ಬೀದರ
ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು
ಹುಮನಾಬಾದ: ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು. ಯಾವುದೇ ತಾರತಮ್ಯ ಮಾಡಬಾರದು ಎಂದು ಮಾಜಿ ಸಚಿವ ಹಾಗೂ ಶಾಸಕ ರಾಜಶೇಖರ ಪಾಟೀಲ ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ ಬೀಳ್ಕೊಡುಗೆ ಹಾಗೂ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂತೋಷ ಅವರು ಮೂರು ವರ್ಷ ಇಲ್ಲಿ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆ ಎಂದರೆ ಜನರಿಗೆ ಭಯ ಇರಬೇಕು. ಆದರ ಜತೆಗೆ ಉತ್ತಮ ಕೆಲಸ ಮಾಡುವರಿಗೆ ಪ್ರೋತ್ಸಾಹ…
Read More »8 ದಿನಗಳಲ್ಲಿ ನಕಲಿ ವೈದ್ಯರ ಬಾಗಿಲಿಗೆ ಬೀಗ
ಬೀದರ: ಹೌದು ಬೀದರ ಜಿಲ್ಲೆಯಲ್ಲಿ ವೈದ್ಯ ಪದವಿ ಪಡೆಯದೇ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿರುವ ನಕಲಿ ವೈದ್ಯರ ಬಾಗಿಲಿಗೆ ಬೀಗ ಬೀಳಲಿದೆ. ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿಚ ಪ್ರಭು ಚವ್ಹಾಣ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶಿಲಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ಜಿಲ್ಲೆಯಲ್ಲಿನ ನಕಲಿ ವೈದ್ಯರನ್ನು ಗುರುತಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ತಿಳಿಸಿದರು. ಈ ಕುರಿತು…
Read More »ಆಸ್ಪತ್ರೆ ಸುಧಾರಣೆಗೆ ವೈದ್ಯರ ವರ್ಗಾವಣೆ ಅಗತ್ಯ..
ಬೀದರ: ನಗರದಲ್ಲಿ ಸರ್ಕಾರಿ ಜಿಲ್ಲಾ ಆಸ್ಪತ್ರೆ (ಬ್ರಿಮ್ಸ್) ಸುಧರಿಸಬೇಕಾದರೆ ಇಲ್ಲಿನ ಸ್ಥಳಿಯ ವೈದ್ಯರನ್ನು ಬೇರೆಡೆಗೆ ವರ್ಗಾವಣೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯಗಳು ಶುಕ್ರವಾರ ನಡೆದ ಸಭೆಯಲ್ಲಿ ಅನೇಕ ಅಭಿಪ್ರಾಯ ವ್ಯಕ್ತಪಡಿಸಿದ ಘಟನೆ ನಡೆಯಿತು. ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿಚ ಪ್ರಭು ಚವ್ಹಾಣ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶಿಲಾ ಸಭೆಯಲ್ಲಿ ಜಿಲ್ಲಾ ಆಸ್ಪತ್ರೆಯ ಕಾರ್ಯ ಚಟುವಟಿಕೆಗಳ ಕುರಿತು ಚರ್ಚೆನಡೆಸುತ್ತಿರುವ ಸಂದರ್ಭದಲ್ಲಿ ಈ ಮೇಲಿನ ವಿಷಯ…
Read More »ರೋಗತಡೆಗೆ ಅಧಿಕಾರಿಗಳು ಕ್ರಮ ವಹಿಸಿ – ಜಿಲ್ಲಾಧಿಕಾರಿ
