ನಿಮ್ಮ ಜಿಲ್ಲೆ
ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಹುಮನಾಬಾದ: ಪಟ್ಟಣದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಭಾನುವಾರ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಸಂಘಟನೆ ಮುಖಂಡ ನವೀನ ಬತಲಿ ಮಾತನಾಡಿ, ಕನ್ನಡ ಕಂಪು ಪಸರಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಕೆಲಸ ಮಾಡುತ್ತಿದೆ. ಕನ್ನಡಿಗರಾದ ನಾವೆಲ್ಲರೂ ನಮ್ಮ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಇತರೆ ಭಾಷೆಗಳ ಬಗ್ಗೆ ಅಭಿಮಾನ ಇರಬೇಕು ಆದರೆ, ಮೊದಲು ಕನ್ನಡ ಭಾಷೆ ಎಂಬುವುದು ನಾವುಗಳು ರೂಡಿಸಿಕೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ಆಯಾ ಭಾಗದ ಮಾತೃ…
Read More »ಕನ್ನಡ ಬರೀ ಭಾಷೆಯಲ್ಲ, ಬದುಕು: ರಾಮಚಂದ್ರನ್ ಆರ್
ಕನ್ನಡ ಬರೀ ಭಾಷೆಯಲ್ಲ, ಬದುಕು: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಬೀದರ : ಕನ್ನಡ ಅಂದರೆ ಬರೀ ಭಾಷೆಯಲ್ಲ, ಅದೊಂದು ಬದುಕು. ನಾವು-ನೀವೆಲ್ಲರೂ ಪ್ರತಿನಿತ್ಯ ಕನ್ನಡವನ್ನೇ ಉಸಿರಾಡುತಿದ್ದೇವೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಹೇಳಿದರು. ನಗರದ ಜಿಲ್ಲಾ ಪೊಲೀಸ್ ಫರೇಡ್ ಮೈದಾನದಲ್ಲಿ ನವೆಂಬರ್ 1ರಂದು ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಅವರು ರಾಜ್ಯೋತ್ಸವ ಸಂದೇಶ ನೀಡಿದರು. ಕರ್ನಾಟಕ ಏಕೀಕರಣ ಚಳುವಳಿಯು, ಕನ್ನಡ ನಾಡಿನ ಚರಿತ್ರೆಯಲ್ಲಿ ಅತ್ಯಂತ…
Read More »ಅಕ್ರಮ ಪಡಿತರ ಅಕ್ಕಿ ಸಾಗಟ : 4 ಲಾರಿ ವಶಪಡಿಸಿಕೊಂಡ ಪೊಲೀಸರು.
ಅಕ್ರಮ ಪಡಿತರ ಅಕ್ಕಿ ಸಾಗಟ : 4 ಲಾರಿ ವಶಪಡಿಸಿಕೊಂಡ ಪೊಲೀಸರು. ಬೀದರ: ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರಲ್ಲಿ 40ಲಕ್ಷ ಮೌಲ್ಯದ ಅಕ್ರಮವಾಗಿ 120ಟನ್ ಪಡಿತರ ಅಕ್ಕಿ ಸಾಗಟ ಮಾಡುತ್ತಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ಅಕ್ಕಿ ತುಂಬಿದ ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡಿದೆ. 9 ಯಾದಗಿರಿ ಜಿಲ್ಲೆ ಗಯರಮಿಠಕಲ್ ನಿಂದ ಲೋಡಾಗಿ ಗುಜರಾತ್ ತೆರಳುತ್ತಿದ್ದ ಲಾರಿಗಳ ಕುರಿತು ಬಸವಕಲ್ಯಾಣ ಪೊಲೀಸರು ಖಚಿತ ಮಾಹಿತಿ ಮೇರೆಗೆ…
Read More »ಬಿಎಸ್ಎಸ್ಕೆ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ
