ನಿಮ್ಮ ಜಿಲ್ಲೆ
ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ – ಸುಬೋಧ್ ಯಾದವ್
ಬೀದರ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡ 30 ಲಕ್ಷ ವರೆಗಿನ ಕಾಮಗಾರಿಗಳನ್ನು 3 ತಿಂಗಳೊಳಗೆ, 30 ಲಕ್ಷದಿಂದ 1 ಕೋಟಿವರೆಗಿನ ಕಾಮಗಾರಿಗಳನ್ನು 5 ತಿಂಗಳೊಳಗೆ, 1 ಕೋಟಿ ರೂ.ನ ಕಾಮಗಾರಿಗಳನ್ನು 6 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಾದ ಸುಬೋಧ್ ಯಾದವ್ ಅವರು ಸಂಬಂಧಿಸಿದ ಎಲ್ಲ ಅನುಷ್ಠಾನಾಧಿಕಾರಿಗಳಿಗೆ ಗಡುವು ವಿದಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸೆಂಬರ್ 20ರಂದು ಸಭೆ ನಡೆಸಿ, ಕಲ್ಯಾಣ ಕರ್ನಾಟಕ…
Read More »ಪಡಿತರ ಚೀಟಿ ಹೊಂದಿರುವ ಕುಟುಂಬದ ಸದಸ್ಯರು ಇ-ಕೆವೈಸಿ ಮಾಡಿಸಿ
ಬೀದರ: ಬೀದರ ಜಿಲ್ಲೆಯಲ್ಲಿನ ಎಲ್ಲ ಅಂತ್ಯೋದಯ, ಆದ್ಯತಾ(ಬಿಪಿಎಲ್) ಹಾಗೂ ಆದ್ಯತೇತರ(ಎಪಿಎಲ್) ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಎಲ್ಲ ಸದಸ್ಯರು ತಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ಭೇಟಿ ಕೊಟ್ಟು ಇ-ಕೆವೈಸಿ(ಬೆರಳಚ್ಚು ಹೊಂದಾಣಿಕೆ, ಜಾತಿ ಪ್ರಮಾಣ ಪತ್ರ ಸಲ್ಲಿಕೆ ಮತ್ತು ಅಡುಗೆ ಅನಿಲ ಸಂಪರ್ಕ ಹೊಂದಿರುವ ಮಾಹಿತಿ) ಸಲ್ಲಿಸನೇಕು ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಸೂಚಿಸಿದ್ದಾರೆ. ಇ-ಕೆವೈಸಿ ಮಾಹಿತಿ: 1) ಬಯೋ ದೃಢೀಕರಣ(ಬೆರಳಚ್ಚು ಹೊಂದಾಣಿಕೆ), ಪಡಿತರ ಚೀಟಿಯಲ್ಲಿ ಕುಟುಂಬದ ಹಿರಿಯ ಮಹಿಳೆಯನ್ನು…
Read More »ಸರಕು ವಾಹನಗಳಲ್ಲಿ ಜನರ ಸಾಗಣೆ: 6 ವಾಹನ ಜಪ್ತಿ
ಯಾದಗಿರಿ: ಗುರುಮಠಕಲ್ ತಾಲ್ಲೂಕಿನ ಮತ್ತು ಸೈದಾಪೂರ ವ್ಯಾಪ್ತಿಯಲ್ಲಿ ಬರುವ ಗುಂಜನೂರ, ಚಲ್ಹೇರಿ, ಜೈಗ್ರಾಮ, ನಂದೆಪಲ್ಲಿ, ಸಂಕ್ಲಾಪುರ ಹಾಗೂ ಇತರೆ ಗ್ರಾಮಗಳಲ್ಲಿ ಬಾಲ ಕಾರ್ಮಿಕ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಹತ್ತಿ ಹೊಲಗಳಿಗೆ ಅನಿರೀಕ್ಷಿತ ದಾಳಿ ನಡೆಸಿ, ಶಾಲೆಬಿಟ್ಟ ಮಕ್ಕಳ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಪತ್ತೆಯಾದ 6ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ತನಿಖೆ ನಡೆಸಿ…
Read More »ಸಕಾಲ ಅರ್ಜಿ ತ್ವರಿತ ವಿಲೇವಾರಿ ಕಲಘಟಗಿ ತಾಲೂಕು ರಾಜ್ಯಕ್ಕೆ ಪ್ರಥಮ
ಧಾರವಾಡ: ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕಲಘಟಗಿ ತಾಲ್ಲೂಕಿನ ವಿವಿಧ ಇಲಾಖೆಗಳು ಸಕಾಲ ಯೋಜನೆಯಡಿ 15,161 ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ರಾಜ್ಯದ ಎಲ್ಲಾ ತಾಲ್ಲೂಕುಗಳ ಶ್ರೇಯಾಂಕ ಪಟ್ಟಿಯಲ್ಲಿ ಕಲಘಟಗಿ ತಾಲೂಕ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದ ಯಶಸ್ವಿ ಅನುಷ್ಠಾನಗೊಳಿಸಿರುವದನ್ನು ಗುರುತಿಸಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ,ಸಕಾಲ ಹಾಗೂ ಕಾರ್ಮಿಕ ಸಚಿವರಾದ ಎಸ್. ಸುರೇಶಕುಮಾರ್ ಅವರು, ಕಲಘಟಗಿ ತಹಸೀಲ್ದಾರ ಅಶೋಕ ಶಿಗ್ಗಾಂವಿ ಅವರಿಗೆ…
