Home ನಿಮ್ಮ ಜಿಲ್ಲೆ ಬೀದರ ಕರೋನಾ ದಿಂದ ಮೃತಪಟ್ಟ ಕುಟುಂಬಗಳಿಗೆ ಜೆಡಿಎಸ್ ವತಿಯಿಂದ ಸಹಾಯ ಧನ ವಿತರಣೆ

ಕರೋನಾ ದಿಂದ ಮೃತಪಟ್ಟ ಕುಟುಂಬಗಳಿಗೆ ಜೆಡಿಎಸ್ ವತಿಯಿಂದ ಸಹಾಯ ಧನ ವಿತರಣೆ

ಕರೋನಾ ದಿಂದ ಮೃತಪಟ್ಟ ಕುಟುಂಬಗಳಿಗೆ ಜೆಡಿಎಸ್ ವತಿಯಿಂದ ಸಹಾಯ ಧನ ವಿತರಣೆ

ಹುಮನಾಬಾದ: ಕೊರೊನಾ ಮಹಾಮಾರಿಗೆ ತಾಲೂಕಿನ ಹಣಕುಣಿ ಗ್ರಾಮದಲ್ಲಿ ಮೃತಪಟ್ಟ ಎರಡು ಕುಟುಂಬಗಳಿಗೆ ಜೆಡಿಎಸ್ ಪಕ್ಷದ ವತಿಯಿಂದ ಕುಟುಂಬಗಳಿಗೆ ಸ್ವಂತನ ಹೇಳಿ ಸಹಾಯ ಧನ ವಿತರಣೆ ಮಾಡಿರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸುರೇಶ ಸೀಗಿ, ಮಹೇಶ ಅಗಡಿ, ಸತೀಶ ರಾಂಪೂರೆ, ಅಬ್ದುಲ್ ರೆಹೆಮಾನ್ ಗೋರೆಮಿಯ್ಯಾ, ಚೇತನ ಗೋಖಲೆ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ತಾಲೂಕಿನ ಅನೇಕ ಕುಟುಂಬಗಳು ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಕೆಲ ಕುಟುಂಬಗಳು ಅನೇಕ ದುರಂತಕ್ಕೆ ಕಾರಣವಾಗಿದ್ದು, ಅಂತಹ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡುವ ಜೊತೆಗೆ ಅಂತಹ ಕುಟುಂಬಗಳಲ್ಲಿನ ಮಕ್ಕಳಿಗೆ ಶಿಕ್ಷಣ ಜೊತೆಗೆ ಸರ್ಕಾರಿ ನೌಕರಿ ನೀಡುವಂತೆ ಒತ್ತಾಯಿಸಿದರು. ಜೆಡಿಎಸ್ ಪಕ್ಷದ ವತಿಯಿಂದ ಆಯ್ದ ಕುಟುಂಬಗಳಿಗೆ ಆರ್ಥಿಕ ಸಹಾಯ ಧನ ನೀಡಿ ಕುಟುಂಬಗಳ ನೇರವಿಗೆ ಧಾವಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಶಿವಪುತ್ರ ಮಾಳಗೆ, ಗೌತಮ ಸಾಗಾರ, ವೀರೇಶ ಸೀಗಿ, ಶ್ರಿನಿವಾಸ ರೆಡ್ಡಿ, ಸಂಜುರೆಡ್ಡಿ, ಬಾಬುರಾವ ಪಿಸ್ಕೆ, ಖಾಜಾಮಿಯ್ಯಾ ಸೇರಿದಂತೆ ಅನೇಕರು ಇದ್ದರು.

 

Date:30-07-2021 : Time: 1:00PM : www.kknewsonline.in

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…