ಬಿಎಸ್ಎಸ್ಕೆ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ಬೀದರ: ಹುಮನಾಬಾದ ತಾಲೂಕಿನ ಹಳ್ಳಿಖೇಡ(ಬಿ) ಬಿಎಸ್ಎಸ್ಕೆ (ಬೀದರ ಸಹಕಾರ ಸಕ್ಕರೆ ಕಾರ್ಖಾನೆ)ಯ ೧೩ ಸ್ಥಾನಕ್ಕೆ ನಡೆಯಬೇಕಿದ ಚುನಾವಣೆಗೆ ಕಲಬುರಗಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಕುರಿತು ಹೈಕೋರ್ಟ್ ಹಿರಿಯ ವಕೀಲ ಗೋರಿಶಂಕರ ಖಾಶೆಂಪುರ್ ಪ್ರತೀಕ್ರೀಯೆ ನೀಡಿದ್ದು, ಸಕ್ಕರೆ ಕಾರ್ಖಾನೆಯ ಞನಾವಣೆಯಲ್ಲಿ ಮತದಾರರ ಹಕ್ಕು ಕಸಿದುಕೊಂಡು ಚುನಾವಣೆ ನಡೆಸುವುದು ಸೂಕ್ತ ಅಲ್ಲ , ಕಾರಣ ನ್ಯಾಯಾಲಯದಲ್ಲಿ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಮನವಿ ಸಲ್ಲಿಸಿದ್ದು, ನ್ಯಾಯಾಧೀಶರು ತಡೆಯಾಜ್ಞಾನೆ…
Read More »ಶಿಕ್ಷಕನ ಮನೆ ಕಳ್ಳತನ ಮಾಡಿದ ಆರೋಪಿ ಬಂಧನ
ಶಿಕ್ಷಕನ ಮನೆ ಕಳ್ಳತನ ಮಾಡಿದ ಆರೋಪಿ ಬಂಧನ ಬೀದರ: ಹುಮನಾಬಾದ ಪಟ್ಟಣದಲ್ಲಿ ಶಿಕ್ಷಕನ ಮನೆಯೊಂದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಕಳ್ಳನೊಬ್ಬನನ್ನು ಬಂಧಿಸಿ 10.01 ತೊಲ ಬಂಗಾರದ ಆಭರಣ ಹಾಗೂ 30 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. 15-10-2020ರಂದು ರಾತ್ರಿ ಪಿಡಬ್ಲೂಡಿ ವಸತಿ ಗೃಹದನಲ್ಲಿದ ಶಿಕ್ಷಕ ಮನೋಹರ ಸಂಗಪ್ಪ ಪೂಜಾರಿ ಮನೆ ಕಳ್ಳತನ ನಡೆದಿತ್ತು. ಮನೆಯ ಕಿಟಕಿ ಮುರಿದು ಕಳ್ಳತನ ಮಾಡಲಾಗಿತ್ತು. ಮನೆಯಲ್ಲಿದ 10.01 ತೊಲೆ ಬಂಗಾರ ಹಾಗೂ…
Read More »ನವರಾತ್ರಿ ಉತ್ಸವ: ದೇವಿಗೆ ವಿಶೇಷ ಪೂಜೆ
ನವರಾತ್ರಿ ಉತ್ಸವದ ಪ್ರಯುಕ್ತ ಪಟ್ಟಣದ ಐತಿಹಾಸಿಕ ಭವಾನಿ ಮಂದಿರದಲ್ಲಿ ಸಿಂಹಾರೂಢ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಗರ್ಭಗುಡಿಯಲ್ಲಿ ಘಟಸ್ಥಾಪನೆ ಮಾಡಿ ಒಂಬತ್ತು ದಿನಗಳು ನಿತ್ಯ ಮುಂಜಾನೆ, ರಾತ್ರಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಿತ್ಯ ಒಂದೊಂದು ರೀತಿಯಲ್ಲಿ ದೇವಿ ಮೂರ್ತಿಗೆ ಅಲಂಕಾರ ಮಾಡಲಾಗುತ್ತದೆ. ‘ಈ ಬಾರಿಯ ಕೊವೀಡ್ ಪರಿಣಾಮ ಯಾವುದೇ ಉತ್ಸವ, ಮೆರವಣಿಗೆ, ಸಭೆ ಸಮಾರಂಭಗಳು ಒಂಬತ್ತು ದಿನಗಳ ವರೆಗೆ ದಸರಾ ಉತ್ಸವ ಸಮಿತಿಯಿಂದ ನಡೆಸುತ್ತಿಲ್ಲ. ಸರಳವಾಗಿ ಶರನ್ನವರಾತ್ರಿ ಆಚರಿಸುತ್ತಿದ್ದು, ಎಲ್ಲವೂ…
Read More »ಮಳೆಯ ಅಬ್ಬರಕ್ಕೆ ಉಕ್ಕಿ ಹರಿಯುತ್ತಿರೋ ನದಿ, ಹಳ್ಳಕೊಳ್ಳಗಳು- ಜನ ಜೀವನ ಅಸ್ತವ್ಯಸ್ತ
