Home ಸುದ್ದಿಗಳು ರಾಷ್ಟ್ರೀಯಸುದ್ದಿ ಡಿಸಿಸಿ ಬ್ಯಾಂಕ್ 6.81 ಕೋಟಿ ನಿವ್ವಳ ಲಾಭ : ಉಮಾಕಾಂತ ನಾಗಮಾರಪಳ್ಳಿ

ಡಿಸಿಸಿ ಬ್ಯಾಂಕ್ 6.81 ಕೋಟಿ ನಿವ್ವಳ ಲಾಭ : ಉಮಾಕಾಂತ ನಾಗಮಾರಪಳ್ಳಿ

ಸ್ವಸಹಾಯ ಗುಂಪುಗಳ ರಚನೆಮೂಲಕ ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಬೀದರ್ ಡಿಸಿಸಿ ಬ್ಯಾಂಕು ನಿವ್ವಳ ೬.೮೧ ಕೋಟಿ ರೂ. ಲಾಭ ಗಳಿಸಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಶೇರು ಬಂಡವಾಳ ಸಂಗ್ರಹ, ನಿಧಿ, ಠೇವಣಿ, ಹೂಡಿಕೆ, ದುಡಿಯುವ ಬಂಡವಾಳ ಹೀಗೆ ಎಲ್ಲದರಲ್ಲೂ ದಾಖಲೆಯ ಪ್ರಗತಿ ಸಾಧಿಸಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

ಬ್ಯಾಂಕಿನ ಡಾ| ಗುರುಪಾದಪ್ಪ ನಾಗಮರಪಳ್ಳಿ ಸಭಾಂಗಣದಲ್ಲಿ ಶುಕ್ರವಾರ ನಡೆದ ೯೭ ನೇ ವಾರ್ಷಿಕ ಮಹಾಸಭೆಯಲ್ಲಿ  ಅವರು ಮಾತನಾಡಿದರು.

೨೦೧೩ ರಲ್ಲಿ ಬ್ಯಾಂಕಿನ ಶೇರು ಬಂಡವಾಳ ೫೦.೧೮ ಕೋಟಿ ರೂ. ಆಗಿತ್ತು. ೨೦೧೯ ರಲ್ಲಿ ಈ ಮೊತ್ತ ೧೧೨.೩೭ ಕೋಟಿಗೆ ಏರಿದೆ. ಶೇ. ೧೨೪ ರಷ್ಟು ಹೆಚ್ಚಳ ದಾಖಲಾಗಿದೆ. ನಿಧಿಗಳ ಮೊತ್ತವು ಇದೇ ಅವಧಿಯಲ್ಲಿ  ೯೨ ಕೋಟಿ ರೂ.ಗಳಿಂದ ೨೮೩ ಕೋಟಿ ರೂ. ಗೆ ತಲುಪಿದೆ. ಶೇ. ೨೦೭ ರಷ್ಟು ಹೆಚ್ಚಳ ದಾಖಲಾಗಿದೆ. ೨೦೧೩ ರಲ್ಲಿ ಬ್ಯಾಂಕು  ೭೯೧ ಕೋಟಿ ರೂ. ಠೇವಣಿ ಹೊಂದಿತ್ತು. ೨೦೧೯ ರಲ್ಲಿ ಠೇವಣಿಗಳ ಒಟ್ಟು ಮೊತ್ತವು  ೧೬೧೦ ಕೋಟಿಗೆ ತಲುಪಿದೆ. ಠೇವಣಿಗಳ ಹೆಚ್ಚಳ ಶೇ. ೧೦೩ ರಷ್ಟಿದೆ ಎಂದು ಬ್ಯಾಂಕ್ ಸಭೆಗೆ ಮಾಹಿತಿ ನೀಡಿದರು.

೨೦೧೩ ರಲ್ಲಿ ಬ್ಯಾಂಕಿನ ಹೂಡಿಕೆ  ೩೬೩ ಕೋಟಿ ರೂ. ಆಗಿತ್ತು. ಇದೀಗ ಹೂಡಿಕೆ ಮೊತ್ತ ೫೮೬ ಕೋಟಿಗೆ ತಲುಪಿದೆ. ದುಡಿಯುವ ಬಂಡವಾಳ ೧,೫೧೧ ಕೋಟಿಯಿಂದ ೨,೯೫೫ ಕೋಟಿಗೆ ತಲುಪಿದೆ. ೨೦೧೩ ರಲ್ಲಿ ಸ್ವಸಹಾಯ ಸಂಘಗಳಿಗೆ  ನೀಡಿದ ಸಾಲದ ಹೊರ ಬಾಕಿ ಮೊತ್ತ ೩೬.೭೭ ಕೋಟಿ ಆಗಿತ್ತು. ೨೦೧೯ ಕ್ಕೆ ಈ ಮೊತ್ತ ೧೮೯ ಕೋಟಿಗೆ ತಲುಪಿದೆ. ೨೦೧೩ ರಲ್ಲಿ ೭೮೧೯ ಸಂಘಗಳಿಗೆ ಸಾಲ ನಿಡಲಾಗಿತ್ತು. ೨೦೧೯ ರಲ್ಲಿ ೧೦,೪೯೯ ಸಂಘಗಳಿಗೆ ಸಾಲ ನೀಡಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷರು ಮಾಹಿತಿ ನೀಡಿದರು.

