ಬೀದರ
ಹುಮನಾವಾದ -112 ಕುರಿತು ಪೊಲೀಸ್ ಇಲಾಖೆಯಿಂದ ಜನ ಜಾಗೃತಿ.
ಹುಮನಾವಾದ -112 ಕುರಿತು ಪೊಲೀಸ್ ಇಲಾಖೆಯಿಂದ ಜನ ಜಾಗೃತಿ. ಹುಮನಾಬಾದ:ನ.26: ಯಾವುದೇ ಸಮಸ್ಯೆಗಳು ಇರಲಿ ತುರ್ತು ನೆರವಿಗೆ 112 ಕರೆಮಾಡಿ ಎಂದು ಸಿಪಿಐ ಮಲ್ಲಿಕಾರ್ಜುನ ಯಾತನೂರ್ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಪಟ್ಟಣದಲ್ಲಿ ಶುಕ್ರವಾರ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ 112 ಜನಜಾಗೃತಿ ಹಾಗೂ ಭಿತ್ತಿಪತ್ರ ಅಂಟಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾಹಿತಿ ನೀಡಿದರು. ಪ್ರತಿಯೊಬ್ಬರು 112 ಸಹಾಯವಾಣಿ ಕರೆ ಸಂಖ್ಯೆ ನೆನಪಿಟ್ಟುಕೊಂಡು ಯಾವುದೇ ಸಂದರ್ಭದಲ್ಲಿ ದಿನದ 24 ಗಂಟೆಗಳಲ್ಲಿ…
Read More »ಸರ್ಕಾರಿ ಬಸ್ – ಕಂಟೇನರ್ ಮಧ್ಯೆ ಡಿಕ್ಕಿ
ಹುಮನಾಬಾದ-ನ.12: ಪಟ್ಟಣದ ಹೊರವಲಯದ ಕಲ್ಬುರ್ಗಿ ರಸ್ತೆಯಲ್ಲಿ ಶುಕ್ರವಾರ ಸಂಜೆ ಸರ್ಕಾರಿ ಬಸ್ ಹಾಗೂ ಕಂಟೇನರ್ ಮಧ್ಯೆ ಡಿಕ್ಕಿ ಸಂಭವಿಸಿದ್ದು ಭಾರಿ ಅನಾಹುತವೊಂದು ತಪ್ಪಿದೆ. ಕಂಟೇನರ್ ವಾಹನದ ಮುಂದಿನ ಟೈಯರ್ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಘಟನೆಯಲ್ಲಿ ಐದು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹುಮನಾಬಾದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬೀದರ ದಿಂದ ಕಲಬುರಗಿ ತೆರಳುತ್ತಿದ್ದ ಬಸ್ಸಿನಲ್ಲಿ ಸುಮಾರು 40ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣ ಬೆಳೆಸಿದರು. ಭಾರಿ…
Read More »ಡಾ। ಸಿದ್ದು ಪಾಟೀಲಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಜನ್ಮದಿನ ಆಚರಿಸಿದ ಅಭಿಮಾನಿಗಳು.
ಡಾ। ಸಿದ್ದು ಪಾಟೀಲಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಜನ್ಮದಿನ ಆಚರಿಸಿದ ಅಭಿಮಾನಿಗಳು. ಬೀದರ: ಬಿಜೆಪಿ ಯುವ ಮುಖಂಡ ಡಾ। ಸಿದ್ದಲಿಂಗಪ್ಪ ಪಾಟೀಲ ಅವರ 44ನೇ ಜನ್ಮ ದಿನವನ್ನು ಅಭಿಮಾನಿ ಬಳಗದಿಂದ ಅದ್ದೂರಿಯಾಗಿ ಆಚರಿಸಿದರು. ವಿಶೇಷವಾಗಿ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು. ಬೆಳ್ಳೆಗೆ ಕುಲ ದೇವ ವೀರಭದ್ರೇಶ್ವರ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದ, ಡಾ। ಸಿದ್ದಲಿಂಗಪ್ಪಾ ಪಾಟೀಲ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಏರ್ಪಡಿಸಿದ್ದ…
Read More »ಸಹಾಯಕ ಅಭಿಯಂತರ ವಿಜಯರಡ್ಡಿಗೆ ಮಾತೃವಿಯೋಗ
ಸಂಗಮ್ಮ ರಾಮರಡ್ಡಿ ಚಿಟಗುಪ್ಪ: ತಾಲ್ಲೂಕಿನ ಪಂಚಾಯತ ರಾಜ್ ಪಿ.ಆರ್.ಇ ಉಪವಿಭಾಗದ ಸಹಾಯಕ ಅಭಿಯಂತರ ವಿಜಯರಡ್ಡಿ ಅವರ ತಾಯಿ ಸಂಗಮ್ಮ ರಾಮರಡ್ಡಿ ಲಚ್ಚನಗಾರ (80)ಮಂಗಳವಾರ ನಸುಕಿಜಾವ ಸ್ವ ಗ್ರಾಮ ನಿರ್ಣಾದಲ್ಲಿ ನಿಧನರಾದರು. ಇವರಿಗೆ ಮೂವರು ಹೆಣ್ಣು, ಮೂವರು ಗಂಡು ಮಕ್ಕಳಿದ್ದಾರೆ. ಮಂಗಳವಾರ ಸಾಯಂಕಾಲ ಸ್ವ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ. Date:19-10-2021 : www.kknewsonline.in
Read More »ಆರೋಗ್ಯ ರಕ್ಷಾ ಸಮಿತಿಗೆ ಹೂಗಾರ ಆಯ್ಕೆ.
