ಬೀದರ
ಸರ್ಕಾರಿ ಆಸ್ಪತ್ರೆಗಳಲ್ಲಿ ರಾತ್ರಿ ವೈದ್ಯರು ಕಡ್ಡಾಯ
ಬೀದರ: ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರಾತ್ರಿ ವೇಳೆ ಕಡ್ಡಾಯವಾಗಿ ವೈದ್ಯರು ಹಾಜರಿರುವಂತೆ ಆರೋಗ್ಯ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಉಷಾ ರಾಜೇಂದ್ರ ನಿಟ್ಟೂರಕರ್ ಅರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಡೆಂಗೆ ನಿಯಂತ್ರಣ ಕುರಿತು ಆರೋಗ್ಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು…
Read More »ಮುಂಗಡ ಟಿಕೆಟ್ ಗಾಗಿ ಜನರು ಸುಸ್ತು.
ಬೀದರ: ಹುಮನಾಬಾದ ರೈಲ್ವೆ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ನೀಡಲು ಸಿಬ್ಬಂದಿಗಳು ಇಲ್ಲದ ಕಾರಣ ಪ್ರಯಾಣಿಕರು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಬೀದರ ಕಲಬುರಗಿ ಮಧ್ಯೆ ಸಂಚರಿಸುವ ರೈಲು ಹಾಗೂ ಬೇರೆ ನಗರಗಳಿಗೆ ಪ್ರಯಾಣ ಬೆಳೆಸಬೇಕು ಎಂದು ಮುಂಗಡ ಟಿಕೆಟ್ ಕಾಯ್ದಿರಿಸಲು ರೈಲ್ವೆ ನಿಲ್ದಾಣಕ್ಕೆ ಬಂದ ಜನರು ಗಂಟೆಗಳ ಕಾಲ ಸಿಬ್ಬಂದಿಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮೇಲಾಧಿಕಾರಿಗಳ ಗಮಕ್ಕೂ ತರಲಾಗಿದೆ ಎಂದು ಸ್ಥಳದಲ್ಲಿದ ಜನರು ಮಾಹಿತಿ ನೀಡಿದ್ದಾರೆ. ಈ…
Read More »ಕಾನೂನಿಗೆ ಧಕ್ಕೆ ಆದರೆ ಸೂಕ್ತ ಕ್ರಮ ; PSI ರವಿ
ಹುಮನಾಬಾದ: ಮುಂದಿನ ದಿನಗಳಲ್ಲಿ ರಾಮ ಮಂದಿರ ತೀರ್ಪು, ಟಿಪ್ಪು ಜಯಂತಿ ಹಾಗೂ ಈದ್ ಮಿಲಾದ್ ಹಬ್ಬದಲ್ಲಿ ಯಾರು ಕೂಡ ಕಾನೂನು ಉಲ್ಲಂಘನೆ ಆಗದಂತೆ ಜನರು ಜನರು ಎಚ್ಚರಿಕೆ ವಹಿಸಬೇಕು ಎಂದು ಪಿ.ವಸ್.ಐ ರವಿ ಕುಮಾರ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯ ಪ್ರಾಗಂಣದಲ್ಲಿ ಟಿಪ್ಪು ಜಯಂತಿ, ಈದ್ ಮಿಲಾದ್ ಹಾಗೂ ರಾಮ ಮಂದಿರ ತೀರ್ಪು ಹಿನ್ನೆಲೆಯಲ್ಲಿ ಕರೆದ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡಿದರು. ಕಾನೂನು ಸುವ್ಯವಸ್ಥೆಗೆಧಕ್ಕೆ ತದರೆ ಸೂಕ್ತ ಕ್ರಮ…
Read More »ಪಾಟೀಲ್ ಹೈದರಾಬಾದ್ ಕರ್ನಾಟಕದ ಹುಲಿ
