ದೂರುದಾರನಿಂದ ಸುಳ್ಳು ಸಾಕ್ಷಿ..ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚನೆ…!!
ಬೀದರ್ ಜಿಲ್ಲಾ ಸತ್ರ ನ್ಯಾಯಾಲಯದಲ್ಲೊಂದು ಅಪರೂಪದ ಪ್ರಕರಣ
ಸಾಮಾನ್ಯವಾಗಿ ನ್ಯಾಯಾಲಯದ ದೂರುದಾರ ಅಐವಾ ಫೀರ್ಯಾದಿದಾರನ ಆಧಾರದ ಮೇಲೆ ಪ್ರಕರಣ ವಿಚಾರಣೆ ಮಾಡೋದನ್ನ ನಾವು ನೀವು ನೋಡಿರುತ್ತೆವೆ.ಆದ್ರೆ ಇಲ್ಲೋಬ್ಬ ದೂರುದಾರ ತಾನು ಕೊಟ್ಟ ದೂರಿನ ವಿರುದ್ದ ತಾನೇ ಸುಳ್ಳು ಸಾಕ್ಷಿ ಹೇಳಿ ಸಿಕ್ಕಿಹಾಕಿಕೊಂಡಿದ್ದು ಇಗ ಆತನ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಸೂಚನೆ ಕೊಟ್ಟ ಅಪರೂಪದ ಪ್ರಕರಣ ಬೀದರ್ ನಗರದ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ.

ಪ್ರಕರಣದ ಫಿರ್ಯಾದಿದಾರರಾದ ವೀರಶಟ್ಟಿ ಪ್ರಭುಶೆಟ್ಟಿ ಕುಂಚಿಗೆ ಸಾ. ಗುರುನಾನಕ್, ಬೀದರ ರವರ ಪತ್ನಿಯಾದ ಈಶ್ವರಿ ಅವರ ಹೆಸರಿನಲ್ಲಿರುವ ಬೀದರ ಹಮೀಲಾಪೂರ ಗ್ರಾಮದ ೪ಎಕರೆ ೨೦ಗುಂಟೆ ಜಮೀನನ್ನು ಬೀದರ ಜಿಲ್ಲಾಧಿಕಾರಿಗಳು ದಿ. 27-೦8-2012 ರಂದು ಭೂಪರಿವರ್ತನೆಯ ಆದೇಶವನ್ನು ಮಾಡಿದದ್ದರು. ಸದರಿ ಈ ಭೂ ಪರಿವರ್ತನೆ ಸಂಬಂಧಪಟ್ಟ ಕಚೇರಿಗಳಿಗೆ ಆದೇಶದ ಪ್ರತಿಗಳನ್ನು ಡಿಸಪ್ಯಾಚ್ ಮಾಡಲು ಜಿಲ್ಲಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಸೊಮಶೇಖರ ಪಾಟೀಲ ಅವರು ರೂ 5,೦೦೦/-ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ದಿನಾಂಕ 28-08-2012 ರಂದು ವೀರಶಟ್ಟಿ ಪ್ರಭುಶೆಟ್ಟಿ ಕುಂಚಿಗೆ ಅವರಿಂದ ಲಂಚದ ಹಣ ಪಡೆಯುವಾಗ ಕರ್ನಾಟಕ ಲೋಕಾಯುಕ್ತ ಬೀದರ ಪೊಲೀಸರು ನಡೆಸಿದ ಟ್ರಾö್ಯಪ್ನಲ್ಲಿ / ಕಾರ್ಯಚರಣೆಯಲ್ಲಿ ಲಂಚದ ಹಣದ ಸಹಿತ ಲೋಕಾಯುಕ್ತದ ಪೊಲೀಸರ ಬಲೆಗೆ ಸಿಕ್ಕಿಬಿದಿರುತ್ತಾರೆ.
ಈ ಬಗ್ಗೆ ಅಂದಿನ ಬೀದರ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ, ದೂರನ್ನು ದಾಖಲಿಸಿ, ಪೊಲೀಸ ನಿರೀಕ್ಷಕರಾದ ಭಾಸು ಚವ್ಹಾಣ ರವರು ತನಿಖೆ ನಡೆಸಿ, ಲಂಚ ನಿಷೇಧ ಕಾಯ್ದೆಯ ಕಲಂ ೭, ೧೩(೧)(ಡಿ) ಜೊತೆ ೧೩(೨) ಅಡಿಯಲ್ಲಿ ಆರೋಪಿ ಸೋಮಶೇಖರ ಕಾಶೆಪ್ಪಾ ಪಾಟೀಲ್ ಅವರ ವಿರುದ್ಧ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ನಂತರ ಮಾನ್ಯ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಧೀಶರ ನ್ಯಾಯಾಲವು ಪ್ರಕರಣ ವಿಚಾರಣೆ ಮಾಡಿ, ದಿ. 19-07-2023ರಂದು ಆರೋಪಿತನ ವಿರುದ್ಧ ಆರೋಪಗಳನ್ನು ಸಾಬೀತು ಆಗಿರುವುದರಿಂದ ಶಿಕ್ಷೆ ನೀಡಿ ತೀರ್ಪನನ್ನು ನೀಡಿದೆ.
ದಿ. 20-07-2023 ರಂದು ಲಂಚ ನಿಷೇಧ ಕಾಯ್ದೆಯ ೧೩(೨) ಕ್ಕೆ ಐದು ವರ್ಷ ಜೈಲು ಶಿಕ್ಷೆ ಮತ್ತು ೧ ಲಕ್ಷ ರೂ ದಂಡ ವಿಧಿಸಿದ್ದು, ದಂಡ ಭರಿಸಲು ತಪ್ಪಿದ್ದಲ್ಲಿ ೧ ವರ್ಷದ ಜೈಲು ಶಿಕ್ಷೆ ಮತ್ತು ಕಲಂ ೭ ಕ್ಕೆ ೩ ವರ್ಷ ಸಜೆ 5೦,೦೦೦/- ರೂ ದಂಡ ವಿಧಿಸಿದ್ದು, ದಂಡ ಭರಿಸಲು ತಪ್ಪಿದಲ್ಲಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.
ಈ ಪ್ರಕರಣವು ದೂರುದಾರ ವೀರಶೆಟ್ಟಿ ತಂದೆ ಪ್ರಭುಶೆಟ್ಟಿ ಕುಂಚಿಗೆ ರವರು ತನ್ನ ದೂರಿನ ವಿರುದ್ಧವಾಗಿ ಸುಳ್ಳು ಸಾಕ್ಷಿ ನೀಡಿದ್ದರಿಂದ, ಅಂದರೆ ಅಭಿಯೋಜನೆಯ ವಿರುದ್ಧವಾಗಿ ಸಾಕ್ಷಿ ನುಡಿದಿರುವುದರಿಂದ ಪ್ರತ್ಯೇಕ ಕ್ರಿಮಿನಲ ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶರಾದ ವಿಜಯಕುಮಾರ.ಎನ್ ಆನಂದಶೆಟ್ಟಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಧೀಶರು ಬೀದರ ಅವರು ನಿರ್ದೇಶನವನ್ನು ನೀಡಿರುತ್ತಾರೆ.
ಕರ್ನಾಟಕ ಲೋಕಾಯುಕ್ತ ಪರವಾಗಿ ಖ್ಯಾತ ವಿಶೇಷ ಸರಕಾರಿ ಅಭಿಯೋಜಕರಾದ ಕೇಶವರಾವ ಶ್ರೀಮಾಳೆ ಅವರು ವಾದ ಮಂಡಿಸಿದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…
