೨೦೧೮-೧೯ ನೇ ಸಾಳಿನಲ್ಲಿ ಒಟ್ಟು  ೧,೫೧,೮೧೮ ರೈತರಿಗೆ ೭೮೧ ಕೋಟಿ ರೂ. ಕೆಸಿಸಿ ಸಾಲ ನಿಡಲಾಗಿದೆ. ಇದೇ ಸಾಲಿನಲ್ಲಿ ಹೊಸದಾಗಿ ಸದ್ಯತ್ವ ಪಡೆದ  ಒಟ್ಟು ೮೭೯೫ ರೈತರಿಗೆ  ೨೨.೭೮ ಕೋಟಿ ರೂ. ಸಾಲ ನಿಡಲಾಗಿದೆ. ೭೭೪ ರೈತರಿಗೆ ೧೧.೮೮ ಕೋಟಿ ರೂ. ಮಧ್ಯಾವಧಿ ಸಾಲ ವಿತರಿಸಲಾಗಿದೆ. ಮುಂಚೆ ಬೆಳೆಸಾಲದ ಸಂಪೂರ್ಣ ಮೊತ್ತವನ್ನು  ನಬಾರ್ಡ್, ಅಪೆಕ್ಸ್ ಬ್ಯಾಂಕ್ ನೀಡುತ್ತಿದ್ದವು. ೨೦೧೨-೧೩ ರಿಂದ ಒಟ್ಟು ವಿತರಿಸಲಾದ ಸಾಲದ ಮೊತ್ತದಲ್ಲಿ ಶೇ. ೪೦ ರಷ್ಟನ್ನು ಮಾತ್ರ ನಬಾರ್ಡ್, ಅಪೆಕ್ಸ್ ಬ್ಯಾಂಕ್ ಭರಿಸುತ್ತಿವೆ. ಉಳಿದ ಶೇ. ೬೦ ರಷ್ಟು ಮೊತ್ತವನ್ನು ಬ್ಯಾಂಕು ತನ್ನ ಮೂಲಗಳಿಂದ ಭರಿಸುತ್ತಿದೆ ಎಂದು ಹೇಳಿದರು.

೧೯೨೨ ರಲ್ಲಿ ಆರಂಭವಾದ ಡಿಸಿಸಿ ಬ್ಯಾಂಕು ನಿರಂತರವಾಗಿ ಲಾಭ ಗಳಿಸುತ್ತಿದೆ.  ೧೯೮೫ ರಲ್ಲಿ ದಿ| ಡಾ| ಗುರುಪಾದಪ್ಪ ನಾಗಮಾರಪಳ್ಳಿ ಅವರು ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪ್ರಗತಿಯ ವೇಗ ಇನ್ನಷ್ಟು ಹೆಚ್ಚಿತ್ತು. ದಿ. ನಾಗಮಾರಪಳ್ಳಿ ಅವರ ದೂರದೃಷ್ಟಿ, ಮುಂದಾಲೋಚನೆ ಹಾಗೂ ಜನಪರ ಕಾಳಜಿಯ ಫಲವಾಗಿ ಬ್ಯಾಂಕು ವಿದೇಶಗಳ ಗಮನ ಸೆಳೆಯುವಂತಹ ಸಾಧನೆ ಮಾಡಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಡಿಸಿಸಿ ಬ್ಯಾಂಕು ಎಲ್ಲಕ್ಕೂ ಮುಂದಿದೆ ಎಂದು ಅವರು ಹೇಳಿದರು.

ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ, ಸೌಲಭ್ಯಗಳನ್ನು ರೈತರಿಗೆ ತಲುಪಿಸುವಲ್ಲಿ ಬ್ಯಾಂಕು ಎಲ್ಲಕ್ಕೂ ಮುಂದಿದೆ.

