ಬೀದರ
ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದಂಡ ವಿಧಿಸಿ-ಶಾಸಕ ಪಾಟೀಲ
ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದಂಡ ವಿಧಿಸಿ-ಶಾಸಕ ಪಾಟೀಲ ವ್ಯಾಪರಸ್ಥರು ಹಾಗೂ ಗ್ರಾಹಕರು, ರಸ್ತೆಯಲ್ಲಿ ಸಂಚರಿಸುವರು ಕಡ್ಡಾಯ ಮಾಸ್ಕ್ ಹಾಕಬೇಕು. ಹುಮನಾಬಾದ: ಪಟ್ಟಣದ ಜನರಲ್ಲಿ ಕೊರೊನಾ ಹಾವಳಿಯ ಹೆದರಿಕೆ ಕಂಡುಬರುತ್ತಿಲ್ಲ. ಪಟ್ಟಣದ ಎಲ್ಲಾಕಡೆಗಳಲ್ಲಿನ ವ್ಯಾಪರಸ್ಥರು ಹಾಗೂ ಗ್ರಾಹಕರು ಮುಖಕ್ಕೆ ಮಾಸ್ಕ್ ಧರಿಸದೆ ಇರುವುದು ಕಂಡುಬರುತ್ತಿದ್ದು, ಕೂಡಲೇ ಪುರಸಭೆ ಮುಖ್ಯಾಧಿಕಾರಿಗಳು ಪೊಲೀಸ್ ಅಧಿಕಾರಿಗಳ ಸಹಕಾರ ಪಡೆದುಕೊಂಡು ದಂಡ ವಿಧಿಸುವ ಕೆಲಸ ಮಾಡಬೇಕು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು…
Read More »ಕಳಪೆ ಕಾಮಗಾರಿಗೆ ಜನರು ಆಸ್ಪದ ನೀಡಬಾರದು-ಶಾಸಕ ಪಾಟೀಲ.
ಕಳಪೆ ಕಾಮಗಾರಿಗೆ ಜನರು ಆಸ್ಪದ ನೀಡಬಾರದು-ಶಾಸಕ ಪಾಟೀಲ. 6.25 ಕೋಟಿಯಲ್ಲಿ ಹೈಟೆಕ್ ರಸ್ತೆಗೆ ಚಾಲನೆ- ಮುಂದಿನ ವರ್ಷಕ್ಕೆ 43 ಕೋಟಿ ಯೋಜನೆ. ಹುಮನಾಬಾದ: ಕ್ಷೇತ್ರದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳು ಕಳಪೆ ಎಂದು ಕಂಡು ಬಂದರೆ ಜನ ಸಾಮಾನ್ಯರು ಪ್ರಶ್ನಿಸಬೇಕು. ಕೆಲಸ ನಿಲ್ಲಿಸಿ ಅಧಿಕಾರಿಗಳ ಗಮನ ಸೆಳೆಯಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು. ಪಟ್ಟಣದ ಶಿವಚಂದ್ರ ನೆಲೋಗಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿಗೆ ಚಾಲನೆ ನೀಡಿ…
Read More »ಜುಲೈ ತಿಂಗಳಿಂದ ರಾಗಿ, ಜೋಳ ವಿತರಣೆ – ಆಹಾರ ಸಚಿವ
ಜುಲೈ ತಿಂಗಳಿಂದ ರಾಗಿ, ಜೋಳ ವಿತರಣೆ – ಆಹಾರ ಸಚಿವ ಭ್ರಷ್ಠಾಚಾರಕ್ಕೆ ಆಸ್ಪದ ಇಲ್ಲ- ಆಹಾರ ಇಲಾಖೆ ಸುಧಾರಣೆಗೆ ಕ್ರಮ ಬೀದರಃ ಜುಲೈ ತಿಂಗಳಿಂದ ರಾಜ್ಯದಲ್ಲಿ ರಾಗಿ ಬಳಕೆ ಮಾಡುವ ಪ್ರದೇಶಗಳಲ್ಲಿ ರಾಗಿ ಹಾಗೂ ಜೋಳ ಬಳಸುವ ಪ್ರದೇಶಗಳಲ್ಲಿ ಜೋಳ ವಿತರಣೆಗೆ ತೀರ್ಮಾನಿಸಲಾಗಿದ್ದು, ಪಡಿತರ ವ್ಯವಸ್ಥೆ ಮೂಲಕ ಜುಲೈ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಕೆ.ಗೋಪಾಲಯ್ಯ ಹೇಳಿದರು. ಹುಮನಾಬಾದ…
Read More »ಆಹಾರ ಸಚಿವ ನ್ಯಾಯಬೆಲೆ ಅಂಗಡಿಗೆ ಭೇಟಿ ಪರಿಶೀಲನೆ.
