ನಿರ್ಣಾ: ನಾಗಯ್ಯ ಸ್ವಾಮೀಜಿ ಪುಣ್ಯಸ್ಮರಣೋತ್ಸವ
ಮನುಷ್ಯನ ಜೀವನಕ್ಕೆ ಶಿಕ್ಷಣ, ಸಂಸ್ಕಾರ ಅವಶ್ಯ
ನಿರ್ಣಾ: ನಾಗಯ್ಯ ಸ್ವಾಮೀಜಿ ಪುಣ್ಯಸ್ಮರಣೋತ್ಸವ
ಮನುಷ್ಯನ ಜೀವನಕ್ಕೆ ಶಿಕ್ಷಣ, ಸಂಸ್ಕಾರ ಅವಶ್ಯ
ಪ್ರಜಾವಾಣಿ ವಾರ್ತೆ
ಚಿಟಗುಪ್ಪ:
ʼಜೀವನ ಉಜ್ವಲಗೊಳ್ಳಬೇಕಾದರೆ ಶಿಕ್ಷಣ ಮತ್ತು ಸಂಸ್ಕಾರ ಅವಶ್ಯʼ ಎಂದು ಬೀದರ್ ನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಬಾಬುರೆಡ್ಡಿ ಹೇಳಿದರು.
ನಿರ್ಣಾದ ನಾಗಯ್ಯ ವೀರಯ್ಯ ಮಠಪತಿ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ನಡೆದ ನಾಗಯ್ಯ ವೀರಯ್ಯ ಸ್ವಾಮೀಜಿ ಅವರ 26ನೇ ಸ್ಮರಣೋತ್ಸವ, ಅಪೆಕ್ಸ್ ನಂದಿನಿ ವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ. ಯಾವ ಶಿಕ್ಷಣದಿಂದ ಅಜ್ಞಾನ ದೂರವಾಗುತ್ತದೊ ಅದನ್ನು ಪರಿಪೂರ್ಣ ಸಾಕ್ಷಾತ್ಕಾರದ ದೀಕ್ಷಾ ಬೋಧನೆ ಎನ್ನಲಾಗುತ್ತದೆ ಎಂದರು.
ಜೆಸ್ಕಾಂ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಸಂಗಮೇಶ್ ಮಾತನಾಡಿ,ʼನಂದಿನಿ ವಿದ್ಯಾಲಯದಲ್ಲಿ
ನೀಡುತ್ತಿರುವ ಸಂಸ್ಕಾರಯುತ ಶಿಕ್ಷಣದಿಂದ ಮಕ್ಕಳ ಜೀವನ ಪಾವನಗೊಳ್ಳುತ್ತಿದೆ. ವಿದ್ಯಾಲಯ ಅಳವಿಡಿಸಿರುವ ಆರ್. ಎಫ್. ಆಯ್.ಡಿ, ಸಿಸಿ ಕ್ಯಾಮರಾ, ಸ್ವಯಂ ಚಾಲಿತ ಗಂಟೆ ಇತರ ತಂತ್ರಜ್ಞಾನ ವ್ಯವಸ್ತೆ ನಾಡಿನ ಎಲ್ಲ ಶಾಲೆಗಳಿಗೆ ಮಾದರಿಯಾಗಿದ್ದು, ಇಂತರ ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದಲ್ಲಿ ನೀಡುತ್ತಿರುವ ಮಠಪತಿ ಸಂಸ್ಥಾನದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಉಪನ್ಯಾಸಕ ನೀಲಕಂಠ ಇಸ್ಲಾಮಪುರ್ ಮಾತನಾಡಿ,ʼಬತ್ತಿ, ಪ್ರಣತೆ, ತೈಲ ಎಲ್ಲವೂ ಇದ್ದಾಗಲೂ ಜ್ಯೋತಿ ಬೆಳಗಿಸಲು ಚಾಲನ ಶಕ್ತಿ ಬೇಕಾಗುವಂತೆ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣಕ್ಕೆ ವಿದ್ಯಾಮಂದಿರಗಳ ಅವಶ್ಯಕತೆ ಇದ್ದು, ಬದುಕಿನಲ್ಲಿ ಯಶಸ್ಸು ಕಾಣಲು ನಿರಂತರ ಶ್ರಮ ವಹಿಸಬೇಕಾಗುತ್ತದೆ, ನಂದಿನಿ ವಿದ್ಯಾಲಯದಲ್ಲಿ ಬೆಳೆಯುತ್ತಿರುವ ಮಕ್ಕಳು ಭಾಗ್ಯಶಾಲಿಗಳಾಗಿ ಉತ್ತಮ ಶಿಕ್ಷಣ, ಸಂಸ್ಕಾರ ಕಲಿತು, ಸಂಸ್ಥೆಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಉದ್ಯಮಿ ಅಸ್ಲಾಮ ಮಿಯ್ಯ ಮಾತನಾಡಿ,ʼಆಧುನಿಕ ಯುಗದಲ್ಲಿ ಶಿಕ್ಷಣ ವ್ಯಾಪಾರಿಕರಣಗೊಳ್ಳುತ್ತಿದ್ದೂ, ನಂದಿನಿ ಸಂಸ್ಥೆ ಮಾತ್ರ ಸಮಾಜಕ್ಕೆ ಶಿಕ್ಷಣದ ಬೆಳಕನ್ನು ನೀಡುವುದಕ್ಕಾಗಿ ನಿಸ್ವಾರ್ಥದಿಂದ ಕಳೆದ 26 ವರ್ಷಗಳಿನಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದು ಮೆಚ್ಚಬೇಕಾಗಿದೆʼ ಎಂದರು.