Read More »ಜಿಲ್ಲೆಯ ಎಲ್ಲ ಸ್ಕ್ಯಾಯನಿಂಗ್ ಕೇಂದ್ರಗಳಲ್ಲಿ ಸಿಸಿಟಿವಿ
ಬೀದರ: ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾನೂನು ೧೯೯೪ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ಎಲ್ಲ ಸ್ಕ್ಯಾಯನಿಂಗ್ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸುವುದು ಸೇರಿದಂತೆ ಇನ್ನಷ್ಟು ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ|ಹೆಚ್.ಆರ್.ಮಹಾದೇವ ಅಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ ಇಲಾಖೆಯಿಂದ ಕಾಯಕಲ್ಪ ಹಾಗೂ ಪಿ.ಸಿ.ಪಿ.ಎನ್.ಡಿ.ಟಿ ಕುರಿತು ಡಿ.೧೭ರಂದು ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಹೆಣ್ಣು ಭ್ರೂಣ ಹತ್ಯೆ ತಡೆಯಲು ಅಗತ್ಯವಿದ್ದಲ್ಲಿ ಪೋಲೀಸ್ ಇಲಾಖೆಯ ಸಹಾಯ…
Read More »ಕೆರೆಗಳ ಸಮಗ್ರ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿ: ಡಾ|ಹೆಚ್.ಆರ್.ಮಹಾದೇವ
ಬೀದರ: ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳನ್ನು ಸಮಗ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಸಿದ್ದಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ| ಹೆಚ್.ಆರ್.ಮಹಾದೇವ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಹಾಲ್ನಲ್ಲಿ ಡಿ.೧೮ರಂದು ನಡೆದ ಕೆರೆ ಸಂರಕ್ಷಣೆ ಅಭಿವೃದ್ಧಿ ಪ್ರಾಧಿಕಾರದಿಂದ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ಕೆರೆಗಳ ಸ್ಥಿತಿಗತಿಯ ಬಗ್ಗೆ ಸಣ್ಣ ನೀರಾವರಿ ಇಲಾಖೆ, ಪಂಚಾಯತ್ ರಾಜ್ ಎಂಜಿನೀಯರಿAಗ್ ಇಲಾಖೆ ಹಾಗೂ ಇನ್ನಿತರೆ ಅಧಿಕಾರಿಗಳಿಂದ…
Read More »ಮಾತು ತಪ್ಪಿದ ಬಿಜೆಪಿ ಪಕ್ಷದವರು..!
ದುರ್ಯೋಧನ ಹೂಗಾರ (ಕಸ್ತೂರಿ ಕಿರಣ ಪತ್ರಿಕೆಯ ಸುದ್ದಿ ಮುಖ್ಯಸ್ಥರು) ಬೀದರ: ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಈಗಿರುವ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸುಮಾರು 9 ಕಿ.ಮಿ. ದೂರದ ರೇಷ್ಮೆ ಇಲಾಖೆಯ ಸುತ್ತಲ್ಲಿನ ಭೂಮಿಯಲ್ಲಿ ನಿರ್ಮಿಸವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹಾಗೂ ಸಂಸದ ಭಗವಂತ ಖೂಬಾ, ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿರುವುದು ಜನರಿಗೆ ಅನೇಕ ಅನುಮಾನ ಹುಟ್ಟುವಂತೆ ಮಾಡಿದೆ. ಹೌದು, ಈ ಹಿಂದಿನ ಸಿದ್ರಾಮಯ್ಯ…
Read More »ಮಕ್ಕಳಿಗೆ ನೃತ್ಯ ರೂಪಕ ತರಬೇತಿ ನೀಡಿ.