ಆಹಾರ ಸಚಿವ ನ್ಯಾಯಬೆಲೆ ಅಂಗಡಿಗೆ ಭೇಟಿ ಪರಿಶೀಲನೆ. ಬೀದರ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಕೆ.ಗೋಪಾಲಯ್ಯ ಬುಧವಾರ ಬೀದರ ನಗರಕ್ಕೆ ಭೇಟಿನೀಡಿ ನಗರದ ಪಡಿತರ ವಿತರಣೆ ಕುರಿತು ಪರಿಶೀಲನೆ ನಡೆಸಿದರು. ಅರ್ಹ ಪಡಿತರ ಕುಟುಂಬಕ್ಕೆ ವಿತರಣೆ ಮಾಡುತ್ತಿರು ಕುರಿತು ನ್ಯಾಯಬೆಲೆ ಅಂಗಡಿ ಮುಖಂಡ ಹಾಗೂ ಅಧಿಕಾರಿಗಳುಂದಪ ಮಾಹಿತಿ ಪಡೆದ ಸಚಿವರು, ಆಹಾರ ಧಾನ್ಯಗಳ ವಿತರಣೆ ಮಾಡುತ್ತಿರುವ ಅಕ್ಕಿ, ಬೇಳೆಕಾಳುಗಳ ಪರಿಶೀಲನೆ ನಡೆಸಿದರು. Date: 10-06-2020
Read More »ಬೀದರನಲ್ಲಿ ಕೋವಿಡ್-19 ನೂತನ ಪ್ರಯೋಗಾಲಯ ಉದ್ಘಾಟನೆ
ಬೀದರನಲ್ಲಿ ಕೋವಿಡ್-19 ಮೊಲಿಕ್ಯೂಲರ್ ವೈರಾಲೋಜಿ ನೂತನ ಪ್ರಯೋಗಾಲಯ ಉದ್ಘಾಟನೆ ಬೀದರ: ಬೀದರನ ಬಹುಜನರ ನಿರೀಕ್ಷೆಯಂತೆ ಕೋವಿಡ್-19 ಮೊಲಿಕ್ಯೂಲರ್ ವೈರಾಲೋಜಿ ನೂತನ ಪ್ರಯೋಗಾಲಯ ಆರಂಭಕ್ಕೆ ಬೀದರ ಜಿಲ್ಲಾ ಕೇಂದ್ರದಲ್ಲಿ ಜೂನ್ 1ರಂದು ಚಾಲನೆ ನೀಡಲಾಯಿತು. ನಗರದ ಬಿಮ್ಸ್ ಕಾಲೇಜಿನಲ್ಲಿ ಜೂನ್ 1ರಂದು ದೀಪ ಬೆಳಗಿಸುವ ಮೂಲಕ ಪಶು ಸಂಗೋಪನೆ, ಹಜ್ ಮತ್ತು ವಕ್ಫ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಬೀದರ ನಗರದಲ್ಲೇ ಕೋವಿಡ್-19 ವೈರಾಣು…
Read More »ಬೀದರ ಜಿಲ್ಲೆಯಿಂದ ಬಿಜೆಪಿಗೆ ಯಾರು ಹೋಗ್ತಾರೆ ಜಾರಕಿಹೊಳಿ ತಿಳಿಸಲಿ: ಶಾಸಕ ಪಾಟೀಲ.
ಬೀದರ ಜಿಲ್ಲೆಯಿಂದ ಬಿಜೆಪಿಗೆ ಯಾರು ಹೋಗ್ತಾರೆ ಜಾರಕಿಹೊಳಿ ತಿಳಿಸಲಿ: ಶಾಸಕ ಪಾಟೀಲ. ಬೀದರ: ಬಿಜೆಪಿ ಸರ್ಕಾರದಲ್ಲಿ ಅಸಮಾಧಾನ ಭುಗಿಲೆದ್ದಿರುವ ಮಧ್ಯದಲ್ಲಿ ಜಾರಕಿಹೊಳಿ ನೀಡಿದ ಹೇಳಿಕೆಗೆ ಹುಮನಾಬಾದ ಶಾಸಕ ರಾಜಶೇಖರ ಪಾಟೀಲ್ ತಿರುಗೇಟು ನೀಡಿದ್ದಾರೆ. ಹುಮನಾಬಾದ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪಾಟೀಲ, ಬೀದರ ಜಿಲ್ಲೆಯಿಂದ ಇಬ್ಬರು ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಜಾರಕಿಹೊಳಿ ಅವರು ಹೇಳಿದ್ದು ಯಾರು ಎಂಬುದು ಅವರೆ ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಬೀದರ ಜಿಲ್ಲೆಯಲ್ಲಿ ನಾಲ್ಕು…
Read More »ಸರ್ಕಾರದ ವಿರುದ್ಧ ಶಾಸಕ ಪಾಟೀಲ ಆಕ್ರೋಶ
ಬೀದರ: ನೆರೆ ರಾಜ್ಯಗಳಿಂದ ಬಂದಿರುವ ಜನರನ್ನು ಸರ್ಕಾರಿ ಕ್ವಾರಂಟೈನ್ ನಲ್ಲಿ ಉಳಿದಿರುವ ಸಂದರ್ಭದಲ್ಲಿ ಅವರ ವರದಿ ಬರುವ ಮುನ್ನವೇ ಮನೆಗೆ ಕಳುಹಿಸಿರುವ ರಾಜ್ಯ ಸರ್ಕಾರದ ಹಾಗೂ ಜಿಲ್ಲಾಡಳಿತದ ನಡೆ ಸರಿಯಲ್ಲ ಎಂದು ಶಾಸಕ ರಾಜಶೇಖರ ಪಾಟೀಲ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಮನಾಬಾದ ಪಟ್ಟಣದ ಕೃಷಿ ಇಲಾಖೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ವಾರಂಟೈನ್ ಕೇಂದ್ರದಿಂದ ಮನೆಗೆ ತೆರಳಿದ ಎರೆಡು ದಿನಕ್ಕೆ ಪಾಸಿಟಿವ್ ವರದಿ ಬಂದಿದೆ . ಆ ಎರೆಡು…