ಬೀದರ: ಆನೆಕಾಲು ರೋಗ, ಡೆಂಗೆ ಸೇರಿದಂತೆ ಬಹುತೇಕ ಕಾಯಿಲೆಗಳು ಕಲುಷಿತ ವಾತಾವರಣ ಹಾಗೂ ಸೊಳ್ಳೆ ಕಡಿತದಿಂದ ಹರಡುತ್ತವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಆರ್.ಮಹಾದೇವ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಆನೆಕಾಲು ರೋಗ ತಡೆಗಟ್ಟಲು ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮ ಜಿಲ್ಲಾ ಸಂಚಾಲನಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಗರದ ಕೆಲವು ಕಡೆಗಳಲ್ಲಿ ಚರಂಡಿಗಳು ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿವೆ. ರಸ್ತೆಗಿಂತ ಚರಂಡಿಗಳೇ ಎತ್ತರವಾಗಿವೆ. ಅಂತಹ…
Read More »ಪರವಾನಗಿ ರಹಿತ ಉತ್ಪಾದನೆ ತಯಾರಿಕೆ-ಅಧಿಕಾರಿಗಳ ಪರಿಶೀಲನೆ
ಬೀದರ – ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಘಟಕಗಳು ಪರವಾನಗಿ ಪಡೆಯದ ಉತ್ಪನಗಳನ್ನು ತಯಾರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮನೋಳಿ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳ ತಂಡ ನೌಬಾದ ಹಾಗೂ ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಘಟಕಗಳ ಮೇಳೆ ದಿಢೀರ್ ಭೇಟಿನೀಡಿ ಪರಿಶೀಲನೆ ನಡೆಸಿದರು. ನೌಬಾದ ಕೈಗಾರಿಕಾ ಪ್ರದೇಶದಲ್ಲಿರುವ ಮೇ.ಆರ್.ಕೆ ಪ್ರೋಡಕ್ಟ್, ಮೆ| ಅನುಪಮ ಫ್ಯಾಬ್ರಿಕೇಷನ್ಸ್, ಕೊಳಾರ ಕೈಗಾರಿಕಾ ಪ್ರದೇಶದಲ್ಲಿರುವ ಮೇ.ಫಾರ್ಮರ್ಸ್…
Read More »ಉದ್ಯಮಕ್ಕೆ ರಜಂತಲ್ ಕುಟುಂಬ ಹೆಸರುವಾಸಿ
ಬೀದರ: ಉದ್ಯಮ ಕ್ಷೇತ್ರಕ್ಕೆ ಇಲ್ಲಿನ ರಜಂತಲ್ ಕುಟುಂಬ ಹೆಸರುವಾಸಿಯಾಗಿದ್ದು, ರಜಂತಲ್ ಗಣೇಶನ ಸೇವೆ ಇದಕ್ಕೆ ಕಾರಣ ಎಂದು ವೈರಾಗಿ ಶಾಖಾಮಠದ ಅವಧೋತಗೀರಿ ಮಹಾರಾಜ ಹೇಳಿದರು. ಬೀದರ್ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ವಾಸು ಪೆಟ್ರೋಲಿಯಂ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಆಡು ಮುಟ್ಟದ ಸೊಪ್ಪು ಇಲ್ಲ ಹಾಗೇ ರಜಂತಲ್ ಕುಟುಂಬ ಮಾಡದ ಉದ್ಯಮ ಇಲ್ಲ ಎಂದ ಶ್ರೀಗಳು, ದೇವರ ಸೇವೆ ಮಾಡುವರಿಗೆ ದೇವರು ಒಳ್ಳೆಯದೇ ಮಾಡುತ್ತಾನೆ. ಉದ್ಯಮ ಕ್ಷೇತ್ರದಲ್ಲಿ ಇನ್ನೂ…
Read More »ಲಾರಿ ಹರಿದು 14 ಕುರಿ ಸಾವು