ಅವಿರೋಧವಾಗಿ ಆಯ್ಕೆ ಮಾಡಿದ ಆಡಳಿತ ಮಂಡಳಿಗೆ, ಸಂಪೂರ್ಣ ಸಹಕಾರ ನೀಡುತ್ತಿರುವ ಪಿಕೆಪಿಎಸ್ ಆಡಳಿತ ಮಂಡಳಿಗಳಿಗೆ ಕೃತಜ್ಞತೆ ಅರ್ಪಿಸುತ್ತೆÃನೆ. ಅಧ್ಯಕ್ಷ ಸ್ಥಾನ ಸಿಕ್ಕಿದ್ದೆÃ ಸೇವೆ ಮಾಡಲು ಎಂದುಕೊಂಡು ರೈತರ ಶ್ರೆÃಯೋಭಿವೃಧ್ಧಿಗಾಗಿ ಶ್ರಮಿಸುತ್ತೆÃನೆ ಎಂದು ಅವರು, ದಿ| ಡಾ| ಗುರುಪಾದಪ್ಪ ನಾಗಮಾರಪಳ್ಳ ಅವರ ಆಶಯದಂತೆ ಬ್ಯಾಂಕನ್ನು ಮುನ್ನಡೆಸಲಾಗುತ್ತಿದೆ. ಶತಮಾನೋತ್ಸವ ಹಲವು ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಮೊಬೈಲ್ ಎಟಿಎಂ ವಾಹನ ಸೇವೆ ಆರಂಭಿಸಲಾಗುತ್ತದೆ.

ಬ್ಯಾಂಕಿನ ಉಪಾಧ್ಯಕ್ಷ ಭೀಮರಾವ ಪಾಟೀಲ್, ನಿರ್ದೇಶಕರಾದ ರಾಚಪ್ಪ ಪಾಟೀಲ್, ಅಮರಕುಮಾರ ಖಂಡ್ರೆ, ಬಸವರಾಜ ಹೆಬ್ಬಾಳೆ,  ವಿಜಯಕುಮಾರ ಪಾಟೀಲ್ ಗಾದಗಿ, ಜಗನ್ನಾಥರೆಡ್ಡಿ ಎಕ್ಕೆಳ್ಳಿ,  ಸಂಜಯಸಿಂಗ್ ಹಜಾರಿ,  ಶರಣಪ್ಪ ಶಿವಪ್ಪ,  ಮೊಹಮ್ಮದ್ ಸಲೀಮೋದ್ದಿನ್,  ಬಸವರಾಜ ಗೌಣಿ,  ಶಿವಶರಣಪ್ಪ ತಗಾರೆ, ಪರಮೇಶ್ವರ ಮುಗಟೆ, ಹಣಮಂತರಾವ ಪಾಟೀಲ್,  ಸಂಗಮೇಶ ಪಾಟೀಲ್, ಸಹಕಾರ ಸಂಘಗಳ ಉಪನಿಬಂಧಕ ವಿಶ್ವನಾಥ ಮಲಕೂಡ್, ಪ್ರಧಾಣ ವ್ಯವಸ್ಥಾಪಕ ವಿಠಲರೆಡ್ಡಿ ಯಡಮಲ್ಲೆ, ಡಿಜಿಎಂ ಸದಾಶಿವ ಪಾಟೀಲ್, ಪಂಡರಿರೆಡ್ಡಿ, ರಾಜಕುಮಾರ ಅಣದೂರೆ, ಅನೀಲ ಪಾಟೀಲ್ ಮತ್ತಿತರ ಇದ್ದರು.

ಪ್ರವಾಹದಿಂದ ಸಂಕಟದಲ್ಲಿ ಸಿಲುಕಿದವರಿಗೆ ನೆರವಾಗಲು ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬ್ಯಾಂಕ್ ವತಿಯಿಂದ ೧೧ ಲಕ್ಷ ರೂ.ಗಳನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಲಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳೂ ನೆರವು ನೀಡಬಹುದು. ಈ ತಿಂಗಳ ೧೮ ರಂದು ಅಪೆಕ್ಸ್ ಬ್ಯಾಂಕ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ ಅವರಿಗೆ ನೆರವಿನ ಚೆಕ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Check Also

ಭಾರತೀಯ ರೈಲ್ವೆ ಹೊಸ ಸಹಾಯವಾಣಿ 139

ಭಾರತೀಯ ರೈಲ್ವೆ ಹೊಸ ಸಹಾಯವಾಣಿ 139 ನವದೆಹಲಿ: ರೈಲು ಪ್ರಯಾಣಿಕರ ನೆರವಿಗಾಗಿ ಭಾರತೀಯ ರೈಲ್ವೆ ಹೊಸ ಸಹಾಯವಾಣ…