ಮಳೆಯ ಅಬ್ಬರಕ್ಕೆ ಉಕ್ಕಿ ಹರಿಯುತ್ತಿರೋ ನದಿ, ಹಳ್ಳಕೊಳ್ಳಗಳು- ಜನ ಜೀವನ ಅಸ್ತವ್ಯಸ್ತ ಹುಮನಾಬಾದ: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತವಾಗಿತ್ತದೆ. ಬೀದರ ಜಿಲ್ಲೆಯಲ್ಲಿ ಕೂಡ ಮಳೆಯಿಂದ ಅನೇಕ ನದಿಗಳು ತುಂಬಿ ಹರಿಯುತ್ತಿವೆ. ಕಳೆದ ಎರಡು ದಿನಗಳಿಂದ ಅಬ್ಬರದ ಮಳೆ ಸುರಿಯುತ್ತಿದೆ. ಹುಮನಾಬಾದ ತಾಲೂಕಿನ ಕಾರಂಜಾ ಜಲಾಶಯದ ಹಿನ್ನಿರಿನಲ್ಲಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಮಾಣಿಕನಗರ-ಹುಮನಾಬಾದ, ಚಿಟಗುಪ್ಪ ಉಡಬಾಳ ಸೇರಿದಂತೆ ವಿವಿಧಡೆ ಮಳೆ ನೀರಿನಿಂದ ವಾಹನ ಸಂಚಾರ ಬಂದ್…
Read More »ಭಾರಿ ಮಳೆ ಸಾಧ್ಯತೆ: ಬೀದರ ಜಿಲ್ಲೆಯಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ
ಭಾರಿ ಮಳೆ ಸಾಧ್ಯತೆ: ಬೀದರ ಜಿಲ್ಲೆಯಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ ಬೀದರ: ಬೀದರ ಸೇರಿದಂತೆ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಬೀದರ ಜಿಲ್ಲೆಯಲ್ಲಿ ಅಕ್ಟೋಬರ್ 13ರಿಂದ ಮುಂದಿನ 48 ಗಂಟೆಗಳ ಅವಧಿಯಲ್ಲಿ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಅಕ್ಟೋಬರ್ 13ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ತುರ್ತು ಸಭೆ ನಡೆಸಿದರು.…
Read More »ಆಹಾರ ನಿಗಮ ಉತ್ತಮ ಕಾರ್ಯ ನಿರ್ವಹಿಸುತ್ತಿದೆ : ಉಮೇಶ ಬಿರಬಿಟ್ಟೆ ಅಟ್ಟೂರ್
ದೇಶದಲ್ಲಿ ಆಹಾರ ನಿಗಮ ಉತ್ತಮ ಕಾರ್ಯ ನಿರ್ವಹಿಸುತ್ತಿದೆ : ಉಮೇಶ ಬಿರಬಿಟ್ಟೆ ಅಟ್ಟೂರ್ ಬಸವಕಲ್ಯಾಣ: ದೇಶದಲ್ಲಿನ ಬಡವರಿಗೆ ಉಚಿತ ಆಹಾರ ಧಾನ್ಯ ಒದಗಿಸುವ ನಿಟ್ಟಿನಲ್ಲಿ ಭಾರತೀಯ ಆಹಾರ ನಿಗಮ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಭಾರತೀಯ ಆಹಾರ ನಿಗಮ ಸದಸ್ಯ ಉಮೇಶ ಬಿತಬಿಟ್ಟೆ ಅಟ್ಟೂರ್ ಹೇಳಿದರು. ನಗರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸರಕಾರ ಪಡಿತರ ವಿತರಕರ ಸಂಘದ ತಾಲೂಕು ಸಮಿತಿ ವತಿಯಿಂದ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು…
Read More »ಅರಣ್ಯ ಪ್ರದೇಶದಲ್ಲಿ 212 ಗಾಂಜಾಗಿಡ ಪತ್ತೆ
ಅರಣ್ಯ ಪ್ರದೇಶದಲ್ಲಿ 212 ಗಾಂಜಾಗಿಡ ಪತ್ತೆ ಹುಮನಾಬಾದ: ತಾಲೂಕಿನ ಭದ್ರಾಪುರ ಗ್ರಾಮದ ಹೊರವಲಯದಲ್ಲಿನ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಾಂಜಾ ಗಿಡಗಳು ಬೆಳೆದಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಅರಣ್ಯ ಪ್ರದೇಶದ ಗುಡಗಾಡು ಭಾಗದಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿಕೊಂಡವರು ತೊಗರಿ ಬೆಳೆ ಜೊತೆಗೆ ಗಾಂಜಾ ಗಿಡಗಳು ಬೆಳೆಸು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 212 ಗಿಡಗಳು ಪತ್ತೆಯಾಗಿದ್ದು, 22.5 ಕೆ.ಜಿ…
Read More »


