ಬೀದರ: ಒಂದು ಕಡೆಯಿಂದ ಇನ್ನೊಂದು ಕಡೆಗೆ ರಸ್ತೆ ದಾಟುವಾಗ ಅಪಘಾತಕ್ಕೆ ಈಡಾಗಿ ಸುಮಾರು 14 ಕುರಿಗಳು ಮೃತಪಟ್ಟಿದ್ದು, 6 ಕುರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಭಿಸಿದೆ. ಬೀದರ ತಾಲೂಕಿನ ಕೊಳಾರ(ಕೆ) ಗ್ರಾಮದ ಬಾಬು ಮತ್ತು ಅಮೃತಿ ಅವರಿಗೆ ಸೇರಿದ ಕುರಿಗಳು ಎಂದು ತಿಳಿದುಬಂದಿದ್ದು, ಬೀದರ ಕಡೆಯಿಂದ ಹುಮನಾಬಾದ ಕಡೆಗೆ ಸಾಗುತ್ತಿದ ಲಾರಿ ಕುರಿಗಳಿಗೆ ಡಿಕ್ಕಿಮಾಡಿದ ಪರಿಣಾಮ ಸ್ಥಳದಲ್ಲಿಯೇ ಕುರಿಗಳು ಮೃತಪಟ್ಟಿವೆ. ಈ ಕುರಿತು ನೂತನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ…
Read More »ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕೆ ಇಲ್ಲಿದೆ ಮಾಹಿತಿ
ಬೀದರ: ಬೀದರ ಲೋಕಾಯುಕ್ತ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎನ್.ಎಂ.ಓಲೇಕಾರ ಹಾಗೂ ಪೊಲೀಸ್ ಇನ್ಸಪೆಕ್ಟರ್ ಶಿವಕುಮಾರ ಮುಚ್ಚಂಡಿ ಅವರು ಅ.23ರಿಂದ 25ರವರೆಗೆ ಜಿಲ್ಲೆಯ ಹುಲಸೂರ, ಕಮಲನಗರ ಮತ್ತು ಚಿಟ್ಟಗುಪ್ಪಾ ತಾಲೂಕಗಳಿಗೆ ಭೇಡಿ ನೀಡಿ ಸಾರ್ವಜನಿಕರಿಂದ ದೂರು ಅರ್ಜಿಗಳನ್ನು ಸ್ವೀಕರಿಸುವರು ಅ. 23ರ ಬೆಳಗ್ಗೆ 11ರಿಂದ ಮಧ್ಯಾಹ್ನ 1 ರವರೆಗೆ ಹುಲಸೂರು ತಾಲೂಕು ಕಚೇರಿ, ಅ.24ರ ಬೆಳಗ್ಗೆ 11ರಿಂದ ಮಧ್ಯಾಹ್ನ 1 ರವರೆಗೆ ಕಮಲನಗರ ತಾಲೂಕು ಕಚೇರಿ ಮತ್ತು ಅ.25 ರ ಬೆಳಗ್ಗೆ…
Read More »ಕವಿಗಳು ಹೆಚ್ಚು ಓದಬೇಕು-ಬರೆಯಬೇಕು-G.H
ಬೀದರ: ಕವಿಗಳು ಬಲಪಂಥೀಯ ಹಾಗೂ ಎಡಪಂಥೀಯದ ಬಗ್ಗೆ ಯೋಚನೆ ಮಾಡದೇ ಹೆಚ್ಚು ಹೆಚ್ಚು ಓದಿ ಕವನವನ್ನು ಬರೆಯಬೇಕು. ಸಾಹಿತ್ಯ ರಚಿಸಬೇಕು ಎಂದು ವಾರ್ತಾ ಮತ್ತು ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪಾ ಹೊಸಮನಿ ಅಭಿಪ್ರಾಯ ಪಟ್ಟರು. ನೌಬಾದ್ನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಹೈದ್ರಾಬಾದ…
Read More »ಸಮಸ್ಯೆಗಳು ಕಾಡುತ್ತಿವೆಯೇ ದೂರು ಸಲ್ಲಿಸಿ : ಸಚಿವ ಚವ್ಹಾಣ್
ಬೀದರ: ಸಾರ್ವಜನಿಕರ ಸಮಸ್ಯೆ ಹಾಗೂ ದೂರುಗಳಿಗೆ ತುರ್ತಾಗಿ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸೋಮವಾರ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ದೂರುಪೆಟ್ಟಿಗೆ ಸ್ಥಾಪನೆ ಮಾಡಿ ಚಾಲನೆ ನೀಡಿದರು. ಸಾರ್ವಜನಿಕರ ದೂರು ಪೆಟ್ಟಿಗೆ ನಿರ್ವಹಣೆ ಸರಿಯಾಗಿ ತಾಲೂಕಿನ ಅಧಿಕಾರಿಗಳು ನಿರ್ವಹಣೆ ಮಾಡಬೇಕು. ಪ್ರತಿ ವಾರ ಕಡ್ಡಾಯವಾಗಿ ಪೆಟ್ಟಿಗೆಯನ್ನು ತೆರೆಯಬೇಕು. ಸಲ್ಲಿಕೆಯಾಗುವ ಅರ್ಜಿಗಳ ಬಗ್ಗೆ ದಾಖಲಾತಿ ಪುಸ್ತಕದಲ್ಲಿ ನಮೂದಿಸಬೇಕು. ತಹಸೀಲ್ದಾರ ಹಂತದಲ್ಲಿ, ಜಿಲ್ಲಾಧಿಕಾರಿಯವರ ಹಂತದಲ್ಲಿ, ಸಚಿವರ ಹಂತದಲ್ಲಿ ಎಂಬುದಾಗಿ…
Read More »



