ಹುಮನಾಬಾದ: ಈ ಭಾಗಕ್ಕೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ವೈಜಿನಾಥ ಪಾಟೀಲರು ಹೋರಾಟ ಮಾಡಿದ್ದಾರೆ. ಪಾಟೀಲ ಹೈ.ಕದ ಹುಲಿ ಎಂದು ರಾಜ್ಯ ಜಂಗಮ ಸಮಾಜ ಮುಖ್ಯಂಡ ರಾಚಯ್ಯಸ್ವಾಮಿ ಹೇಳಿದರು. ಪಟ್ಟಣದಲ್ಲಿ ಪಾಟೀಲರ ನಿಧನ ಹಿನ್ನೆಲೆ ಏರ್ಪಡಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಾಹಿತಿ ಕಾಶಿನಾಥ ರೆಡ್ಡಿ, ಗವಿಸಿದ್ದಪ್ಪ ಪಾಟೀಲ, ಶಕೀಲ್ ಐ.ಎಸ್, ರವಿ ಭಂಡಾರಿ, ಪ್ರಾಚಾರ್ಯ ಶಾಂತವೀರ ಯಲಾಲ, ಉಮೇಶ ಮಠದ, ಸುರೇಶ ಮುಸ್ತರಗಿ, ಶರಣಪ್ಪ ತಟಪಟ್ಟಿ,…
Read More »ಆಕಸ್ಮಿಕ ಶಾಟ್೯ ಸಕ್ಯೂಟ್ ಬೈಕ್ ಸರ್ವಿಸ್ ಸೆಂಟರ್ ಭಸ್ಮ
ಬೀದರ: ನಗರದ ಮೈಲೂರು ರಸ್ತೆಯಲ್ಲಿರುವ ಅರುಣ್ಸ್ವಾಮಿ ಬೈಕ್ ಸರ್ವಿಸಿಂಗ್ ಸೆಂಟರ್ ನಲ್ಲಿ ಶುಕ್ರವಾರ ತಡ ರಾತ್ರಿ ಆಕಸ್ಮಿಕ ಬೆಂಕಿಕಾಣಿಸಿಕೊಂಡಿದ್ದು, ಕೆಲ ಕ್ಷಣದಲ್ಲಿಯೇ ಸರ್ವಿಸ್ ಸೆಂಟರ್ ಹೊತ್ತಿ ಉರಿದಿದ ಘಟನೆ ಸಂಭವಿಸಿದೆ. ತಡರಾತ್ರಿ 12 ಗಂಟೆಗೆ ವಿದ್ಯುತ್ ಮೀಟರ್ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅವಘಡ ಸಂಭವಿಸಿರಬೇಕು ಎಂದು ಊಹಿಸಲಾಗಿದೆ. ಬೈಕ್ ಸೇರಿ ಹಲವು ವಸ್ತುಗಳು ಬೆಂಕಿಗಾಹುತಿಯಾಗಿರುವುದು ವರದಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
Read More »ಕಲ್ಯಾಣ ಕರ್ನಾಟಕಕ್ಕೆ ಬಂಪರ್
Date:01-11-2019 ಬೀದರ: 176 ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲು ಸಚಿವ ಸಂಪುಟದ ಒಪ್ಪಿಗೆ ನೀಡಿದೆ. ಹಲವು ವರ್ಷಗಳಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ನನೆಗುದಿಗೆ ಬಿದ್ದಿದ್ದ ಪಶುಸಂಗೋಪನೆ ಇಲಾಖೆಯಲ್ಲಿನ ಹುದ್ದೆಗಳನ್ನು ತುಂಬಿಕೊಳ್ಳಲು ಅಕ್ಟೋಬರ್ 31ರಂದು ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು. ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನವೆಂಬರ್ ೧ರಂದು ನಡೆದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಬಳಿಕ…
Read More »ಬೀದರ ಅದ್ದೂರಿ ಕನ್ನಡ ರಾಜ್ಯೋತ್ಸವ
ಬೀದರ: ಜಿಲ್ಲಾಡಳಿತದಿಂದ ನಗರದ ಮಂಗಲಪೇಟ್ನ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಧ್ವಜಾರೋಹಣ ನೇರೆವರಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ತುಕಡಿಗಳಿಂದ ಸಚಿವರು ಗೌರವ ವಂದನೆ ಸ್ವೀಕರಿಸಿದರು. ಬಳಿಕ ಡಿಎಆರ್, ಸಿವಿಲ್ ಪೊಲೀಸ್ ತಂಡ, ಗೃಹ ರಕ್ಷಕ ದಳ, ಅರಣ್ಯ ಇಲಾಖೆ, ಎನ್ಸಿಸಿ ತಂಡ, ಭಾರತೀಯ ಸೇವಾದಳ ತಂಡದವರು ಆಕರ್ಷಕ ಪಥ ಸಂಚಲನ ನಡೆಸಿದರು. ಕಾರ್ಯಕ್ರಮದಲ್ಲಿ ಲೋಕಸಭೆ ಸದಸ್ಯ ಭಗವಂತ…