ಹುಮನಾಬಾದ: ಮಕ್ಕಳಿಗೆ ಭಾರತದ ಸಂಸ್ಕೃತಿ ಕುರಿತು ಪಾಲಕರು ತಿಳುವಳಿಕೆ ನೀಡುವ ಮೂಲಕ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಕೇಂದ್ರ ಸಂಸ್ಕೃತಿ ಇಲಾಖೆಯ ಸಲಹಾ ತಜ್ಞರಾದ ಡಾ। ಜಿ.ಕೆ ಅಶ್ವಥ ಹರಿತತ್ ಹೇಳಿದರು. ಪಟ್ಟಣದ ಭಾರತೀಯ ಮಾತಂಗ ಸಾಮಾಜಿಕ ಸಾಂಸ್ಕೃತಿಕ ಅಕಾಡೆಮಿ ಹಾಗೂ ಶ್ರೀ ವಿದ್ಯಾ ಪ್ರತಿಷ್ಠಾನ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣವಂದನ ನೃತ್ಯ ರೂಪಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಡಿ ಜಿಲ್ಲೆ ಬೀದರನಲ್ಲಿ ಕೂಡ…
Read More »ಸಕಲ ಮತಕ್ಕೆ ಪ್ರಭು ಸಂಸ್ಥಾನ ಹೆಸರುವಾಸಿ-ಆನಂದರಾಜ ಪ್ರಭು
ಹುಮನಾಬಾದ: ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನದಲ್ಲಿ ಜಾತಿ, ಧರ್ಮಗಳ ಭೇಧಭಾವಕ್ಕೆ ಅವಕಾಶವಿಲ್ಲ. ಸಂಸ್ಥಾನದಲ್ಲಿ ಸಕಲಮತಗಳಿಗೆ ಒಂದೇ ಸ್ಥಾನಮಾನ ನೀಡಲಾಗಿದೆ ಎಂದು ಮಾಣಿಕಪ್ರಭು ಸಂಸ್ಥಾನದ ಸಚಿವ ಆನಂದರಾಜ ಮಾಣಿಕಪ್ರಭು ಹೇಳಿದರು. ತಾಲೂಕಿನ ಮಾಣಿಕನಗರದಲ್ಲಿ ನಡೆಯುತ್ತಿರುವ ಮಾಣಿಕಪ್ರಭುಗಳ ಜಾತ್ರಾ ಮಹೋತ್ಸವ ನಿಮಿತ್ಯ ಡಿ.13 ಶುಕ್ರವಾರ ರಾತ್ರಿ ನಡೆದ ಸಂಗೀತ ದರ್ಬಾರ್ ಸಮಾರಂಭದಲ್ಲಿ ಸಂಸ್ಥಾನದ ಕಾರ್ಯ ಚಟುವಟಿಕೆಗಳ ಕುರಿತು ವಿವರಣೆ ನೀಡಿದರು. ಮಾಣಿಕ ಪ್ರಭುಗಳ ಕುರಿತು ಡಾ| ಜ್ಞಾನರಾಜ ಮಾಣಿಕಪ್ರಭುಗಳು ದೇಶದ ವಿವಿಧ ರಾಜ್ಯಗಳಿಗೆ…
Read More »108 ಶಾಲೆಗಳಲ್ಲಿ ತೀವ್ರ ನಿಗಾ ಕಲಿಕಾ ತರಬೇತಿ-ಡಿಸಿ
ಬೀದರ: ಜಿಲ್ಲೆಯ 108 ಶಾಲೆಗಳಲ್ಲಿ ತೀವ್ರ ನಿಗಾ ಕಲಿಕಾ ತರಗತಿಗಳನ್ನು ತೆರೆಯುವ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿಬೇಕು ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಹೇಳಿದರು. ಡಿ.12 ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಕೆಲಸ ಬೇಗ ಪೂರ್ಣಗೊಳಿಸಿ ಆರ್ಥಿಕ ಮತ್ತು…
Read More »



