Read More »ಬೀದರ ಜಿಲ್ಲೆಯಲ್ಲಿ ಮತ್ತೆ 13 ಪ್ರಕರಣ ಪತ್ತೆ
ಬೀದರ ಜಿಲ್ಲೆಯಲ್ಲಿ ಮತ್ತೆ 13 ಪ್ರಕರಣ ಪತ್ತೆ ಬೀದರ: ಕೋವಿಡ್-19 ಸೋಂಕು ಬೀದರ್ ಜಿಲ್ಲೆಗೆ ಬಿಟ್ಟುಬಿಡದಂತೆ ಕಾಡುತ್ತಿದ್ದು, ಬುಧವಾರ ಮತ್ತೆ ಜಿಲ್ಲೆಯಲ್ಲಿ 13 ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೆ, ಸೋಂಕಿನ ಲಕ್ಷಣ ಹೊಂದಿದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇದೀಗ ಹೆಲ್ತ್ ಬುಲೆಟನ್ ಪೆ.1712 (49) ವರ್ಷದ ವ್ಯಕ್ತಿ ವಿವಿಧ ರೋಗಗಳಿಂದ ಬಳಲುತ್ತಿರುವ ಕಾರಣದಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಂಡು ಬರುತ್ತಿದ್ದು,…
Read More »ಕೊಹಿನೂರ ಗ್ರಾಮದಲ್ಲಿ 10 ಜನರಿಗೆ ಪಾಸಿಟಿವ್
ಕೊಹಿನೂರ ಗ್ರಾಮದಲ್ಲಿ 10 ಜನರಿಗೆ ಪಾಸಿಟಿವ್ ಬೀದರ: ಮುಂಬೈನಿಂದ ಬಸವಕಲ್ಯಾಣ ತಾಲೂಕಿನ ಕೊಹಿನೂರ ಗ್ರಾಮದಕ್ಕೆ ಬಂದಿದ 10 ಜನರಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 95ಕ್ಕೆ ಏರಿಕೆಯಾಗಿದೆ. ಮುಂಬೈನಿಂದ ಬಂದಿದ ಜನರು ಕೊಹಿನೂರ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮಹಾರಾಷ್ಟ್ರದಿಂದ ಬಂದಿರುವ ಹಿನ್ನೆಲೆಯಲ್ಲಿ ಎಲ್ಲಾ ಜನರ ಮಾದರಿ ಪಡೆದು ಪರೀಕ್ಷೆಗಾಗಿ ಲ್ಯಾಬಿಗೆ ಕಳುಹಿಸಲಾಗಿತ್ತು. ಇದೀಗ ಮಂಗಳವಾರ ವರದಿಬಂದಿದ್ದು, 10 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಸೋಮವಾರ ರಾತ್ರಿ ಅಧಿಕಾರಿಗಳ…
Read More »ಔರಾದ-ಕ್ವಾರಂಟೈನ್ ನಲ್ಲಿದ್ದ ಆತ್ಮಹತ್ಯೆ
ಔರಾದ – ಕ್ವಾರಂಟೈನ್ ನಲ್ಲಿದ್ದ ಆತ್ಮಹತ್ಯೆ ಬೀದರ: ಮುಂಬೈನಿಂದ ಬಂದಿದ ವ್ಯಕ್ತಿಯೊಬ್ಬ ಔರಾದ ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿ ಉಳಿದಿದ್ದು, ಮಂಗಳವಾರ ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 22 ವರ್ಷದ ಯುವಕ ಔರಾದ ತಾಲೂಕಿನ ಮರಪಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತನ್ನ ಪತ್ನಿಯೊಂದಿಗೆ ಕಳೆದ ಎಂಟು ದಿನಗಳಿಂದ ಕ್ವಾರಂಟೈನ್ ನಲ್ಲಿದ್ದ. ಮಂಗಳವಾರ ಮೆಳಿಗ್ಗೆ ಪತ್ನಿ ಸ್ನಾನಕ್ಕೆಂದು ಹೋದಾಗ ವ್ಯಕ್ತಿ ನೇಣಿಗೆ…
Read More »















