Home ನಿಮ್ಮ ಜಿಲ್ಲೆ ಬೀದರ ಬೀದರನಲ್ಲಿ ಕೋವಿಡ್-19 ನೂತನ ಪ್ರಯೋಗಾಲಯ ಉದ್ಘಾಟನೆ

ಬೀದರನಲ್ಲಿ ಕೋವಿಡ್-19 ನೂತನ ಪ್ರಯೋಗಾಲಯ ಉದ್ಘಾಟನೆ

ಬೀದರನಲ್ಲಿ ಕೋವಿಡ್-19 ಮೊಲಿಕ್ಯೂಲರ್
ವೈರಾಲೋಜಿ ನೂತನ ಪ್ರಯೋಗಾಲಯ ಉದ್ಘಾಟನೆ

ಬೀದರ:  ಬೀದರನ ಬಹುಜನರ ನಿರೀಕ್ಷೆಯಂತೆ ಕೋವಿಡ್-19 ಮೊಲಿಕ್ಯೂಲರ್ ವೈರಾಲೋಜಿ ನೂತನ ಪ್ರಯೋಗಾಲಯ ಆರಂಭಕ್ಕೆ ಬೀದರ ಜಿಲ್ಲಾ ಕೇಂದ್ರದಲ್ಲಿ ಜೂನ್ 1ರಂದು ಚಾಲನೆ ನೀಡಲಾಯಿತು.

ನಗರದ ಬಿಮ್ಸ್ ಕಾಲೇಜಿನಲ್ಲಿ ಜೂನ್ 1ರಂದು ದೀಪ ಬೆಳಗಿಸುವ ಮೂಲಕ ಪಶು ಸಂಗೋಪನೆ, ಹಜ್ ಮತ್ತು ವಕ್ಫ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಪ್ರಯೋಗಾಲಯವನ್ನು ಉದ್ಘಾಟಿಸಿದರು.

ಬೀದರ ನಗರದಲ್ಲೇ  ಕೋವಿಡ್-19 ವೈರಾಣು ಪ್ರಯೋಗಾಲಯ ಆರಂಭಗೊಂಡಿರುವುದರಿಂದ ಬೀದರ ಜನತೆಯ ಆರೋಗ್ಯ ಸೇವೆಯ ಹಿತದೃಷ್ಟಿಯಿಂದ ಉತ್ತಮ ಪ್ರಯತ್ನವಾಗಿದೆ. ಈ ಮೊಲಿಕ್ಯೂಲರ್ ವೈರಾಲೋಜಿ (ಕೋವಿಡ್-19) ಪ್ರಯೋಗಾಲಯದಿಂದ ಬೀದರ ಜಿಲ್ಲೆಯ ಜನತೆಗೆ ಮುಂಬರುವ ದಿನಗಳಲ್ಲಿ ಕೋವಿಡ್-19 ಸೋಂಕಿತ ರೋಗಿಗಳ ತಪಾಸಣೆಗೆ ಹಾಗೂ ಶೀಘ್ರ ಚಿಕಿತ್ಸೆಗೆ ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಿದರು.

ಬೀದರನಲ್ಲಿ ಇಲ್ಲಿವರೆಗೆ ಯಾವುದೇ ತರಹದ ವೈರಾಲಜಿ ಪ್ರಯೋಗಾಲಯ ಪರೀಕ್ಷೆಗಳು ಲಭ್ಯವಿದ್ದಿಲ್ಲ. ಪ್ರಸ್ತುತ ಗಂಟಲು ದ್ರವ ಮಾದರಿ ಇತ್ಯಾದಿ ಪರೀಕ್ಷೆಗಾಗಿ ಬೇರೆ ಜಿಲ್ಲೆಗೆ ರವಾನಿಸಿ ಮಾಹಿತಿ ಪಡೆಯಬೇಕಾಗುತ್ತಿತ್ತು. ಇದರಿಂದ ಸಮಯ ಬೇಕಾಗುತ್ತಿತ್ತು. ಜಿಲ್ಲೆಗೆ ಈ ಪ್ರಯೋಗಾಲಯ ಅತ್ಯಗತ್ಯವಿದೆ ಎಂದು ಭಾವಿಸಿ ಸ್ಥಾಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇದೆ ವೇಳೆ ಸಚಿವರು ತಿಳಿಸಿದರು.

ದಿನಕ್ಕೆ 600 ಮಾದರಿ ಪರೀಕ್ಷೆ: ಬ್ರಿಮ್ಸ್ ಸಂಸ್ಥೆಯ ಮಿನಿ ಜೀವಶಾಸ್ತç ವಿಭಾಗದ ಅಧೀನದಲ್ಲಿ ಮೊಲಿಕ್ಯೂಲರ್ ವೈರಾಲಜಿ ಪ್ರಯೋಗಾಲಯವು ರಾಜ್ಯ ಪ್ರಕೃತಿ ವಿಕೋಪ ನಿಗ್ರಹಣ ನಿಧಿಯಿಂದ ನಿರ್ಮಾಣಗೊಂಡಿದೆ. ಇದು ಐಸಿಎಂಆರ್‌ನಿಂದ ಮಾನ್ಯತೆ ಹೊಂದಿದೆ. ಇಲ್ಲಿ ಒಬ್ಬ ಮುಖ್ಯ ಸಂಶೋಧಕರು, ಇಬ್ಬರು ವಿಜ್ಞಾನಿಗಳು ಹಾಗೂ ಪರಿಣಿತ ಪ್ರಯೋಗಾಲಯ ತಂತ್ರಜ್ಞರು ಇರುತ್ತಾರೆ. ಇವರು ಐಸಿಎಂಆರ್ ಮಾರ್ಗಸೂಚನೆಯಂತೆ ಕಾರ್ಯನಿರ್ವಹಿಸುವರು. ಈ ಪ್ರಯೋಗಾಲಯವು ಮೂರು ಪಾಳೆಯದಲ್ಲಿ ಹಾಗೂ ಪೂರ್ಣ ಪ್ರಮಾಣ ಕಾರ್ಯನಿರ್ವಹಿಸಿದಲ್ಲಿ ದಿನಕ್ಕೆ 600 ಮಾದರಿ ಪರೀಕ್ಷೆಗಳನ್ನು ಮಾಡುವ ಸಾರ‍್ಥö್ಯ ಹೊಂದಿರುತ್ತದೆ ಎಂದು ಇದೆ ವೇಳೆ ಬ್ರಿಮ್ಸ್ ನಿರ್ದೇಶಕರಾದ ಡಾ। ಶಿವಕುಮಾರ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ,  ಸಂಸದರಾದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಖಾಶೆಂಪೂರ, ರಹೀಂ ಖಾನ್, ಬಿ.ನಾರಾಯಣರಾವ್,  ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಜಿಲ್ಲಾ ಪಂಚಾಯತ್ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಬೀದರ ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ವಿ.ಜಿ.ರೆಡ್ಡಿ, ವೈದ್ಯಾಧಿಕಾರಿಗಳಾದ ಡಾ.ರಥಿಕಾಂತ ಸ್ವಾಮಿ, ಡಾ.ವಿಜಯಕುಮಾರ ಅಂತಪ್ಪನವರ ಹಾಗೂ ಇತರರು ಇದ್ದರು.

Date:01-06-2020

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…