Home ನಿಮ್ಮ ಜಿಲ್ಲೆ ಕಲಬುರಗಿ ಬೀದರ್:ಮುತ್ತಂಗಿ ಶ್ರೀಗುರುಪಾದೇಶ್ವರ ಮಂದಿರಕ್ಕೆ ಟ್ರಸ್ಟ್ ರಚನೆ

ಬೀದರ್:ಮುತ್ತಂಗಿ ಶ್ರೀಗುರುಪಾದೇಶ್ವರ ಮಂದಿರಕ್ಕೆ ಟ್ರಸ್ಟ್ ರಚನೆ

ಖ್ಯಾತ ವೈದ್ಯರಾದ ಡಾ.ಸಿದ್ದಯ್ಯಾ ಸ್ವಾಮಿ ಮಠ ಮಾಹಿತಿ

ಮುತ್ತಂಗಿಯ ಶ್ರೀ ಗುರುಪಾದೇಶ್ವರ ಪುಣ್ಯಕ್ಷೇತ್ರಕ್ಕೆ ಟ್ರಸ್ಟ್ ರಚನೆ:ಡಾ.ಸಿದ್ದಯ್ಯಾ ಮಠ

ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ಮುತ್ತಂಗಿ ಗ್ರಾಮದ ಶ್ರೀ ಗುರುಪಾದೇಶ್ವರ ದೇವಸ್ಥಾನ ಭಕ್ತರ ದೇಣಿಗೆಯಿಂದಲೇ ಅಭಿವೃದ್ಧಿ ಪಥದತ್ತ ಸಾಗಿದ್ದು, ಸಹಸ್ರಾರು ಭಕ್ತರ ಶ್ರದ್ಧೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಮುತ್ತಂಗಿ ಶಿವಾರದ ಚಿಮ್ಮನಚೋಡ ರಸ್ತೆಗೆ ಹೊಂದಿಕೊಂಡ ನಿಸರ್ಗ ಸೊಬಗಿನ ಎರಡು ಎಕರೆ ಭೂಮಿಯಲ್ಲಿ ಬೃಹತ ದೇವಸ್ಥಾನ ನಿರ್ಮಾಣವಾಗುತ್ತಿದ್ದು, ಈ ದೇವಸ್ಥಾನದಲ್ಲಿ ಶ್ರೀ ಗುರುಪಾದೇಶ್ವರ ಗದ್ದುಗೆ ಮತ್ತು ಶ್ರೀ ಗುರುನಾಗಲಿಂಗೇಶ್ವರ ಗದ್ದುಗೆ ಇರುತ್ತದೆ.

ಶ್ರೀ ಗುರುಪಾದೇಶ್ವರ ರವರನ್ನು ಪವಾಡ ಪುರುಷರು ಎಂದೇ ಖ್ಯಾತಿ ಹೊಂದಿರುತ್ತಾರೆ. ಅವರ ಪವಾಡಗಳನ್ನು ಬಣ್ಣಿಸಲಕ್ಕೆ ಸಾಧ್ಯವಿಲ್ಲ. ಮುತ್ಯಾ ರವರು ತಮ್ಮ ಎಲ್ಲಾ ಭಕ್ತರ ಕನಸಿನಲ್ಲಿ ಇಂತಹ ದಿವಸ ನಾನು ನನ್ನ ಪರಮ ಶಿಷ್ಯನಾದ ಶ್ರೀ ನಾಗಯ್ಯಾ ಸ್ವಾಮಿರವರ ಮನೆಯಲ್ಲಿ ಅಂಗೈಕ್ಯ ಆಗಲಿದ್ದೇನೆ ಎಂದು ಮೊದಲೆ ತಿಳಿಸಿದ್ದು ಗಮನಾರ್ಹ.