ಆರೋಗ್ಯ ರಕ್ಷಾ ಸಮಿತಿಗೆ ಹೂಗಾರ ಆಯ್ಕೆ. ಹುಮನಾಬಾದ: ಚಿಟಗುಪ್ಪ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ರವಿಕಾಂತ್ ಕೆ ಹೂಗಾರ ವಕೀಲರು ಆಯ್ಕೆಗೊಂಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪದ್ಮ ವಿ ಅವರು ಆದೇಶ ಹೊರಡಿಸಿದ್ದು, ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಮಾಡಲು ಸಹಕರಿಸಿದ ಬಿಎಸ್.ಎಸ್.ಕೆ ಅಧ್ಯಕ್ಷರಾದ ಸುಭಾಷ್ ಕಲ್ಲೂರ್, ಸಂಸದರಾದ ಭಗಂವತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್, ಜಿಲ್ಲಾಧ್ಯಕ್ಷರಾದ…
Read More »ಸಬ್ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಸಾವು
ಹುಮನಾಬಾದ ಸಬ್ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಸಾವು ಹುಮನಾಬಾದ: ಪಟ್ಟಣದಲ್ಲಿನ ಸಬ್ ಜೈಲಿನಲ್ಲಿದ ವಿಚಾರಣಾಧೀನ ಕೈದಿಯೊಬ್ಬ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಜಾವೇದ್ ಖಾನ್ ಫರವೆಜ್ ಖಾನ್ (45) ಮೃತಪಟ್ಟ ವಿಚಾರಣಾಧೀನ ಕೈದಿ ಎಂದು ಗುರುತಿಸಲಾಗಿದೆ. ಬುಧವಾರ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ ಮರಳಿ ಜೈಲಿಗೆ ಬಂದ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ನಂತರ ಜೈಲ ಅಧಿಕಾರಿಗಳು ಕೂಡಲೇ ಪಟ್ಟಣದ ಸರ್ಕಾರಿ ಆಪತ್ರೆಗೆ ದಾಖಲಿಸಿದ್ದಾರೆ. ಈ ಮಧ್ಯದಲ್ಲಿ ವ್ಯಕ್ತಿ ಮೃತ ಪಟ್ಟಿದ್ದಾನೆ.…
Read More »ಬೆಳೆ ಹಾನಿ : ಮನನೊಂದ ರೈತ ಆತ್ಮಹತ್ಯೆ
ಬೆಳೆ ಹಾನಿ : ಮನನೊಂದ ರೈತ ಆತ್ಮಹತ್ಯೆ ಹುಮನಾಬಾದ: ತಾಲೂಕಿನ ಕುಮಾರಚಿಂಚೋಳ್ಳಿ ಗ್ರಾಮದ ರೈತನೊಬ್ಬ ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಮನನೊಂದು ತನ್ನ ಹೋಟೆಲನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ. ಅನಿತ ಮಾಣಿಕಪ್ಪ ಹುಣಜಿ (43) ಆತ್ಮಹತ್ಯೆ ಮಾಡಿಕೊಂಡ ರೈತ. ಗ್ರಾಮದಲ್ಲಿ 3 ಎಕರೆ ಭೂಮಿ ತಂದೆ ಮಾಣಿಕಪ್ಪ ಹುಣಜಿ ಅವರ ಹೆಸರಲ್ಲಿ ಹೊಂದಿದ್ದು, ಹಂದಿಕೇರಾ ವಿ.ಎಸ್.ಎಸ್.ಎನ್, ದುಬಲಗುಂಡಿ ಕರ್ನಾಟಕ ಗ್ರಾಮೀಣ…
Read More »17 ನಿಮಿಷ್ಯದಲ್ಲಿ ನಡೆದ ಅತೀ ಸರಳ ಮದುವೆ.
