Home ನಿಮ್ಮ ಜಿಲ್ಲೆ ಬೀದರ ಇಂದಿನಿದ ಹಳ್ಳಿಖೇಡ(ಕೆ) ಶರಣ ಕಿನ್ನರಿ ಬೊಮ್ಮಯನವರ 53ನೇ ಜಾತ್ರಾ ಮಹೋತ್ಸವ

ಇಂದಿನಿದ ಹಳ್ಳಿಖೇಡ(ಕೆ) ಶರಣ ಕಿನ್ನರಿ ಬೊಮ್ಮಯನವರ 53ನೇ ಜಾತ್ರಾ ಮಹೋತ್ಸವ

ಇಂದಿನಿದ ಹಳ್ಳಿಖೇಡ(ಕೆ) ಶರಣ ಕಿನ್ನರಿ ಬೊಮ್ಮಯನವರ 53ನೇ ಜಾತ್ರಾ ಮಹೋತ್ಸವ

ಹುಮನಾಬಾದ:ಆ.14/ ತಾಲೂಕಿನ ಹಳ್ಳಿಖೇಡ(ಕೆ) ಗ್ರಾಮದ ಶರಣ ಕಿನ್ನರಿ ಬೊಮ್ಮಯ್ಯನವರ 53ನೇ ಜಾತ್ರಾ ಮಹೋತ್ಸವ ಆ.14 ರಿಂದ ಆ.19ರ ವರೆಗೆ ನಡೆಯಲ್ಲಿದೆ ಎಂದು ದೇವಸ್ಥಾನ ಪಂಚ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ.14ರಂದು ಪಾದಪೂಜೆ ಹಾಗೂ ಉದ್ಘಾಟನಾ ಸಮಾರಂಭ ನಡೆಯಲ್ಲಿದ್ದು, ಬೇಳಗಿ ಶಿವಲಿಂಗೇಶ್ವರ ಸಂಸ್ಥಾನದ ಶಿವಲಿಂಗ ಮಹಾಸ್ವಾಮಿಗಳು, ಚರಮೂರ್ತಿ ಸಿದ್ಧರಾಮ ಸ್ವಾಮಿಗಳು, ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ, ಸಾಹಿತಿ ಕಲ್ಯಾಣರಾವ ಪಾಟೀಲ, ಡಾ| ಶರಣಬಸಪ್ಪ ವಡ್ಡನಕೇರಿ ಸೇರಿದಂತೆ ಅನೇಕ ಗಣ್ಯರ ಮಧ್ಯದಲ್ಲಿ ಉದ್ಘಾಟನೆ ಸಮಾರಂಭ ನಡೆಯಲ್ಲಿದೆ.

¸ಆ.15ರಂದು ಧರ್ಮಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲ್ಲಿದ್ದು, ಸದಲಾಪೂರದ ಸಿದ್ಧಲಿಂಗ ಶಿವಾಚಾರ್ಯರು, ಡೊಂಗರಗಾAವ ರೇವಣಸಿದ್ದೇಶ್ವರ ಮಠದ ಉದಯರಾಜಿಯೋಗೇಂದ್ರ ಶಿವಾಚಾರ್ಯರು, ಹಳ್ಳಿಖೇಡ(ಕೆ) ಹಿರೇಮಠದ ಚರಮೂರ್ತಿ ಸಿದ್ಧರಾಮ ಮಹಾಸ್ವಾಮಿಗಳು, ವಿಧಾನ ಪರಿಷತ್ ಸದಸ್ಯರಾದ ಡಾ| ಚಂದ್ರಶೇಖರ ಪಾಟೀಲ, ಮಾಜಿ ಜಿಪಂ ಸದಸ್ಯ ವೀರಣ್ಣಾ ಪಾಟೀಲ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲ್ಲಿದ್ದಾರೆ. ಆ.16ರಂದು ಧರ್ಮಸಭೆ ಹಾಗೂ ಜನಪದ ಸಂಜೆ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದ್ದು, ಯಡ್ರಮಿ ಮುರಘೇಂದ್ರ ಶಿವಯೋಗಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಕಲ್ಯಾಣ ಕರ್ನಾಟಕ ಮಾನ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಡಾ| ಬಸವರಾಜ ಪಾಟೀಲ ಸೇಡಂ, ಧಾರವಾಡದ ಹ್ಯಾಸ ಕಲಾವಿಧ ಮೊಬೈಲ್ ಮಲ್ಲ ಖ್ಯಾತಿಯ ಮಲ್ಲಪ್ಪ ಹೊಂಗಲ್, ಬಸವರಾಜ ಗುಡ್ಡಪ್ಪನವರ್ ಕಾರ್ಯಕ್ರಮ ನೀಡಲ್ಲಿದ್ದಾರೆ. ಆ.19ರಂದು ಸಮಾರೋಪ ಹಾಗೂ ಸಂಗೀತ ಸಮಾರೋಪ ನಡೆಯಲ್ಲಿದೆ. ಕಾರಣ ಕಿನ್ನರಿ ಬೊಮ್ಮಯನವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಕಮೀಟಿ ಅಧ್ಯಕ್ಷ ಮಲಯ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನಾಂಕ: 14/08/2022 : Time:1:00pm

www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …