಾರೆ.
Date: 31-03-2020 Time:5:15PM
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