ಹುಮನಾಬಾದ: ಮದುವೆಯ ವಧುವಿಗೆ ಒಡುವೆಗಳಿಲ್ಲ, ವಸ್ತ್ರಾಲಂಕಾರವೂ ಇಲ್ಲ, ಪರಸ್ಪರ ಹೂಮಾಲೆ, ಬಂಗಾರ ತಾಳಿ, ಬೆಳ್ಳಿ ಕಾಲುಂಗುರ, ಬಾಜಾ ಭಜಂತ್ರಿ, ಪುರೋಹಿತರೂ ಕೂಡ ಇಲ್ಲದೇ ಅತೀ ಸರಳವಾಗಿ 17 ನಿಮಿಷ್ಯದಲ್ಲಿ ಮದುವೆಯೊಂದು ನಡೆದ ಪ್ರಸಂಗ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಪಟ್ಟಣ ಹೊರವಲಯದ ನೂರ್ ಗಾರ್ಡ್ನ ಫಂಕ್ಷನ್ ಹಾಲ್ನಲ್ಲಿ ಭಾನುವಾರ ಹರಿಯಾಣದ ಸತ್ಯಲೋಕ ಆಶ್ರಮ, ಮುನಿಂದರ್ ಧರ್ಮಾಥ ಟ್ರಸ್ಟ್ ನೇತೃತ್ವದಲ್ಲಿ ಹೊಸ ಮಾದರಿ ಮದುವೆ ನಡೆದಿದೆ. ಮಹಾರಾಷ್ಟ್ರದ ನಿಲಂಗಾ ತಾಲೂಕಿನ ಹಣುಮಂತವಾಡಿ ಗ್ರಾಮದ…
Read More »ಕರೋನಾ ದಿಂದ ಮೃತಪಟ್ಟ ಕುಟುಂಬಗಳಿಗೆ ಜೆಡಿಎಸ್ ವತಿಯಿಂದ ಸಹಾಯ ಧನ ವಿತರಣೆ
ಕರೋನಾ ದಿಂದ ಮೃತಪಟ್ಟ ಕುಟುಂಬಗಳಿಗೆ ಜೆಡಿಎಸ್ ವತಿಯಿಂದ ಸಹಾಯ ಧನ ವಿತರಣೆ ಹುಮನಾಬಾದ: ಕೊರೊನಾ ಮಹಾಮಾರಿಗೆ ತಾಲೂಕಿನ ಹಣಕುಣಿ ಗ್ರಾಮದಲ್ಲಿ ಮೃತಪಟ್ಟ ಎರಡು ಕುಟುಂಬಗಳಿಗೆ ಜೆಡಿಎಸ್ ಪಕ್ಷದ ವತಿಯಿಂದ ಕುಟುಂಬಗಳಿಗೆ ಸ್ವಂತನ ಹೇಳಿ ಸಹಾಯ ಧನ ವಿತರಣೆ ಮಾಡಿರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸುರೇಶ ಸೀಗಿ, ಮಹೇಶ ಅಗಡಿ, ಸತೀಶ ರಾಂಪೂರೆ, ಅಬ್ದುಲ್ ರೆಹೆಮಾನ್ ಗೋರೆಮಿಯ್ಯಾ, ಚೇತನ ಗೋಖಲೆ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ತಾಲೂಕಿನ ಅನೇಕ ಕುಟುಂಬಗಳು ಕುಟುಂಬ…
Read More »ಲಂಚ ಪಡೆಯುತ್ತಿರುವಾಗ ತಹಸೀಲ್ದಾರ್ ಮೇಲೆ ಎಸಿಬಿ ದಾಳಿ.
ಲಂಚ ಪಡೆಯುತ್ತಿರುವಾಗ ತಹಸೀಲ್ದಾರ್ ಮೇಲೆ ಎಸಿಬಿ ದಾಳಿ. ಬೀದರ :ಬುಧವಾರ ಬೆಳಗ್ಗೆ ಬೀದರ ತಸಿಲ್ದಾರರ ಗಂಗಾದೇವಿ ಅವರು 15 ಲಕ್ಷ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಮಾಹಿತಿ ಲಭ್ಯವಾಗುತ್ತಿದೆ. ನಗರದ ಚಿದ್ರಿ ಸರ್ವೆ ನಂಬರ್ 15ರ ಭೂಮಿ ಮುಟೆಷನ್ ಮಾಡಲು ಲಿಲಾಧರ ಅನ್ನುವವರಿಗೆ 20ಲಕ್ಷ ಬೇಡಿಕೆ ಇಟ್ಟಿದ್ದು, ಮನೆಯಲ್ಲಿ 15ಲಕ್ಷ ಹಣ ಪಡೆಯುವಾಗ ಬೀದರ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆಂದು ಮೂಲಗಳು ಖಚಿತ ಪಡಿಸಿದ್ದು, ಅಧಿಕಾರಿಗಳಿಂದ ಹೆಚ್ಚಿನ…
Read More »



