ಪತ್ರಕರ್ತ ಶೈಲೇಂದ್ರ ಕಾವಡಿ ಪರಿಸರ ಜಾಗೃತಿ ಕುರಿತು ಮಾತನಾಡಿದರು. ಸಿಂದನಕೇರಾದ ಹೊನ್ನಲಿಂಗ ಸ್ವಾಮೀಜಿ ಸಹೋದರತ್ವ ಬಾಂಧವ್ಯ ಕುರಿತು ತಿಳಿಸಿದರು.

ಮುಂಬೈನ ಪಿ.ಟಿ.ಉಷಾ ಸ್ಥಾಪಿತ ಭಾರತ ಪ್ರತಿಭಾ ಅಕಾಡೆಮಿಯಿಂದ ರಾಜ್ಯ ಮಟ್ಟಕ್ಕೆ ಅಗ್ರ ಶ್ರೇಣಿ ಪಡೆದ ನಂದಿನಿ ವಿದ್ಯಾಲಯದ ಮಹೇಶ್ ಓಂಕಾರ್, ತನೀಶ್ ಓಂಕಾರ್, ಶ್ವೇತಾ ಈರಪ್ಪ, ಪ್ರಜ್ವಲ ಶಂಭುಲಿಂಗ್, ವಿಜಯಲಕ್ಷ್ಮಿ ಶಿವರಾಜ್ ಅವರಿಗೆ ಪ್ರಶಸ್ತಿ ಪತ್ರ ಗಣ್ಯರಿಂದ ವಿತರಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾಲಯಕ್ಕೆ ಅಗ್ರಶ್ರೇಣಿ ಪಡೆದಿದ್ದ ಅಜಯ ತುಕಾರಾಮ, ರವಿರಾಜ್ ಶಿವರಾಜ್, ಕರಿಮಸಾಬ್ ಮೀರಸಾಬ್ ಅವರಿಗೆ ಸನ್ಮಾನಿಸಲಾಯಿತು.
ಪತ್ರಕರ್ತ ಸಂಜುಕುಮಾರ ಬುಕ್ಕಾ, ಗಣ್ಯರಾದ ಅಶೋಕ ಲಚ್ಚನಗಾರ್, ವಿಠಲರೆಡ್ಡಿ ಚುಡಾ, ಮಚ್ಛಂದ್ರ ಪತ್ತಾರ್, ಘಾಳಯ್ಯ ಸ್ವಾಮಿ, ಸುಭಾಷ ಪಾಲಾಟಿ, ಮಲ್ಲಯ್ಯ ಸ್ವಾಮಿ, ಬಸವರಾಜ್ ಬನ್ನಳ್ಳಿ ಇತರರು ಇದ್ದರು. ಇಟಗಾ ಮುಕ್ತಿಮಠದ ಹಿರಿಯ ಪೀಠಾಧಿಪತಿ ಚನ್ನಮಲ್ಲೇಶ್ವರ ತ್ಯಾಗಿ ಸಾನಿಧ್ಯ ವಹಿಸಿದ್ದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಂಕರರಾವ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗುರುಸ್ವಾಮಿ ನಿರೂಪಿಸಿದರು, ಮುಖ್ಯಗುರು ಉಮಾಶ್ರೀ ವಂದಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















