68 ಸಂಚಾರಿ ಪಶು ಚಿಕಿತ್ಸಾ ವಾಹನಗಳ ಲೋಕಾರ್ಪಣೆಗೊಳಿಸಿದ ಸಚಿವ ಪ್ರಭು ಚವ್ಹಾಣ
================
ಬೀದರ್: ಪ್ರಾಣಿಗಳ
ಕಲ್ಯಾಣ ಕರ್ನಾಟಕ ಭಾಗಕ್ಕೆ ಪಶು ಸಂಗೋಪನೆ ಸಚಿವರ ಪ್ರಭು ಚೌವಾಹ 68ಎಂಬುಲೆನ್ಸ್ ಲೋಕಾರ್ಪಣೆ ಗೊಳಿಸಿದ ಕ್ಷಣ
ರಕ್ಷಣೆಯು ಪ್ರಧಾನಿ ಮೋದಿ ಅವರ ಸಂಕಲ್ಪವಾಗಿದ್ದು, ಅವರ ಕನಸಿನ ಕೂಸಾಗಿ 68 ಸಂಚಾರಿ ಪಶು ಚಿಕಿತ್ಸಾ ವಾಹನಗಳು ಲೋಕಾರ್ಪಣೆಗೊಂಡಿವೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು ಬಿ. ಚವ್ಹಾಣ್ ಹೇಳಿದರು.
ಅವರು ಮಂಗಳವಾರ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರದಡಿಯಲ್ಲಿ ನಗರದ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಚಾರಿ ಪಶು ಚಿಕಿತ್ಸಾ ಘಟಕಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈ ಹಿಂದೆ 15 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಪ್ರಯೋಗಿಕವಾಗಿ ಆರಂಭಿಸಲಾಗಿತ್ತು, ಅವುಗಳ ಯಶಸ್ಸನ್ನು ಮನಗಂಡು ಕೇಂದ್ರ ಸರ್ಕಾರ 275 ಸಂಚಾರಿ ಚಿಕಿತ್ಸಾ ವಾಹನಗಳಿಗೆ ಮಂಜುರಾತಿ ನೀಡಿದೆ. ರೈತರ 1962 ಸಂಖ್ಯೆಗೆ ಅಥವಾ 8277100200 ಕರೆ ಮಾಡುವ ಮೂಲಕ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಉಪಯೋಗ ಪಡೆಯಬಹುದು. ಈ ಯೋಜನೆಯ ನಿರ್ವಣೆಗೆ ಕೇಂದ್ರ ಶೇ.60, ರಾಜ್ಯ ಶೇ.40 ಹಣ ವಿನಿಯೋಗ ಮಾಡಲಿದೆ ಎಂದು ಮಾಹಿತಿ ನೀಡಿದರು.