ಕಾಗದದ ವಿಮಾನ ಹಾರಿಸಿ ಆಕ್ರೋಷ
ಬೀದರ: ಬೀದರನಲ್ಲಿ ವಿಮಾನಯಾನ ಕಾಲಮಿತಿಯಲ್ಲಿ ಪ್ರಾರಂಭಿಸದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಎದುರಿಗೆ ಕಾಗದದ ವಿಮಾನ ಹಾರಿಸಿ ಆಕ್ರೋಷ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದಿದೆ.
ವಿರುಪಾಕ್ಷ ಗಾದಗಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರಿಗೆ ಘೇರಾವ ಹಾಕಿ ಯಾವ ಕಾರಣಕ್ಕೆ ಬೀದರ ನಲ್ಲಿ ವಿಮಾನಯಾನ ಸೇವೆ ಆರಂಭ ಆಗುತ್ತಿಲ್ಲ. ಎಲ್ಲಾ ಸೌಲಭ್ಯಗಳು ಇರುವ ಕಡೆಗೆ ಮೊದಲು ವಿಮಾನ ಹಾರಬೇಕಿತ್ತು. ಆದರೆ, ನೆರೆಯ ಕಲಬುರಗಿ ನಗರದಲ್ಲಿ ಹೊಸ ಯೋಜನೆ ಅನುಷ್ಠಾನಗೊಂಡು ವಿಮಾನ ಹಾರಾಟ ಶುರುವಾಗಿದೆ. ಇಲ್ಲಿನ ರಾಜಕೀಯ ಇಚ್ಛಾ ಶಕ್ತಿ ಕೊರತೆಯಿಂದ ನಾಗರಿಕ ವಿಮಾನಯಾನ ಪ್ರಾರಂಭವಾಗುತ್ತಿಲ್ಲ ಎಂದು ನೇರವಾಗಿ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಚೌವ್ಹಾಣ್ ಈ ಕುರಿತು ದೆಹೆಲಿಗೆ ತೆರಳಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಇದಕ್ಕೆ ಒಪ್ಪದ ಸಂಘಟಕರು ಇದು ರಾಜ್ಯ ಸರ್ಕಾರದಿಂದ ಆಗಬೇಕಿರುವ ಕೆಲಸ ಆಗಿದೆ. ಎಂ.ಜಿ.ಆರ್ ಸಂಸ್ಥೆಯೊAದಿಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಳ್ಳಬೇಕಾಗಿದೆ. ಮೊದಲು ಈ ಕಡೆಗೆ ಗಮನ ಹರಿಸಿ, ಎಷ್ಟು ತಿಂಗಳಲ್ಲಿ ಯೋಜನೆ ಪ್ರಾರಂಭಿಸುತ್ತಿರಿ ಎಂದು ಪ್ರಶ್ನಿಸಿದರು. ಇದಕ್ಕೆ ಮತ್ತೆ ಉತ್ತರಿಸಿದ ಸಚಿಒವ ನಾನು ಸುಳ್ಳು ಹೇಳುವುದಿಲ್ಲ. ಈ ಬಗ್ಗೆ ತಿಳಿದುಕೊಂಡು ವಿಮಾನಯಾನ ಹಾರಾಟಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕರ್ನಾಟಕ ರಕ್ಷಣಾವೇದಿಕೆಯ ಪ್ರಶಾಂತ ಭಾವಿಕಟ್ಟಿ, ಪೀಟರ್ ಚಿಟಗುಪ್ಪಾ, ಕನ್ನಾಡಂಬೆ ಬಳಗದ ಧನರಾಜ ರಂಜೋಳೆ ಸೇರಿದಂತೆ ಅನೇಕರು ಇದ್ದರು.
Date:23-11-2019
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …

