Read More »ಮದ್ಯಪಾನ, ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಮಾರಕ
ಬೀದರ: ಕ್ಯಾನ್ಸರ್, ಪಾಶ್ರ್ವ ವಾಯುನಂತಹ ಗಂಭೀರ ಸ್ವರೂಪದ ಕಾಯಿಲೆಗಳನ್ನು ತರುವ ತಂಬಾಕು, ಗುಟಕಾ, ಮದ್ಯ ಸೇವನೆಯಂತಹ ದುಶ್ಚಟಗಳಿಂದ ಯುವಜನತೆ ದೂರವಿರಬೇಕು ಎಂದು ಜಿಲ್ಲಾ ಮಾನಸಿಕ ವಿಭಾಗದ ಮನೋರೋಗ ತಜ್ಞರಾದ ಡಾ. ಅಭಿಜೀತ ಪಾಟೀಲ್ ಹೇಳಿದರು. ಕರ್ನಾಟಕ ರಾಜ್ಯ ಮದ್ಯಪಾನ ಸ್ವಯಂ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಬೀದರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಸರ್ಕಾರಿ ಐಟಿಐ ಸಂಸ್ಥೆಯಲ್ಲಿ ನಡೆದ ಮದ್ಯಪಾನ…
Read More »550ನೇ ಗುರುನಾನಕ್ ಜಯಂತಿ ಅದ್ದೂರಿ ಆಚರಣೆಗೆ ಸಿದ್ಧತೆ
ಬೀದರ: ನವೆಂಬರ್ 10, 11 ಮತ್ತು 12ರಂದು ನಡೆಯುವ 550ನೇ ಗುರುನಾನಕ್ ಜಯಂತಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ ಎಚ್.ಆರ್ ಮಹಾದೇವ ಅಧಿಕಾರಿಗಳಿಗೆ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗುರುನಾನಕ್ ಜಯಂತಿಯ ಪ್ರಯುಕ್ತ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಬೀದರ ನಗರಕ್ಕೆ ಆಗಮಿಸುತ್ತಾರೆ. ಅತಿಥಿಗಳ ವಾಸ್ತವ್ಯಕ್ಕೆ ತೊಡಕಾಗಬಾರದು. ಗುರುದ್ವಾರಕ್ಕೆ ಬರುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು.…
Read More »ರೇವಣಸಿದ್ದೇಶ್ವರ ಪೆಟ್ರೋಲ್ ಬಂಕ್ ಸಂಸದ ಭಗಂವತ ಖೂಬಾ ಉದ್ಘಾಟನೆ.
ಚಿಟಗುಪ್ಪ: ತಾಲೂಕಿನ ಬೆಳೆಕೆರಾ ಕ್ರಾಸ್ ಹತ್ತಿರದ ರೇವಣಸಿದ್ದೇಶ್ವರ ಪೆಟ್ರೋಲ್ ಬಂಕ್ ಸಂಸದ ಭಗಂವತ ಖೂಬಾ ಬುಧವಾರ ಉದ್ಘಾಟಿಸಿದರು. ನಂತರ ವಾಹನಕ್ಕೆ ಇಂಧನ ಭರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುಭಾಷ ಕಲ್ಲೂರ್, ಗಂಗಾಧರ ಶ್ರೀಗಳು, ಸಂಗಣ್ಣ ಪಾರಾ, ಬಂಕ್ ಮಾಲೀಕ ಮಲ್ಲಿಕಾರ್ಜುನ ಪಾಟೀಲ್, ಬಸವರಾಜ ಪಾಟೀಲ, ಶಿವಶಂಕರ ಪಾಟೀಲ, ಅನುಪ ಬಿರಾದರ, ವಸತಕುಮಾರ ಚಿದ್ರಿ, ಅರುಣಕುಮಾರ ಕುಲಕರ್ಣಿ, ಮಲ್ಲಿಕಾರ್ಜುನ ಕುಂಬಾರ ಸೇರಿದಂತೆ ಅನೇಕರು ಇದ್ದರು.
Read More »

