ಅದೆ ಪ್ರಕಾರ ಅವರು ಮುತ್ತಂಗಿಗೆ ಬಂದು ತಮ್ಮ ಶಿಶ್ಯರಾದ ಶ್ರೀ ನಾಗಯ್ಯಾ ಸ್ವಾಮಿ ಮತ್ತು ಅವರ ಧರ್ಮಪತ್ನಿ ಮಡಲಿನಲ್ಲಿ 1981ರಲ್ಲಿ ಲಿಂಗೈಕ್ಕೆ ಆಗಿರುತ್ತಾರೆ. ಅವರು ಒಬ್ಬ ಸತಪುರುಷರು ಇರುವ ಕಾರಣ ಅವರ ನಿರಾಕಾರದಲ್ಲಿ ಅಂಗೈಕ್ಕೆ ಆಗಿರುತ್ತಾರೆ. ಭಕ್ತರ ಉದ್ಧಾರಕ್ಕಾಗಿ ಮಂದಿರವನ್ನು ಗುರುಗಳ ಇಚ್ಛೆಯಂತೆ ಆಕಾರ ರೂಪದಲ್ಲಿ ಮಂದಿರ ನಿರ್ಮಾಣವಾಗುತ್ತಿದೆ.ಮಂದಿರ ಸಲುವಾಗಿ ಗುರುಗಳ ಆದೇಶದಂತೆ ಇಲ್ಲಿಯವರೆಗೆ ಸರ್ಕಾರದಿಂದ ಯಾವ ತರಹದ ಅನುದಾನವನ್ನು ತೆಗೆದುಕೊಂಡಿರುವುದಿಲ್ಲ. ಶ್ರೀ ಗುರುಪಾದೇಶ್ವರ ರವರ ಪುಣ್ಯತಿಥಿ ವರ್ಷದ ಕಾರ್ತಿಕ ಏಕಾದಶಿ ದಿವಸ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಶ್ರೀ ಗುರುಪಾದೇಶ್ವರ ರವರ ಮೂಲ ದೇವಸ್ಥಾನ ಇರುವುದು ಮುತ್ತಂಗಿಯ ಅವರ ಶಿಷ್ಯರಾದ ‘ಶ್ರೀ’ ನಾಗಯ್ಯಾ ಸ್ವಾಮಿಯವರ ಹೊಲದಲ್ಲಿ ಇರುತ್ತದೆ. ಶ್ರೀ ಗುರುಪಾದೇಶ್ವರ ರವರ ಹೆಸರಿನಿಂದ ಎಲ್ಲಾದರೂ ದೇವಸ್ಥಾನವಿದ್ದರೆ, ಆ ದೇವಸ್ಥಾನವು ಈ ದೇವಸ್ಥಾನಕ್ಕೆ ಯಾವುದೇ ತರಹ ಸಂಬಂಧಪಟ್ಟರುವುದಿಲ್ಲ.

ರಾಜ್ಯದ ಮುಜುರಾಯಿ ದೇವಾಲಯದೊಳಗೆ ಮಾತನಾಡುವುದು, ಫೋಟೋ, ವಿಡಿಯೋ, ತೆಗೆಯುವುದು, ಹಾಗೂ ರೀಲ್ಸ್ ಮಾಡುವುದನ್ನು ನಿಷೇಧಿಸಲಾಗಿರುತ್ತದೆ.
ಶ್ರೀ ಗುರುಪಾದೇಶ್ವರ ದೇವಸ್ಥಾನದಲ್ಲಿಯೂ ಕೂಡ ಇದನ್ನು ನಿಷೇಧಿಸಲಾಗಿರುತ್ತದೆ.

ಶ್ರೀ ಗುರುಪಾದೇಶ್ವರ ದೇವಸ್ಥಾನಕ್ಕೆ ರಜಿಸ್ಟರ್ ನಂ:62/18-19 BK (IV) ಪ್ರಕಾರ ಶ್ರೀ ಗುರುಪಾದೇಶ್ವರ ಟೆಂಪಲ್ ಟ್ರಸ್ಟ್ ಇರುತ್ತದೆ. ಈ ಟ್ರಸ್ಟ್‌ಗೆ ಕೆಳಗಿನಂತೆ ಅಧ್ಯಕ್ಷರು, ಖಜಾಂಚಿ ಮತ್ತು ಕಾರ್ಯದರ್ಶಿ ಇರುತ್ತಾರೆ. ಈ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಸಿದ್ದಯ್ಯಾ ತಂದೆ ನಾಗಯ್ಯಾ ಮಠ (Dr.S.N.Math) ರವರ ನೇತ್ರತ್ವದಲ್ಲಿ ಮಂದಿರ ನಿರ್ಮಾಣವನ್ನು ಆಗುತ್ತಿದೆ.

ಅಧ್ಯಕ್ಷರು:ಸಿದ್ದಯ್ಯಾ ಮಠ

(ಜೀವಿತಾವಧಿ ಅಧ್ಯಕ್ಷರು)

ಕಾರ್ಯದರ್ಶಿ:ಚನ್ನಯ್ಯಾ ಮಠ (ಜೀವಿತಾವಧಿ ಕಾರ್ಯದರ್ಶಿ)

ಖಜಾಂಚಿ:-
ಶಿವಶಂಕ್ರಯ್ಯಾ ಮಠ(ಜೀವಿತಾವಧಿ ಖಜಾಂಚಿ)

ಶ್ರೀ ಗುರುಪಾದೇಶ್ವರ ಮುತ್ಯಾ
ಗುರುಪಾದೇಶ್ವರ ಮಂದಿರಕ್ಕೆ ಇಗ ಟ್ರಸ್ಟ್ ರಚನೆ..

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…