ವೀರಭದ್ರೇಶ್ವರ ಸರಳ ಜಾತ್ರೆ ಆಚರಣೆ : ಶಾಸಕ ರಾಜಶೇಖರ ಪಾಟೀಲ.
ವೀರಭದ್ರೇಶ್ವರ ಸರಳ ಜಾತ್ರೆ ಆಚರಣೆ : ಶಾಸಕ ರಾಜಶೇಖರ ಪಾಟೀಲ.
ಹುಮನಾಬಾದ: ಕಡ್ಡಾಯವಾಗಿ ಕೊರೊನಾ ನಿಯಮಗಳು ಪಾಲಿಸಿಕೊಂಡು ಕುಲ ದೇವ ಶ್ರೀ ವೀರಭದ್ರೇಶ್ವರ ಜಾತ್ರೆ ಸರಳವಾಗಿ ಸಂಪ್ರದಾಯ ಪ್ರಕಾರ ಮಾಡೋಣ ಎಂದು
ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ 2021ರ ಜಾತ್ರಾ ಪೂರ್ವ ಸಿದ್ದತಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಜಾತ್ರೆಗಳು ರದ್ದುಗೊಳಿಸಲಾಗಿದೆ. ಧಾರ್ಮಿಕ ಆಚರಣೆಗಳು ಮಾತ್ರ ನಡೆದಿದ್ದು, ಇಲ್ಲಿನ ಕುಲ ದೇವ ವೀರಭದ್ರೇಶ್ವರ ಜಾತ್ರೆಯು ಕೂಡ ಸರಳವಾಗಿ ಆಚರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜತೆಗೆ ಚರ್ಚೆ ನಡೆದಿದೆ.
ದೇಶದ ಪ್ರಧಾನಿಗಳು ಕೂಡ ಕೊರೊನಾ ನಿಯಮಗಳ ಕುರಿತು ಮಾಹಿತಿ ನೀಡಿದ್ದಾರೆ.
ವೀರಭದ್ರೇಶ್ವರ ಜಾತ್ರೆ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಾತ್ರೆಯಾಗಿದೆ. ಲಕ್ಷಾಂತರ ಭಕ್ತರು ಭಾಗವಹಿಸುವ ಜಾತ್ರೆ ಇದ್ದಾಗಿದ್ದು, ಧಾರ್ಮಿಕ ಆಚರಣೆಗಳು ಮಾತ್ರ ಸಿಮೀತಕ್ಕೆ ಅಧಿಕಾರಿಗಳು ಅವಕಾಶ ಕಲ್ಪಿಸುತ್ತಿದ್ದಾರೆ. ಪರಂಪರೆಯಂತೆ ಜಾತ್ರೆ ನಡೆಯುತ್ತಿದ್ದು, ಪರಂಪರೆ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಪಟ್ಟಣದ ಹಿರೇಮಠ ಸಂಸ್ಥಾನದ ರೇಣುಕ ವೀರ ಗಂಗಾಧರ ಶಿವಾಚಾರ್ಯರು ಮಾತನಾಡಿ, ಒಡೆದ ಹೋದ ಸಂಭಂದಗಳು ಒಂದು ಮಾಡುವ ಕಾರ್ಯ ಜಾತ್ರೆಗೆ ಇದೆ. ಎಲ್ಲಾ ಭಕ್ತರು ಒಂದಾಗಿ ಸರ್ಕಾರದ ನಿಯಮಗಳು ಪಾಲಿಸಿಕೊಂಡು ಜಾತ್ರೆ ಮಾಡಬೇಕು. ನಮ್ಮ ಭಕ್ತಿ ಇತರೆ ಜನರಿಗೆ ಮಾದರಿಯಾಗಬೇಕು. ಕುಲದೇವ ಕೊರೊನಾ ಮಹಾಮಾರಿ ನಾಶಮಾಡಲಿ ಎಂದು ಹೇಳಿದರು.
ತಹಶೀಲ್ದಾರ ನಾಗಯ್ಯಾ ಹಿರೇಮಠ ಮಾತನಾಡಿ, ಕೊರೊನಾ ಮಹಾ ಮಾರಿ ಹಾಗೂ ಹೊಸ ಮಾದರಿಯ ರೂಪಾಂತರ ವೈರಸ್ ಆತಂಕ ಹೆಚ್ಚಾಗಿದ್ದು, ಜಾತ್ರೆ ಕೆವಲ ಧಾರ್ಮಿಕ ಆಚರಣೆಗೆ ಮಾತ್ರ ನಡೆಯಲ್ಲಿದೆ. ಕೆಲ ಭಕ್ತರ ಮಾತ್ರ ವಿಚಿಧ ಆಚರಣೆಯಲ್ಲಿ ಭಾಗವಹಿಸಬಹುದು. ಯಾವುದೇ ಅಂಗಡಿಗಳು ಹಾಕಲು ಅವಕಾಶ ಇಲ್ಲ. ಅಲ್ಲದೆ, ದೇವಸ್ಥಾನದಿಂದ ಒಂದು ಕಿ.ಮೀ ದೂರದ ವರೆಗೆವ ನಡೆಯುವ ಮೆರವಣಿಗೆ ಎಲ್ಲಿಯೂ ನಿಲ್ಲಿಸಲು ಅವಕಾಶ ಇಲ್ಲ. ಬೇರೆ ರಾಜ್ಯಗಳಿಂದ ಭಕ್ತರು ಜಾತ್ರೆಗೆ ಬರುವಂತಿಲ್ಲ. ಜಾತ್ರೆ ನಿಷೇಧಿಸಿ ಆದೇಶ ಬರಲ್ಲಿದೆ. ಕೊರೊನಾ ನಿಯಮಗಳು ಕಡ್ಡಾಯ ಪಾಲನೆ ಮಾಡಬೇಕು ಎಂದು ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಡಾ। ಚಂದ್ರಶೇಖರ ಪಾಟೀಲ, ಡಿವೈಎಸ್ಪಿ ಸೋಮಲಿಂಗ ಕುಂಬಾರ, ಸಿಪಿಐ ಮಲ್ಲಿಕಾರ್ಜುನ ಯಾತನೂರ್, ತಹಶೀಲ್ದಾರ ನಾಗಯ್ಯಾ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಪಿಎಸ್ಐ ರವಿಕುಮಾರ, ಮಾಜಿ ಜಿಪಂ ಸದಸ್ಯ ವೀರಣ್ಣಾ ಪಾಟೀಲ, ಅಂಬೇಡ್ಕರ್ ನಿಗಮದ ಸದಸ್ಯ ಬಸವರಾಜ ಆರ್ಯ, ಮಲ್ಲಿಕಾರ್ಜುನ ಮಾಳಶೆಟ್ಟಿ, ದತ್ತಕುಮಾರ ಚಿದ್ರಿ ಸೇರಿದಂತೆ ಅನೇಕ ಭಕ್ತರು ವಿವಿಧ ಸಮಿತಿಗಳ ಸದಸ್ಯರು ಭಾಗವಹಿಸಿದರು.
Date: 01-01-2021
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















