ಹುಮನಾಬಾದ – ಬಾಲಕಿ ನಾಪತ್ತೆ
ಬೀದರ: ಹುಮನಾಬಾದ ತಾಲೂಕಿನ ಗಡವಂತಿ ಗ್ರಾಮದಿಂದ ಪೂಜಾ ತುಕಾರಾಮ ಭೋವಿ (16 ವರ್ಷ) ಎಂಬ ಬಾಲಕಿಯು 2019ರ ನವೆಂಬರ್ 29ರಿಂದ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಬಾಲಕಿಯ ಪೋಷಕರು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾದವರು ದುಂಡು ಮುಖ, ದೃಢವಾದ ಮೈಕಟ್ಟು, ಕಪ್ಪು ಮೈಬಣ್ಣ, ತಲೆಯ ಮೇಲೆ ಕಪ್ಪು ಕೂದಲು, ಎಡ ಕಿವಿಯ ಮೇಲೆ ಹಳೆಯ ಗಾಯ ಇರುತ್ತದೆ. ನೀಲಿ ಬಣ್ಣದ ಒಳಗೆ ಹೂವಿನ ಡಿಸೈನ್ ಇರುವ ಚೂಡಿದಾರ ಮತ್ತು ಪೈಜಾಮ ಧರಿಸಿರುತ್ತಾರೆ. ಕನ್ನಡ, ಹಿಂದಿ ಮತ್ತು ತೆಲುಗು ಮಾತನಾಡುತ್ತಾಳೆ.
ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಬೀದರ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ: 08482-226704/100, ಪೊಲೀಸ್ ಉಪಾಧೀಕ್ಷಕರು ಹುಮನಾಬಾದ: 08483-270028, ಪೊಲೀಸ್ ವೃತ್ತ ನಿರೀಕ್ಷಕರು ಹುಮನಾಬಾದ ವೃತ್ತ:08483-270159, ಪೊಲೀಸ್ ಉಪ ನಿರೀಕ್ಷಕರು ಹುಮನಾಬಾದ ಪೊಲೀಸ್ ಠಾಣೆ:08483-270033ಗೆ ಸಂಪರ್ಕಿಸಬಹುದು ಎಂದು ಹುಮನಾಬಾದ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
Date: 19-12-2019 Time:6:00PM
ಕಲಬುರಗಿ: ವಿದ್ಯುತ್ ಅವಘಡಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಿ
*ಮುನ್ನೆಚ್ಚರಿಕೆ ವಹಿಸಿ; ವಿದ್ಯುತ್ ಅವಘಡ ತಪ್ಪಿಸಿ* *ಮಳೆಗಾಲ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುರಕ್ಷತಾ …


















