Home ನಿಮ್ಮ ಜಿಲ್ಲೆ ಬೀದರ ಕಿರುಕುಳಕ್ಕೆ ಗೃಹಿಣಿ ಬಲಿ?

ಕಿರುಕುಳಕ್ಕೆ ಗೃಹಿಣಿ ಬಲಿ?

ಬೀದರ: ಹುಮನಾಬಾದ್ ಪಟ್ಟಣದಲ್ಲಿ ಗೃಹಿಣಿ ಯೊಬ್ಬಳಿಗೆ ಕಿರುಕಳ ನೀಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.

ರೀತಾ ನಾಗೇಶ (22 ವರ್ಷ) ಮೃತಪಟ್ಟ ಗೃಹಿಣಿ. ಇದೇ ವರ್ಷದ ಜೂನ್ ತಿಂಗಳಲ್ಲಿ ಮದುವೆಯಾಗಿದ್ದು, ಗಂಡನ ಮನೆಯವರು ಕಿರುಕುಳ ನೀಡಿ ಕೊಲೆಮಾಡಿದ್ದಾರೆ ಎಂದು ಮೃತ ಗೃಹಿಣಿ ಕುಟುಂಬದವರು ಆರೋಪಿಸಿದ್ದಾರೆ. ಗಂಡ ನಾಗೇಶ, ಅತ್ತೆ ಹಣಮವ್ವ, ಮಾವ ಹಣಮಂತ ಹಾಗೂ ನಾದಿನಿ ಅಂಬಿಕಾ ಇವರ ವಿರುದ್ದು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ವರದಕ್ಷಿಣೆ ಕಿರುಕುಳ ಕುರಿತು ಪ್ರಕರಣ ದಾಖಲಿಸಿದ್ದಾರೆ.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…